ವಿಜಯನಗರ ಜಿಲ್ಲೆ ಕೂಡ್ಲಿಗಿ:ಕೂಡ್ಲಿಗಿ ಹಾಗೂ ಕೊಟ್ಟರು ತಾಲೂಕಿನಲ್ಲಿ, ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ, ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ. ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ,ಪ್ರವರ್ಗ-1,2ಎ,2ಬಿ,3ಎ,3ಬಿ. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಗಳಿಗೆ ಸೇರಿದ, 5ರಿಂದ10ನೇ ತರಗತಿಯ ವಿದ್ಯಾರ್ಥಿಗಳಿಂದ 2023-24ನೇ ಸಾಲಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೂಡ್ಲಿಗಿ ತಾಲೂಕು ಇಲಾಖಾಧಿಕಾರಿ ಕೆ.ಪಂಪಾಪತಿ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಜೂನ್ 15 ಆಗಿರುತ್ತದೆ.
ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ ಪ್ರವರ್ಗ-1, ಎಸ್ ಸಿ ಮತ್ತು ಎಸ್ಟಿ ಯವರಿಗೆ 1ಲಕ್ಷ ₹. ಪ್ರವರ್ಗ-2ಎ,2ಬಿ. 3ಎ,3ಬಿ, ಹಾಗೂ ಹಿಂದುಳಿದ ವರ್ಗ ಮತ್ತು ಇತರೆ ಜಾತಿ ಯವರು. 44.500₹ ವಾರ್ಷಿಕ ಆದಾಯ ಮಿತಿ ನಿಗದಿ ಗೊಳಿಸಲಾಗಿದೆ. ಆನ್ ಲೇನ್ ನಲ್ಲಿ https://shp.karnataka.gov.in/ನ್ನು ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೂಡ್ಲಿಗಿ ತಾಲೂಕು ಕೇಂದ್ರದಲ್ಲಿರುವ ಹಿಂದುಳಿದ ವರ್ಗಗಳ, ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಸಂಪರ್ಕಿಸಬಹುದು. ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆ:08391 220583 ಮೂಲಕ ಸಂಪರ್ಕಿಸಬಹುದಾಗಿದೆ, ಎಂದು ಜಿಸಿಎಮ್. ಇಲಾಖೆಯ ತಾಲೂಕು ಅಧಿಕಾರಿ ಕೆ.ಪಂಪಾಪತಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*