ಅಲೌಕಿಕ ಹಾಗೂ ದಿವ್ಯವೆನಿಸುವ ತ್ರಿಶೂಲ ಹಾಗೂ ವಜ್ರಾಯುಧವನ್ನು ಅನಾವರಣಗೊಳಿಸಿದ ಸಂಶೋಧಕ ಸೈಯದ್ ಶಮೀರ್ ಹುಸೈನ್

varthajala
0

ಸನಾತನ ಧರ್ಮದ ಯುಗ ಯುಗಾಂತರಗಳ ಅಸ್ತಿತ್ವವನ್ನು ಹಾಗೂ  ಪುರಾಣಗಳಲ್ಲಿ ಉಲ್ಲೇಖಿಸಲಾದ ಅಸ್ತ್ರ ಶಸ್ತ್ರಗಳಾದ ಪರಮೇಶ್ವರನ ತ್ರಿಶೂಲ ಹಾಗೂ ದೇವರಾಜ ಇಂದ್ರನ ವಜ್ರಾಯುಧ ಎಂದು ನಂಬಲಾಗಿರುವ, ಅಪರೂಪದ ವಿನ್ಯಾಸವನ್ನು ಹೊಂದಿರುವ ಲೋಹದಿಂದ ನಿರ್ಮಿತವಾದ ಅತ್ಯಂತ ಪುರಾತನವಾದ ಆಯುಧಗಳು ಎನ್ನಲಾಗುತ್ತಿರುವ, ನಮ್ಮ ಭಾರತೀಯ ಮೂಲದ ಅದರಲ್ಲೂ ಕರ್ನಾಟಕದವರೇ.

ಉದ್ಯಮಿಗಳು ಹಾಗೂ ಸಂಶೋಧಕರು ಆಗಿರುವ ಸೈಯದ್ ಶಮೀರ್ ಹುಸೈನ್ ರವರಿಗೆ, ಫಿಲಿಪ್ಪೈನ್ಸ್ ದೇಶದಲ್ಲಿ ಅಲ್ಲಿನ ಸರ್ಕಾರದಿಂದ ಗಾಣಿಗರಿಕೆಗೆ ಅನುಮತಿ ಪಡೆದು, ಗುತ್ತಿಗೆ ಆಧಾರದಲ್ಲಿ ಕೊಡ ಮಾಡಲಾದ ಜಾಗದಲ್ಲಿ ಗಣಿಗಾರಿಕೆಯನ್ನು ನಡೆಸುವ ವೇಳೆ 2015 ರಲ್ಲಿ  ದೊರೆತಿರುವಂತಹ ಬೆಲೆಕಟ್ಟಲಾಗದ, ದರುಶನ ಮಾತ್ರದೀ ಅಲೌಕಿಕ ದಿವ್ಯ ಶಕ್ತಿ ಸಂಪನ್ನಭರಿತವಾದದ್ದು ಎಂಬಂತಹ ಅನುಭೂತಿಯನ್ನು ಮೂಡಿಸುವಂತಹ ಈ ಎರಡೂ ವಸ್ತುಗಳನ್ನು ವಿದೇಶಿ ನೆಲದಿಂದ, ನಮ್ಮೆಲ್ಲರ ಪುಣ್ಯಭೂಮಿ ತಾಯಿನಾಡು ಭಾರತ ದೇಶಕ್ಕೆ ತಂದು, ವಿಶ್ವದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ, ಭಾರತೀಯ  ಪುರಾತತ್ವ ಇಲಾಖೆಯ ಅನುಮತಿಯ ಮೇರೆಗೆ ಉದ್ಯಮಿ, ಸಂಶೋಧಕ ಸಯ್ಯದ್ ಸಮೀರ್ ಹುಸೇನ್ ಅವರು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 8-6-2023 ಗುರುವಾರದಂದು ಅನಾವರಣವನ್ನು ಮಾಡಿ ಜಗತ್ತಿಗೆ ಮಾಧ್ಯಮಗಳ ಮೂಲಕ ಆ ದಿವ್ಯ ಶಸ್ತ್ರಗಳ ದರ್ಶನ ಮಾಡಿಸಿದರು.

Post a Comment

0Comments

Post a Comment (0)