ಸಿಬ್ಬಂದಿ ಆಯ್ಕೆ ಆಯೋಗದ ನೇಮಕಾತಿ ಪರೀಕ್ಷೆ ಜಾಗೃತಿ ಅಭಿಯಾನ

varthajala
0

ಸಿಬ್ಬಂದಿ ಆಯ್ಕೆ ಆಯೋಗವು(Staff Selection Commission) ನಡೆಸುತ್ತಿರುವ ಪರೀಕ್ಷೆಗಳಲ್ಲಿ(ಕೇಂದ್ರ ಸರ್ಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ) ಕರ್ನಾಟಕದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಅದಕ್ಕೆ ಕಾರಣ ಕನ್ನಡ ಯುವಕರಿಗೆ ಮಾಹಿತಿಯಿಲ್ಲದಿರುವುದೇ ಆಗಿದೆ ಎಂದು ಕನ್ನಡ ಗೆಳೆಯರ ಬಳಗವು ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕ ಎಸ್.ಎನ್.ಗಿರೀಶ್, ಐ.ಎ.ಎಸ್. ಅವರನ್ನು ಕಂಡು ತಿಳಿಸಿತ್ತು. ಅದಕ್ಕೆ ಅವರು ಕಾಲೇಜುಗಳಲ್ಲಿ ಸಿಬ್ಬಂದಿ ಆಯ್ಕೆ ಆಯೋಗವು ನಡೆಸುವ ನೇಮಕಾತಿ ಪರೀಕ್ಷೆಗಳ ಬಗ್ಗೆ ಜಾಗೃತಿ ಅಭಿಯಾನವನ್ನು ನಡೆಸುವುದಾಗಿ ತಿಳಿಸಿದ್ದರು. ಕನ್ನಡಿಗರೇ ಆದ ಆಯೋಗದ ನಿರ್ದೆಶಕ ಎಸ್.ಎನ್.ಗಿರೀಶ್ ಅವರು ಅದನ್ನು ಅನುಷ್ಠಾನಕ್ಕೆ ಗೊಳಿಸಿದ್ದಾರೆ.

 

           2023ರ ಜೂನ್ 21-22ರಂದು ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದಲ್ಲಿ ‘ಸಿಬ್ಬಂದಿ ಆಯ್ಕೆ ಆಯೋಗದ ನೇಮಕಾತಿ ಪರೀಕ್ಷೆ ಜಾಗೃತಿ ಅಭಿಯಾನ’ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಕನ್ನಡ ಚಿಂತಕ ರಾ.ನಂ. ಚಂದ್ರಶೇಖರ ಕನ್ನಡದಲ್ಲಿ ಸಿಬ್ಬಂದಿ ಆಯ್ಕೆ ಆಯೋಗವು ನಡೆಸುವ ಪರೀಕ್ಷೆಗಳು, ಪರೀಕ್ಷೆಯನ್ನು ತೆಗೆದುಕೊಳ್ಳುವುದು ಹೇಗೆ, ಪರೀಕ್ಷೆಯ ಮಾದರಿ, ಸಿದ್ದತೆ ಮುಂತಾದ ವಿವರಗಳನ್ನು ನೀಡಿ ಈಗ ಆಯೋಗವು ನಡೆಸುವ ಪರೀಕ್ಷೆಗಳು ಹಿಂದಿ, ಇಂಗ್ಲಿಷ್ ಜೊತೆಗೆ ಕನ್ನಡವೂ ಸೇರಿದಂತೆ 15 ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಿದೆ. ಈ ಅವಕಾಶವನ್ನು ಕನ್ನಡ ಯುವಕರು ಬಳಸಿಕೊಳ್ಳಬೇಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ತೆಗೆದುಕೊಳ್ಳಬೇಕು ಎಂದು ಹೇಳಿದರು. ಪ್ರತಿ ವರ್ಷ ಆಯೋಗವು ಎಸ್.ಎಸ್.ಎಲ್.ಸಿ ಯಿಂದ ಪದವಿಯವರಗೆ ಸುಮಾರು 1ಲಕ್ಷ ಕೇಂದ್ರ ಸರ್ಕಾರದ ನೇಮಕಾತಿಗೆ ಪರೀಕ್ಷೆ ನಡೆಸುತ್ತಿದೆ. ಉದ್ಯೋಗ ಗಳಿಸುವ ಕನ್ನಡಿಗರ ಸಂಖ್ಯೆ 2000 ಸಾವಿರಕ್ಕಿಂತ ಕೆಳಗಿದೆ ಎಂದರು.

 

           ಉಪನ್ಯಾಸದ ನಂತರ ಆಯೋಗದ ಅಧಿಕಾರಿ ಅಭಿಲಾಶ್ ತಾರಕ ಅವರು ಸಿಬ್ಬಂದಿ ಆಯೋಗ ನಡೆಸುವ ಪರೀಕ್ಷೆಗಳ ಬಗ್ಗೆ ಸಮಗ್ರ ವಿವರವನ್ನು ಸ್ಲೆöÊಡ್‌ಗಳ ಮೂಲಕ ಸಾದರ ಪಡಿಸಿದರು. ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ(ರಿಜಿಸ್ಟಾರ್), ಡಾ. ರಾಮಕೃಷ್ಣರೆಡ್ಡಿ, ಆಡಳಿತ ಕುಲಸಚಿವರಾದ ಡಾ. ಕೆ.ಆರ್. ಕವಿತಾ, ನಿಯೋಜನ ಕೋಶದ(ಪ್ಲೇಸ್‌ಮೆಂಟ್ ಸೆಲ್) ಸಂಚಾಲಕಿ ಡಾ. ಆರ್. ಸುಮಿತ್ರ ಮತ್ತು ಕಾರ್ಯಕ್ರಮ ಸಂಯೋಜಕಿ ಸರಿನಾ ಪಿ. ಕಬಾಡೆ ಮತ್ತು ಎರಡೂ ದಿನ ಸುಮಾರ 200 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನೆಲಮಂಗಲದ ಸರ್ಕಾರಿ ರೂರಲ್ ಕಾಲೇಜು, ಸರಕಾರಿ ರಾಮನಾರಾಯಣ್ ಕಾಲೇಜುಗಳಲ್ಲಿ ಜಾಗೃತಿ ಅಭಿಯಾನ ನಡೆದಿದೆ. ಕರ್ನಾಟಕದಲ್ಲಿರುವ ಕಾಲೇಜುಗಳು ಎಸ್.ಎಸ್.ಸಿ ನಡೆಸುತ್ತಿರುವ ಈ ನೇಮಕಾತಿ ಜಾಗೃತಿ ಅಭಿಯಾನವನ್ನು ನಡೆಸು ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗದ ಸಾಧ್ಯತೆ ತೀಳಿಯಲು ನೆರವಾಗಬೇಕು ಎಂದು ಆಯೋಗದ ನಿರ್ದೇಶಕರು ಮನವಿ ಮಾಡಿದ್ದಾರೆ.


Post a Comment

0Comments

Post a Comment (0)