ಬೆಂಗಳೂರು, ಜೂನ್ 21 (ಕರ್ನಾಟಕ ವಾರ್ತೆ):
ಯೋಗವು ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿ ಮತ್ತು ಆಚರಣೆಗಳಲ್ಲಿ ಮಿಳಿತಗೊಂಡಿದೆ. ಇಂದು ಇಡೀ ಪ್ರಪಂಚದ ಭಾಗವಾಗಿರುವ ನಮ್ಮ ಗ್ರಂಥಗಳಲ್ಲಿ ಯೋಗದ ಮಹತ್ವವನ್ನು ಉಲ್ಲೇಖಿಸಲಾಗಿದೆ, ಅದಕ್ಕಾಗಿಯೇ ಭಾರತವನ್ನು ವಿಶ್ವದ ಯೋಗ ಗುರು ಎಂದು ಕರೆಯಲಾಗುತ್ತದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
9ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯುಷ್ಯ ಇಲಾಖೆ ಇಂದು ವಿಧಾನಸೌಧದ ಮುಂಬಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ "ಯೋಗ-ವಸುದೈವ ಕುಟುಂಬಕ್ಕಾಗಿ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯಕರ ಜೀವನಕ್ಕಾಗಿ ಯೋಗ ಅವಶ್ಯಕವಾಗಿದೆ ಎಂದರು.
ಜನರನ್ನು ಪ್ರೇರೇಪಿಸಬೇಕೆಂದು ಮನವಿ ಮಾಡಿದರು.
ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ, ಆರೋಗ್ಯ ಮತ್ತು ಬಲಿಷ್ಠ ಸಮಾಜಕ್ಕಾಗಿ ಯೋಗ ಅಗತ್ಯವಾಗಿದೆ. ನಮ್ಮ ಋಷಿಮುನಿಗಳು ನೀಡಿರುವ ಈ ಯೋಗವನ್ನು ಉಳಿಸಿಕೊಳ್ಳುವುದು ನಮ್ಮ ಜವಬ್ಧಾರಿ, ಮಾನಸಿಕ ಒತ್ತಡ ಎಲ್ಲ ರೋಗಗಳ ಮೂಲ, ಯೋಗ ಅದಕ್ಕೆ ಮದ್ದು ಎಂದು ಹೇಳಿದರು.
ಪ್ರಸ್ತುತ ವಿವಿಧ ರೀತಿಯ ಯೋಗಗಳು ವಿವಿಧ ಹೆಸರಿನಲ್ಲಿ ಚಾಲ್ತಿಯಲ್ಲಿದ್ದು, ಅವುಗಳ ಬಗ್ಗೆ ಸರ್ಕಾರ ಗಮನಹರಿಸಿ ಅದಕ್ಕೊಂದು ಮಾನ್ಯತೆ ಹೊಂದಿದೆ ಪಠ್ಯಪುಸ್ತಕದ ರೂಪ ನೀಡಬೇಕು, ಯೋಗಕ್ಕೊಂದು ಅಧಿಕೃತ ಸಿಲಬಸ್ ಮಾಡಿ ಅದಕ್ಕೊಂದು ಮಾನ್ಯತೆ ನೀಡಿ ಸರ್ಕಾರದಿಂದ ನಿರ್ಧಿಷ್ಟ ರೂಪ ನೀಡಬೇಕು ಎಂದು ಆರೋಗ್ಯ ಸಚಿವರಲ್ಲಿ ಮನವಿ ಮಾಡಿದರು. ಎಲ್ಲರಿಗೂ ಯೋಗದಿನದ ಶುಭಾಶಯಗಳನ್ನು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಅವರು ಮಾತನಾಡಿ, ಸಾವಿರಾರು ವರ್ಷಗಳಿಂದ ಯೋಗ ನಮ್ಮ ಸಂಪ್ರದಾಯದ ಭಾಗವಾಗಿದೆ, ವಿಶ್ವಕ್ಕೆ ಯೋಗದ ಕೊಡುಗೆ ನಮ್ಮ ಹೆಮ್ಮೆ. ಇತ್ತೀಚಿಗೆ ಜಗತ್ತಿಗೆ ಯೋಗದ ಅರಿವಾಗಿದೆ ಮತ್ತು ಬೇಡಿಕೆ ಹೆಚ್ಚಿದೆ, ಯೋಗ ಚುರುಕುತನವನ್ನು ಹೆಚ್ಚಿಸುತ್ತದೆ, ಮಾನಸಿಕವಾಗಿ ಆರೋಗ್ಯವಾಗಿಡುತ್ತದೆ. ಇತ್ತೀಚಿನ ಹೊಸ ರೋಗಗಳಿಗೆ ಯೋಗ ಮದ್ದು, ಬದುಕಿನ ಶೈಲಿ, ಆಹಾರ ಬದಲಾಗಿದೆ, ಮಾಲಿನ್ಯ ಹೆಚ್ಚಾಗಿದೆ. ಯೋಗ ಅಭ್ಯಾಸ ಮಾಡಿದವರಿಗೆ ಮನಸ್ಸು ಮತ್ತು ದೇಹ ಹತೋಟಿಯಲ್ಲಿರುತ್ತದೆ. ಯೋಗವನ್ನು ಸರ್ಕಾರದಿಂದ ಪೆÇ್ರೀತ್ಸಾಹಿಸಲಾಗುತ್ತದೆ, ಜನರು ನಿತ್ಯ ಜೀವನದಲ್ಲಿ ಯೋಗವನ್ನು ಅಭ್ಯಾಸವಾಗಿ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಿಜ್ವಾನ್ ಅರ್ಷದ್ ಅವರು, ಈ ದಿನ ಮೊದಲ ಬಾರಿ ಯೋಗ ಮಾಡಿದ್ದೇನೆ, ಇಂದು ಯೋಗ ಮಾಡಿದ ನಂತರ ನನಗೆ ಅರಿವಾಗಿದೆ ಇದನ್ನು ಮುಂದುವರೆಸಬೇಕೆಂದು, ಯೋಗ ಸಾವಿರಾರು ವರ್ಷಗಳಿಂದ ನಮ್ಮ ಸಂಸ್ಕೃತಿಯ ಭಾಗವಾಗಿದೆ, ಯೋಗ ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ. ಯೋಗ ಸಾವಿರಾರು ವರ್ಷಗಳಿಂದ ಜನಪ್ರಿಯತೆ ಹೊಂದಿದೆ, ನಮ್ಮ ಸಂಸ್ಕೃತಿ ಭಾಗವಾಗಿದೆ. ಸಾರ್ವಜನಿಕರು ಯೋಗದ ಕಡೆ ನಡೆಯುವ ಮೂಲಕ ತಮ್ಮ ಜೀವ ಮತ್ತು ಜೀವನವನ್ನು ಆರೋಗ್ಯವಾಗಿಟ್ಟುಕೊಳ್ಳೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶರವಣ, ಕ್ರೀಡಾಪಟುಗಳಾದ ವೆಂಕಟೇಶ್ ಪ್ರಸಾದ್, ಅಂಜು ಬಿ ಜಾರ್ಜ್, ಚಲನಚಿತ್ರ ನಟಿ ಭಾವನ, ಆಯುμï ಇಲಾಖೆಯ ಕಾರ್ಯದರ್ಶಿ ಟಿ ಅನಿಲ್ ಕುಮಾರ್, ಆಯುಕ್ತರಾದ ಜೆ ಮಂಜುನಾಥ್, ಶ್ವಾಸಗುರು ಖ್ಯಾತಿಯ ಶ್ರೀ ವಚನಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.