SJB ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವರ್ಚಸ್ವ-23 ಹೆಸರಿನಲ್ಲಿ ಅಂತರ ಕಾಲೇಜ್ ಕ್ರೀಡಾ ಮತ್ತು ಸಾಂಸ್ಕೃತಿಕ ಫೆಸ್ಟ್ ಆಯೋಜನೆ ಮಾಡಿತ್ತು. ಸುಮಾರು 60 ಕಾಲೇಜ್ ವಿಧ್ಯಾರ್ಥಿಗಳು ಭಾಗವಹಿಸಿದ್ದರು.
ಆದಿಚುಂಚನಗಿರಿ ಮಠಾಧೀಶ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ಉದ್ಘಾಟನೆ ಮಾಡಿದರು.
ಡಾ.ಪ್ರಕಾಶನಾಥ ಸ್ವಾಮೀಜಿ, ಸಚಿವ ಶರಣಪ್ರಕಾಶ್ ಪಾಟೀಲ್, ನಿರ್ಮಾಪಕ ಉಮಾಪತಿ ಗೌಡ, ಸಂಸದ ತೇಜಸ್ವಿ ಸೂರ್ಯ, ನಟಿಯರಾದ ಸಪ್ತಮಿ ಗೌಡ, ಅದ್ವಿತಿ ಶೆಟ್ಟಿ, ರೂಪಾ ಅಯ್ಯರ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದ ವಿಲಾಸ್ ನಾಯಕ್ ಅವರ ಚಿತ್ರ ಪ್ರದರ್ಶನ ಹಾಗೂ ಅದ್ವಿತಿ ಶೆಟ್ಟಿ ಅವರ ನೃತ್ಯ ಕಾರ್ಯಕ್ರಮ ವಿಧ್ಯಾರ್ಥಿಗಳನ್ನು ಮಂತ್ರಮುಗ್ಧಗೊಳಿಸಿತು.
ನಂತರ ನಡೆದ ಸ್ಪರ್ಧೆಯಲ್ಲಿ PUBG, ಫ್ಯಾಷನ್ ಶೋ ಗಳು, ಚಿತ್ರಕಲೆ, ಮಿನಿ ಕ್ರಿಕೆಟ್, ವಾಲಿಬಾಲ್, ಸಾಕರ್, ಬಾಸ್ಕೆಟ್‌ಬಾಲ್ ಮುಂತಾದವುಗಳಲ್ಲಿ ವಿಧ್ಯಾರ್ಥಿಗಳು ಭಾಗವಹಿಸಿದರು.
ವರ್ಚಸ್ವ-23 ವಿಧ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಕಾರಣವಾಗುತ್ತದೆ ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.
ಕೇವಲ ಅಂಕ ಗಳಿಕೆ ಮಾತ್ರ ಮಾನದಂಡ ಆಗಬಾರದು. ಸಾಂಸ್ಕೃತಿಕ ಹಾಗೂ ಸಂಸ್ಕಾರದ ಶಿಕ್ಷಣವೂ ಅತೀ ಅಗತ್ಯ ಎಂದು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
BGS ಶಿಕ್ಷಣ ಸಂಸ್ಥೆಗಳ MD ಕಾರ್ಯಕ್ರಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು.