‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಅಂದರೆ ಕಲ್ಯಾಣಕಾರಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’
ಇಂದು ನಾವು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ; ಆದರೆ ಈ ೭೫ ವರ್ಷದಲ್ಲಿ ಭಾರತವು ‘ಸ್ವ’ ತಂತ್ರ ಅರ್ಥಾತ್ ತನ್ನ, ಎಂದರೆ ಭಾರತೀಯ ತಂತ್ರದ ಅಭಾವವನ್ನೇ ಅನುಭವಿಸಿದೆ. ವೇಶಭೂಷಣ, ಕಾನೂನು, ಖಾದ್ಯ ಸಂಸ್ಕೃತಿ, ಆಚಾರ, ಶಿಕ್ಷಣ, ನ್ಯಾಯ ವ್ಯವಸ್ಥೆ, ಆಡಳಿತ ವ್ಯವಸ್ಥೆ ಮುಂತಾದ ವಿಭಿನ್ನ ಕ್ಷೇತ್ರಗಳಲ್ಲಿ, ಅಥವಾ ಅದಕ್ಕಿಂತಲೂ ಭಾರತೀಯರ ವೈಯಕ್ತಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನದ ಮೇಲೆ ಇಂದಿಗೂ ಪಾಶ್ಚಾತ್ಯ ವಿಕೃತಿಯ ದೊಡ್ಡ ಪ್ರಭಾವವಿದೆ.
‘ಜನರಿಗಾಗಿ ನಡೆಸುವ ರಾಜ್ಯ,’ ಹೀಗೆ ಲೋಕ ತಂತ್ರದ ವರ್ಣನೆ ಮಾಡುತ್ತಾರೆ, ಆದರೆ ನಿತ್ಯ ಜೀವನದಲ್ಲಿ ಸರ್ವಸಾಮಾನ್ಯ ನಾಗರೀಕರು ನೋವನ್ನೇ ಅನುಭವಿಸಬೇಕಾಗುತ್ತಿದೆ, ಎಂಬುದು ಗಮನಕ್ಕೆ ಬರುತ್ತದೆ. ಇದೆಲ್ಲವೂ ‘ಸೆಕ್ಯುಲರ್ ವ್ಯವಸ್ಥೆಯ ದುಷ್ಪರಿಣಾಮವಾಗಿದೆ. ಆದ್ದರಿಂದ ಹಿಂದೂಗಳಿಗೆ ಅನ್ಯಾಯ ಮಾಡುವ, ಅಲ್ಪಸಂಖ್ಯಾತರಿಗೆ ವಿಶೇಷ ಸವಲತ್ತು ನೀಡುವ, ಹಾಗೂ ಬಹುಸಂಖ್ಯಾತರ ಧಾರ್ಮಿಕ ನಂಬಿಕೆಗೆ ದ್ರೋಹ ಬಗೆಯುವ ‘ಸೆಕ್ಯುಲರ್ ವ್ಯವಸ್ಥೆಯ ಬದಲು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರಕ್ಕಾಗಿ ಒಟ್ಟಾಗಿ ಧ್ವನಿಯೆತ್ತಬೇಕು. ೧೯೭೬ ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಇರುವಾಗ ಕಾಂಗ್ರೆಸ್ ಸರಕಾರವು ಸಂವಿಧಾನದ ತಿದ್ದುಪಡಿ ಮಾಡಿ ‘ಸೆಕ್ಯುಲರ್’ ಶಬ್ದವನ್ನು ಸಂವಿಧಾನದಲ್ಲಿ ತುರುಕಿತು. ಈಗ ಅದೇ ಭಾರತದ ಸಂವಿಧಾನವನ್ನು ಪುನಃ ತಿದ್ದುಪಡಿ ಮಾಡಿ ‘ಹಿಂದೂ ರಾಷ್ಟ್ರ’ವಾಗಿ ಘೋಷಿಸಬೇಕೆಂಬುದು ದೇಶಪ್ರೇಮಿ ಭಾರತೀಯರ ಭಾವನೆಯಾಗಿದೆ.
ಹಿಂದುತ್ವದ ಮೇಲಿನ ಆಘಾತಗಳು : ಭಾರತದಲ್ಲಿ ೨೮ ರಾಜ್ಯಗಳು ಮತ್ತು ೮ ಕೇಂದ್ರಾಡಳಿತ ಪ್ರದೇಶಗಳಿವೆ; ಆದರೆ ಇದರಲ್ಲಿನ ೬ ರಾಜ್ಯಗಳು ಮತ್ತು ೩ ಕೇಂದ್ರಾಡಳಿತ ಪ್ರದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸಂಖ್ಯೆ ಗಮನಕ್ಕೆ ತೆಗೆದುಕೊಂಡರೆ, ಇಂದು ಶೇಕಡ ೨೫ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾಗಿದೆ.
ಸ್ವಾತಂತ್ರ್ಯವೀರ ಸಾವರ್ಕರರು ‘ಹಿಂದುತ್ವವೇ ರಾಷ್ಟ್ರೀಯತ್ವ’ ಎಂದು ಪ್ರತಿಪಾದಿಸಿದ್ದರು. ಅದಕ್ಕನುಸಾರ ಯಾವುದಾದರೂ ಪ್ರದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವುದೆಂದರೆ ಆ ಪ್ರದೇಶದಲ್ಲಿನ ಭಾರತೀಯತ್ವದ ಭಾವನೆ ಕ್ಷೀಣವಾದಂತೆ. ೧೯೯೦ ರಲ್ಲಿ ಜಿಹಾದಿ ಭಯೋತ್ಪಾದನೆಯಿಂದ ಲಕ್ಷಾಂತರ ಕಾಶ್ಮೀರಿ ಹಿಂದೂಗಳ ನರಸಂಹಾರ ನಡೆಯಿತು. ಇಂದು ಕಲಂ ೩೭೦ ರದ್ದು ಪಡಿಸಿದ್ದರೂ ಅಲ್ಲಿಯ ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ಇದುವರೆಗೆ ಪುನರ್ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ. ತದ್ವಿರುದ್ಧ ಹಿಂದೂಗಳನ್ನು ಹೆಕ್ಕಿ ಹೆಕ್ಕಿ ಹತ್ಯೆ ಮಾಡಲಾಗುತ್ತಿದೆ. ಹಿಂದೂ ರಾಷ್ಟ್ರದ ‘ಟಾರ್ಗೆಟ್’ ಸಾಧಿಸದಿದ್ದರೆ ಹಿಂದೂಗಳ ‘ಟಾರ್ಗೆಟ್ ಕಿಲ್ಲಿಂಗ್’ ನಿಲ್ಲುವುದಿಲ್ಲ, ಇದೇ ಸತ್ಯವಾಗಿದೆ. ಭಾರತದ ಸ್ವಾತಂತ್ರ್ಯದ ಶತಕ ಮಹೋತದವರೆಗೆ ಎಂದರೆ ೨೦೪೭ ರ ವರೆಗೆ ಭಾರತದ ‘ಇಸ್ಲಾಮಿಸ್ತಾನ ಮಾಡುವ ಮತಾಂಧರ ‘ಬ್ಲೂಪ್ರಿಂಟ್ ಬೆಳಕಿಗೆ ಬಂದಿತ್ತು. ಅದಕ್ಕೆ ಮೊದಲೇ ‘ಗಜವಾ-ಏ-ಹಿಂದ್’ನ ಕನಸನ್ನು ಸ್ಮಶಾನದಲ್ಲಿ ಹುಗಿದು ಅಂದರೆ ಭಾರತದ ರಕ್ಷಣೆಗಾಗಿ ನಾವು ಸಿದ್ಧರಾಗಬೇಕಾಗಿದೆ.
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಬೇರೆ ಬೇರೆ ಸ್ತರದಲ್ಲಿ ಕಾರ್ಯನಿರತವಾಗಿರುವ ಹಿಂದುತ್ವನಿಷ್ಠರ ಸಂಘಟನೆಯಾಗಬೇಕು. ಅವರ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳಬೇಕು, ವೈಚಾರಿಕ ದಿಶೆ ಸ್ಪಷ್ಟವಾಗಬೇಕು, ಎಂಬ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗೋವಾದಲ್ಲಿ ಜೂನ್ ೧೬ ರಿಂದ ೨೨ ವರೆಗೆ, ಹನ್ನೊಂದನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಎಂದರೆ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆಯೋಜನೆ ಮಾಡಲಾಗಿದೆ. ಪ್ರತಿ ವರ್ಷದಂತೆ ದೇಶವಿದೇಶದಲ್ಲಿನ ಹಿಂದುತ್ವನಿಷ್ಠರ ನಾಯಕರು, ಕಾರ್ಯಕರ್ತರು ಈ ಅಧಿವೇಶನಕ್ಕೆ ಉಪಸ್ಥಿತರಿರುವರು.
ಶ್ರೀ. ರಮೇಶ ಶಿಂದೆ,
ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
(ಸಂಪರ್ಕ : 9987966666)