ಯುವಕರಲ್ಲಿ ಕ್ಯಾನ್ಸರ್, ಹೃದಯಘಾತ ಹೆಚ್ಚಳ: ಉತ್ತಮ ಆಹಾರ ಪದ್ದತಿ,ವ್ಯಾಯಾಮದಿಂದ ರೋಗ ಮುಕ್ತ ಸಮಾಜ ನಿರ್ಮಾಣ ಮಡೋಣ : ಸಚಿವ ದಿನೇಶ್ ಗುಂಡೂರಾವ್

varthajala
0

ಬೆಂಗಳೂರು : ಶ್ರೀ ಕೃಷ್ಣದೇವರಾಯ ಏಜುಕೇಷನಲ್ ಟ್ರಸ್ಟ್,  ಸರ್.ಎಂ.ವಿಶ್ವೇಶ್ವರಯ್ಯ ಇನ್ಯಟ್ಯೂಟ್ ಆಫ್ ಟಿಕ್ನಾಲಜಿ ಕಾಲೇಜಿನಲ್ಲಿ     ವಾರ್ಷಿಕೋತ್ಸವ ಸಮಾರಂಭವು ವಿಜೃಂಭಣೆಯಿಂದ ಆಚರಿಸಲಾಯಿತು.

ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಅಧ್ಯಕ್ಷರಾದ ಡಾ. ಎ.ಸಿ. ಚಂದ್ರಶೇಖರ್ ರಾಜು, ಉಪಾಧ್ಯಕ್ಷರಾದ ಕೆ.ವಿ. ಶೇಖರ್ ರಾಜು, ಸಂಸ್ಥಾಪಕ ಟ್ರಸ್ಟಿಗಳಾದ ಎಲ್. ಕೆ. ರಾಜು, ಕಾರ್ಯದರ್ಶಿ ಶ್ಯಾಮ್ ರಾಜು, ಖಜಾಂಚಿ ವೆಂಕಟರಾಮಣರಾಜುರವರು, ಪ್ರಾಂಶುಪಾಲರಾದ ಪ್ರೊ. ಎಸ್.ಜಿ. ರಾಕೇಶ್ ರವರು ದೀಪವನ್ನು ಬೆಳಗಿಸುವ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು.

 ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ  ಸಭೆಯನ್ನು ಉದ್ದೇಶಿಸಿ ಮಾತನಾಡಿದ  ಸಚಿವ ದಿನೇಶ್ ಗುಂಡೂರಾವ್ ರವರು, ನಮ್ಮ ಕರ್ನಾಟಕ ರಾಜ್ಯವು ಶಿಕ್ಷಣ ಮತ್ತು ಆರೋಗ್ಯ ರಂಗಗಳಲ್ಲಿ  ಮಹತ್ತರವಾದ  ಸಾಧನೆ ಮಾಡಿದೆ. ಸರ್ ಎಂ. ವಿಶ್ವೇಶ್ವರಯ್ಯ ಇನ್ಸಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಉತ್ತಮ ಶಿಕ್ಷಣ ಸಂಸ್ಥೆಯಾಗಿದೆ.

ನಾನು ಇಂಜನಿಯರಿಂಗ್ ಪದವಿ ಪಡೆದಿದ್ದೇನೆ, ಮಾಸ್ಟರ್ ಪದವಿ ಪಡೆಯುವ ಹಂಬಲವಿತ್ತು, ಅದರೆ ಅನಿರೀಕ್ಷಿತ ಕಾರಣಗಳಿಂದ ರಾಜಕಾರಣಕ್ಕೆ ಬಂದು,  6 ಬಾರಿ ಶಾಸಕನಾಗಿ, ಪ್ರಸ್ತುತ  ಸಚಿವನಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದೇನೆ.

ಯುವ ಸಮುದಾಯ ಶಿಕ್ಷಣ ಮತ್ತು ಆರೋಗ್ಯ ಕಡೆ ಹೆಚ್ಚು ಗಮನಹರಿಸಬೇಕು. 

ಇಂದು ಕಡಿಮೆ ವಯಸ್ಸಿನ ಯುವಕ,ಯುವತಿಯರು ಕ್ಯಾನ್ಸರ್, ಹೃದಯಾಘಾತ, ಪಾರ್ಷ್ವ ವಾಯು ಪೀಡಿತರಾಗುತ್ತಿದ್ದಾರೆ.

ಮಾದಕ ವ್ಯಸನ ಮತ್ತು ಮದ್ಯಪಾನ, ಸಿಗರೇಟ್ ಸೇವನೆ ಮಾಡಬೇಡಿ, ಉತ್ತಮ ಆಹಾರ ಪದ್ದತಿ  ಮತ್ತು ವ್ಯಾಯಾಮದಿಂದ ಎಲ್ಲ ರೋಗಗಳಿಂದ ಮುಕ್ತಿ ಪಡೆಯಬಹುದು.

ವಿದ್ಯಾವಂತ ಯುವ ಸಮುದಾಯವೇ ಈ ದೇಶದ ಸಂಪತ್ತು ಎಂದು ಅವರು  ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರು ಮಾಡಿರುವ ಸಾಧನೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ   ಪದಕ ಹಾಗೂ ನಗದು ಪಾರಿತೋಷಕಗಳನ್ನು ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ  ಆಡಳಿತ ಮಂಡಳಿ, ಬೋಧಕ ವರ್ಗ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Post a Comment

0Comments

Post a Comment (0)