*ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯದ ಮೊಟ್ಟ ಮೊದಲ 17ಅಡಿಯ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಕಂಚಿನ ಪ್ರತಿಮೆ ಸ್ಥಾಪನೆ ಕಾರ್ಯ ಭರದಿಂದ ಸಾಗಿದೆ*
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಪ್ರತಿಮೆ ತಯಾರಿಕೆ
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಪ್ರತಿಮೆ ಪ್ರತಿಷ್ಟಾಪಿಸಲು ಕಾರ್ಯಕ್ರಮ
ರೂಪಿಸಲಾಗಿದೆ.
ಈ ನಿಟ್ಟಿನಲ್ಲಿ ಮಹಾರಾಷ್ಟ್ರದಲ್ಲಿರುವ ನಾಸಿಕ್ ಜಿಲ್ಲೆಯಲ್ಲಿ ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಅಂತರಾಷ್ಟ್ರೀಯ ಶಿಲ್ಪಿಯಿಂದ ತಯಾರಿಕೆ ಮಾಡಲಾಗುತ್ತಿದೆ.
ನಾಸಿಕ್ ಜಿಲ್ಲೆ ಪ್ರತಿಮೆ ತಯಾರಿಕೆ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಭೇಟಿ ನೀಡಿ, ಪ್ರತಿಮೆ ತಯಾರಿಕೆ ಕಾರ್ಯ ಪರಿಶೀಲನೆ ಮಾಡಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ *ಎ.ಅಮೃತ್ ರಾಜ್* ರವರು ಮಾತನಾಡಿ ವಿಶ್ವದ ಅತಿಡೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಶಾಂತಿಯುತ ಮತ್ತು ಸಹಬಾಳ್ಮೆಯಿಂದ ಸರಿಸಮಾನವಾಗಿ ನಾವು ಬದುಕು ಸಾಗುತ್ತಿದ್ದೇವೆ ಎಂದರೆ ಸಂವಿಧಾನ ನಮಗೆ ಕೊಟ್ಟ ಅತಿ ಡೊಡ್ಡ ಶಕ್ತಿ .
ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆ ಸ್ವಾತಂತ್ರ್ಯ ಉದ್ಯಾನವನವನದಲ್ಲಿ ಸ್ಥಾಪನೆಯಾಗಲಿದೆ. ರಾಜ್ಯದಲ್ಲಿ ಮೊಟ್ಟ ಮೊದಲ 17ಅಡಿ ಉದ್ದದ ಕಂಚಿನ ಪ್ರತಿಮೆ ನಾಸಿಕ್ ಜಿಲ್ಲೆಯಲ್ಲಿ ಪ್ರತಿಮೆ ತಯಾರಿಕೆ ಕಾರ್ಯ ಅಂತಿಮ ಹಂತದಲ್ಲಿ ಇದ್ದು ಇನ್ನು ಎರಡು ತಿಂಗಳಲ್ಲಿ ಲೋಕಾರ್ಪಣೆ ಕಾರ್ಯ ನಡೆಯಲಿದೆ.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ಪ್ರತಿಯೊಂದು ಹೋರಾಟದಲ್ಲಿ ಬಿ.ಆರ್.ಅಂಬೇಡ್ಕರ್ ರವರು ನಮಗೆ ಸ್ಪೂರ್ತಿ,ಪೇರಣೆಯಾಗಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಆದರ್ಶ ಸಿದ್ದಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಂಡರೆ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಕೆ.ಮಂಜೇಗೌಡ ಬಿ.ಬಿ.ಶ್ರೀಧರ್, ಮಲ್ಲೇಶ್, ಹರೀಶ್ ಮಂಜುನಾಥ್, ಉಪಸ್ಥಿತರಿದ್ದರು.