ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿರುವ ಕೌನ್ಸಿಲ್ ಸಭಾಂಗಣ 10ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದೆ.
*ಇಂದು ಸ್ಥಳಕ್ಕೆ ಎಂ.ಪಿ.ಡಿ.ಮುಖ್ಯ ಅಭಿಯಂತರಾದ ವಿನಾಯಕ್ ಸುಗ್ಗೂರು, ಸೂಪರಿಡೆಂಟ್ ಇಂಜನಿಯರ್ ಹೇಮಲತಾ, ಸಹಾಯಕ ಅಭಿಯಂತರಾದ ಹರ್ಷರವರು ಭೇಟಿ ನೀಡಿ ಪರಿಶೀಲನೆ ಮಾಡಿದರು*
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ 198ರಿಂದ 243ಸದಸ್ಯರ ಸಂಖ್ಯೆ ಹೆಚ್ಚಳದಿಂದ ಮತ್ತು ಲೋಕಸಭಾ ರಾಜ್ಯಸಭಾ,ವಿಧಾನಪರಿಷತ್ ಹಾಗೂ ಅಧಿಕಾರಿಗಳಿಗೆ ಕೌನ್ಸಿಲ್ ಸಭೆಯಲ್ಲಿ ಆಸನ ವ್ಯವಸ್ಥೆಗೆ 365ಸಂಖ್ಯೆ ಆಸನಗಳ ನಿರ್ಮಾಣವಾಗುತ್ತಿದೆ.
ಈ ನಿಟ್ಟಿನಲ್ಲಿ ಕೌನ್ಸಿಲ್ ಸಭಾಂಗಣ 365ಆಸನಗಳ ಪ್ರತಿಯೊಬ್ಬರಿಗೂ ಪ್ರತ್ಯಕ ಆಸನಗಳು ,ಸಾಮಾಜಿಕ ಅಂತರ ಆಸನಗಳ ನಡುವೆ ಹಾಗೂ ಅತ್ಯಾಧುನಿಕ ಮೈಕ್ ವ್ಯವಸ್ಥೆ,ಬಯೋಮೇಟ್ರಿಕ್ ಬಟನ್ ಒತ್ತುವ ಮೂಲಕ ಮಾತನಾಡಲು ಅವಕಾಶ.
ಪ್ರತಿಯೊಂದು ಆಸನಗಳಲ್ಲಿ ಡಿಜಿಟಲ್ ನಾಮಫಲಕಗಳು ಮತ್ತು ಹವಾನಿಯಂತ್ರಣ ವ್ಯವಸ್ಥೆ ಮಾಡಲು 10ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ಭರದಿಂದ ಸಾಗಿದೆ.
ಕೌನ್ಸಿಲ್ ಸಭಾಂಗಣ ಕಾಮಗಾರಿ ಭರದಿಂದ ಸಾಗಿದ್ದು ಇನ್ನು ಎರಡು ತಿಂಗಳ ಒಳಗೆ ಕಾಮಗಾರಿ ಸಂಪೂರ್ಣಗೊಳ್ಳಲಿದೆ.
ಅತ್ಯಧುನಿತ ತಂತ್ರಜ್ಞಾನವುಳ್ಳ ಕೌನ್ಸಿಲ್ ಸಭಾಂಗಣ ಮುಂಬರುವ ಪಾಲಿಕೆ ಸದಸ್ಯರುಗಳ ಆಗಮನಕ್ಕೆ ಸಜ್ಜಾಗಲಿದೆ.