ಐಎಎಸ್, ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ;

varthajala
0

 

 ಬೆಂಗಳೂರು; ವಾಸವಿ ಅಕಾಡಮಿ ಕರ್ನಾಟಕ ಆರ್ಯವೈಶ್ಯ ಮಹಾಸಭೆಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ  ಸೇವಾ ಸಂಸ್ಥೆಯಾಗಿದ್ದು, ಐಎಎಸ್, ಐಪಿಎಸ್   ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ಸರ್ವಸನ್ನದ್ಧವಾಗಿದೆ ಎಂದು ವಾಸವಿ ಅಕಾಡೆಮಿ ಅಧ್ಯಕ್ಷ ಪಿ.ಆರ್.ರವಿಶಂಕರ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  1908ರಿಂದಲೂ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಇದಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದೆ. ಇದಕ್ಕಾಗಿ ನುರಿತ, ಪರಿಣಿತ ಬೋಧನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.
 
 ಲೋಕ ಸೇವಾ ಆಯೋಗದಿಂದ ನಡೆಸುವ ಐಎಎಸ್, ಐಪಿಎಸ್   ಇತ್ಯಾದಿ ಪರೀಕ್ಷೆಗಳನ್ನು ಬರೆಯಲು ಬಯಸುವ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ತರಬೇತಿ, ಮಾರ್ಗದರ್ಶನ ನೀಡಲಾಗುತ್ತದೆ ಎಂದರು.

2024ರಲ್ಲಿ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಾಸವಿ ಅಕಾಡಮಿ ನಡೆಸುವ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಂದ ಉತ್ತೀರ್ಣರಾಗುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ, ಊಟ, ವಸತಿ ಸೌಲಭ್ಯ ನೀಡಲಾಗುತ್ತದೆ. ಯಾವುದೇ ಪದವಿ ಶಿಕ್ಷಣ ಪಡೆದಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ಅತ್ಯಂತ ಹಿರಿಯ, ಅನುಭವಿ, ಪರಿಣಿತ ಭೋದಕ ತಂಡವನ್ನು ಹೊಂದಿರುವ ನಮ್ಮ ಸಂಸ್ಥೆಯ 5ನೇ ಬ್ಯಾಚ್‌ಗೆ ಸೇರಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಜುಲೈ 2 ಭಾನುವಾರ ಬೆಂಗಳೂರು ನಗರದಲ್ಲಿ ಪ್ರವೇಶ ಪರೀಕ್ಷೆ ಇರುತ್ತದೆ.

ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಈ ತಿಂಗಳು 25 ಕಡೆಯ ದಿನವಾಗಿದೆ ಎಂದು ಆರ್.ಪಿ. ರವಿಶಂಕರ್ ತಿಳಿಸಿದರು.  ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ದೂರವಾಣಿ ಸಂಖ್ಯೆ:8073499217 ಅಥವಾ ನಮ್ಮ ವೆಬ್‌ಸೈಟ್: https://vasaviacademy.comಗೆ ಭೇಟಿ ನೀಡಲು ಕೋರಿದೆ.

Post a Comment

0Comments

Post a Comment (0)