ನಿರೂಪಕಿಯರಿಗೆ ಬ್ಯೂಟಿ ಟಿಪ್ಸ.

varthajala
0

ನಾವೆಲ್ಲ ನಿರೂಪಕಿ ಯರನ್ನು ಕಾರ್ಯಕ್ರಮಗಳಲ್ಲಿ, ಟೀವೀ ಷೋ ಗಳಲ್ಲಿ,ರೇಡಿಯೋ ಟಾಕ್ಗಳಲ್ಲಿ ನೋಡಿರುತ್ತೇವೆ.ಇಲ್ಲಿ ರೇಡಿಯೋ ನಿರೂಪಕಿ ಯರಿಗಿಂತ ಇತ್ರೆ ಕಾರ್ಯಕ್ರಮಗಳ ನಿರೂಪಕಿ ಯರ ಪ್ರಸ್ತುತಿ ಗಮನಾರ್ಹವಾಗಿರುತ್ತದೆ.ಅವರ ಅಂದ ಚೆಂದ ಉಡುಗೆ ತೊಡುಗೆ ಆಭರಣ ಮೇಕಪ್ ಇತ್ಯಾದಿ ಚರ್ಚೆಯ ವಿಷಯವೇ ಆಗಿ ಬಿಡುತ್ತದೆ.ಇಂದು ಸ್ವತಃ ನಿರೂಪಕಿ ಯಾಗಿರುವ ನಾನು ಕೆಲವು ಬ್ಯೂಟಿ ಟಿಪ್ಸ್ ಗಳನ್ನು ಹೊಸ ನಿರೂಪಕಿಯರಿಗೆ ಕೊಡುತ್ತಿದ್ದೇನೆ.



ಮೊತ್ತ ಮೊದಲಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ದಿನಾಲು ನಿಗದಿತ ವ್ಯಾಯಮ,ಧ್ಯಾನ, ಅವಶ್ಯಕ.ನಂತರ ಚರ್ಮ ಹಾಗೂ ಕೇಷ ದ ಸಂರಕ್ಷಣೆ ಮುಖ್ಯವಾದುದು.ಆರೋಗ್ಯಯುತ ಚರ್ಮ ಕಾಂತಿಯನ್ನು ಸೂಸುತ್ತದೆ.ತ್ವಚೆಯ ಮೃದುತ್ವ ಹಾಗೂ ಕಾಂತಿ ಗಾಗಿ ಸಾಕಷ್ಟು ನೀರು ಕುಡಿಯಬೇಕು.ತ್ವಚೆಯನ್ನು ಶುದ್ಧಗೊಳಿಸಲು ಕಡಲೆಹಿಟ್ಟು ನಾನು ಬಳಸುತ್ತೇನೆ.ಆದರೆ ಬೇರೆಯವರು ಒಳ್ಳೆಯ ಹರ್ಬಲ್ ಪುಡಿಯನ್ನು ಬಳಸಬಹುದು.ಅವಶ್ಯವಿದ್ದಲ್ಲಿ ಚರ್ಮ ರೋಗ ತಜ್ಞರ ಬಳಿ ನಿಮ್ಮ ತ್ವಚೆಯನ್ನು ಹೊಂದುವ ಸಾಬೂನು, ಮಾಷ್ಚರೈಸರ್, ಕೇಳಿ ಬಳಸಬಹುದು.ಮುಖಕ್ಕೆ ಯಾವಾಗಲೂ ಒಳ್ಳೆಯ ಕೋಲ್ಡ್ ಕ್ರೀ ಮ್ ಬಳಸಿ  ಕಣ್ಣಿಗೆ ದಿನಾಲೂ ಕಾಜಲ್ ಬಳಸಬೇಕು ಎಂದೇನಿಲ್ಲ.ಕಾರ್ಯಕ್ರಮ ಇರುವಾಗ ಬಳಸಬಹುದು.ಯಾವಾಗಲೂ ತ್ವಚೆಗೆ ಹಾಗೂ ಇತ್ರೇ ಮೇಕಪ್ ಸಾಮಗ್ರಿಗಳು ಬ್ರಾಂಡೆಡ್ ಆಗಿದ್ದರೆ ಉತ್ತಮ.ದಿನನಿತ್ಯದ ಬಳಕೆ ಹಾಗೂ ಕಾರ್ಯಕ್ರಮದ ಬಳಕೆಗೆ ಬೇರೆ ಬೇರೆ ಮೇಕಪ್ ಸಾಮಗ್ರಿಗಳು ಬೇಕು.ಯೇಕೆಂಧರೆ ಕಾರ್ಯಕ್ರಮಗಳಲ್ಲಿ ಪ್ರಖರ ಕ್ಯಾಮೆರಾ ಹಾಗೂ ಬೆಳಕು ಇರುತ್ತದೆ.ಅಲ್ಲಿ ನಾವು ಬೆ ವರಬಾರದು.ನಾನು ಕಣ್ಣಿಗೆ ಮನೆಯಲ್ಲಿ ತಯಾರಿಸಿದ ಕಾಜಲ್ ಬಳಸುತ್ತೇನೆ.

ಇನ್ನೂ ಬಿಂದಿಯ ಆಯ್ಕೆಯೂ ಅಷ್ಟೇ.ಕಾರ್ಯಕ್ರಮದಲ್ಲಿ ನಮ್ಮ ಉದುಗೆಗೆ ಹೊಂದುವ ಬಣ್ಣದ ಬಿಂದಿ ಒಳ್ಳೆಯದು.ಸಾಮಾನ್ಯವಾಗಿ ದೊಡ್ಡ ದೊಡ್ಡ ಸೆಲೆಬ್ರಿಟಿ ಗಳು ಬಿಂದಿಯನ್ನು ಸಹ ಖಾಯಂ ಆಗಿ ಒಂದೇ ರಿತಿಯದನ್ನು ಬಳಸುತ್ತ ತಮ್ಮ ಬ್ರಾಂಡ್ ಅನ್ನು ನಿರ್ವಹಣೆ ಮಾಡುತ್ತಾರೆ.ಇನ್ನೂ ಪೌಡರ್ ಅಂದರೆ ಷೋ ನಲ್ಲಿ ಫೇಸ್ ಪೌಡರ್ ಉಪಯೋಗಿಸುವರು.ಆದರೆ ದಿನನಿತ್ಯದ ಬಳಕೆಗೆ ಒಳ್ಳೆಯ ಟಾಲ್ಕಂ ಪೌಡರ್ ಸಾಕು.ಬೇಸಿಗೆಯಲ್ಲಿ ಬೆವರು ನಿರೋಧಕ ಬಾಡಿ ಪೌಡರ್ ಬಳಸುವುದು ಒಳ್ಳೆಯದು.ಇನ್ನೂ ಬೇಸಿಗೆಯಲ್ಲಿ ಹೊರಗೆ ಹೊರಟಾಗ ಸನ್ ಸ್ಕ್ರೀನ್ ಲೋಷನ್ ಮರೆಯದೆ ಬಳಸಿ.

 ದಿನಾಲೂ ಲಿಪ್ಸ್ಟಿಕ್ ನಾನು ಬಲಸಲ್ಲ. ಲಿಪ್ ಬಾಮ್ ಬಳಸುವವರು ಉಂಟು.ಆದರೆ ಷೋ ನಲ್ಲಿ ನಮ್ಮ ಉಡುಗೆ ಹಾಗೂ ತ್ವಚೆಯ ಬಣ್ಣಕ್ಕೆ ಹೊಂದುವ ಲಿಪ್ಸ್ಟಿಕ್ ಉತ್ತಮ.ಇದನ್ನು ಕೆಲವರು ಬ್ರಾಂಡ್ ಆಗಿ ಬಳಸುವುದು ಇದೆ.ಷೋ ಗಳಲ್ಲಿ ಮೇಕಪ್ ಮ್ಯಾನ್ ಕೈಲಿ ಮಾಡಿಸಿಕೊಂಡರೆ ಸುಲಭ.ಇನ್ನೂ ಕೇಶ ಸಂರಕ್ಷಣೆಯ ವಿಷಯಕ್ಕೆ ಬಂದರೆ ವಾರಕ್ಕೆ ಎರಡು ಬಾರಿ ಎಣ್ಣೆ ಮಸಾಜ್ ಒಳ್ಳೆಯದು. ಹೆನ್ನಾ ಬಳಸುವುದು ಅವರವರ ಇಷ್ಟ.ಎಣ್ಣೆ ಮಸಾಜ್ ಇಡೀ ದೇಹಕ್ಕೆ ಒಳ್ಳೆಯದು.ಅದಕ್ಕೆ ಹಾಗೂ ಕೇಶಕ್ಕೆ ಎಣ್ಣೆಯನ್ನು ಮನೆಯಲ್ಲಿ ತಯಾರಿಸಿಕೊಳ್ಳಬಹುದು.ಒಳ್ಳೆಯ ಹರ್ಬಲ್ ಬ್ಯೂಟಿಶಿಯನ್ ನೀವು ಗುರುತು ಮಾಡಿಕೊಂಡರೆ ಒಳಳೆಯದು. ಆಯುರ್ವೇದಿಕ್ ವೈದ್ಯರ ಸಹಾಯ ಕೂಡ ಪಡೆಯಬಹುದು.ಕೂದಲನ್ನು ಟ್ರಿಮ್ ಮಾಡಿಸುವುದು, ಸ್ಪ್ಲಿಟ್ ಕೂದಲು ತೆಗೆಸುವುದು,ವಿನ್ಯಾಸದ ಹೇರ್ ಕಟ್ ನಿಮ್ಮ ಆಯ್ಕೆಗೆ ಬಿಟ್ಟದ್ದು. ಹೇರ್ ಕಲರ್ ಮಾಡಿಸುವುದು ಇತ್ತೀಚೆಗೆ ಫ್ಯಾಷನ್ ಆಗಿದೆ.

ತಿಂಗಳಿಗೊಮ್ಮೆ ಐ ಬ್ರೋ ಶೇಪ್,ಕೂದಲು ಟ್ರಿಮ್, ಫೇಶಿಯಲ್ ಮಾಡಿಸುವುದು ಕೆಲವರ ವಾಡಿಕೆ.ಬ್ಲೀಚಿಂಗ್ ಅವಶ್ಯಕತೆ ಇದ್ದರೆ ಮಾತ್ರ ಇರಲಿ.
   ಇವಿಷ್ಟೂ ಬಹಳ ಸರಳ ಸಲಹೆಗಳು. ಏನಂಥೀರಿ.
೧.ಮೇಕಪ್ ದಿನನಿತ್ಯದ್ದು
೨.ಮೇಕಪ್ ಷೋ ಗಳಿಗೆ
೩.ಮೇಕಪ್ ರೂಪಾಂತರ

Radhika G N
Mobile : 7019990492
TV Host

Post a Comment

0Comments

Post a Comment (0)