ಬಸ್ ಉಚಿತವಿದೆ ಎಂದು ಬಳಸಿಕೊಳ್ಳುವುದಲ್ಲ ಸದುದ್ದೇಶಕ್ಕೆ ಬಳಕೆಯಾಗಬೇಕು : ಶಾಸಕ ಬಿಎನ್ ರವಿಕುಮಾರ್

varthajala
0

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

ವಾರ್ತಾಜಾಲ,ಶಿಡ್ಲಘಟ್ಟ : ರಾಜ್ಯದ ಎಲ್ಲಾ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನಿಡುವ 'ಶಕ್ತಿ ಯೋಜನೆ' ಸದುದ್ದೇಶಕ್ಕೆ ಉಪಯೋಗಿಸಿ ಎಂದು ಶಾಸಕ ಬಿಎನ್ ರವಿಕುಮಾರ್  ತಿಳಿಸಿದರು.


ಶಿಡ್ಲಘಟ್ಟ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗ ತಾಲೂಕು ಆಡಳಿತ ಆಯೋಜನೆ ಮಾಡಿರುವ ಶಕ್ತಿ ಯೋಜನೆಗೆ  ಚಾಲನೆ ನೀಡಿ ಮಾತನಾಡಿ,ಸರ್ಕಾರ ನೀಡಿರುವ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಲಿದೆ, ಮಹಿಳೆಯರು ಸ್ವಾವಲಂಬನೆ, ಶೈಕ್ಷಣಿಕ ಪ್ರವಾಸ, ವೃತ್ತಿ ಕೌಶಲ್ಯಾಭಿವೃದ್ಧಿ ಮುಂತಾದ ಉದ್ದೇಶಗಳಿಗೆ 'ಶಕ್ತಿ' ಯೋಜನೆ ಬಳಸಿಕೊಳ್ಳಬೇಕು. ಬಸ್ ಉಚಿತವಿದೆ ಎಂದು ಬಳಸಿಕೊಳ್ಳುವುದಲ್ಲ. ಸದುದ್ದೇಶಕ್ಕೆ ಬಳಕೆಯಾಗಬೇಕು. ಇದರಿಂದ ರಸ್ತೆ ಸಾರಿಗೆ ಸಂಸ್ಥೆ ಹೆಚ್ಚು ಬೆಳವಣಿಗೆ ಆಗುತ್ತದೆ. ಸಾಮಾಜಿಕ ಆರ್ಥಿಕ ಅಸಮಾನತೆಗೆ ಮಹಿಳೆಯರು ಒಳಗಾಗಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿದೆ. ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಹೆಚ್ಚು ಭಾಗಿಯಾಗಬೇಕು. ಮಹಿಳೆಯರು ಹೆಚ್ಚು ಭಾಗಿಯಾದ್ರೆ ದೇಶ ಪ್ರಗತಿಯತ್ತ ಸಾಗುತ್ತದೆ ಎಂದರು. ನಂತರ ಈ ಕ್ಷೇತ್ರದ ಜನರ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.


ತಹಶೀಲ್ದಾರ್ ಬಿಎನ್ ಸ್ವಾಮಿ ಮಾತನಾಡಿ, ನೂತನವಾಗಿ ರಚನೆಯಾಗಿರುವ ಕರ್ನಾಟಕ ಸರ್ಕಾರ ಮಹತ್ವಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆಯನ್ನು ಮಹಿಳಾ ಸಾಮಾಜಿಕ ಆರ್ಥಿಕ ಹಾಗೂ ಎಲ್ಲಾ ವಿಧದಲ್ಲೂ ಮಹಿಳೆಯರು ಮುಂದೆ ಬರಬೇಕು ಎಂದು ಈ ಯೋಜನೆ ಜಾರಿಗೆ ತರಲಾಗಿದೆ. ಎಲ್ಲಾ ಮಹಿಳೆಯರು ಆರ್ಥಿಕವಾಗಿ ಸಬಲೀಕರಣವಾಗಬೇಕು. ಮಹಿಳೆಯರು ತನ್ನ ಕಾಲ ಮೇಲೆ ತಾನು ನಿಂತು ಪುರುಷ ಸಮಾನವಾಗಿ ಆರ್ಥಿಕವಾಗಿ ಮುಂದೆ ಬರಬೇಕು ಎಂದು ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್,ಇಒ ಮುನಿರಾಜು,ಪೌರಾಯುಕ್ತ ಆರ್ ಶ್ರೀಕಾಂತ್, ಕೆಎಸ್ ಆರ್ಟಿಸಿ ಘಟಕದ ವ್ಯವಸ್ಥಾಪಕ ಬಿ.ಶ್ರೀನಾಥ್, ಜೆವಿ ಶ್ರೀಧರ,ಸಿವಿ ಆಂಜನೇಯರೆಡ್ಡಿ,ಬಂಕ್ ಮುನಿಯಪ್ಪ,ಹುಜಗೂರು ರಾಮಣ್ಣ,ಮುಖಂಡರಾದ ಎಸ್ ಎಂ ರಮೇಶ್,ನಗರಸಭೆ ಸದಸ್ಯರು ಹಾಗೂ ಮತ್ತಿತರರು ಇದ್ದರು.

Post a Comment

0Comments

Post a Comment (0)