ಗಂಧದ ಗುಡಿಯ ಗರ್ಭದಿ ಜನಿಸಿದ
ಕುಮಾರ ಸ್ವಾಮಿಯ ಹೃದಯದಿ ನೆಲೆಸಿದ
ಸವಿಜೇನ ಹನಿಯ ಅಕ್ಕರೆ ನುಡಿಯೊಳು
ಮಿಂದೇಳುತಿಹ ಜ್ಞಾನದ ಕಿಡಿ... ಅದುವೆ ಗ್ರಂಥದ ಗುಡಿ...
ಶಿವನಾಣೆ ಹೇಳುವೆ ಇದು ಜ್ಞಾನದೇಗುಲ
ಬಲ್ಲೋರೆ ಬಲ್ಲರು ರುಚಿಯಾದ ಸವಿ ಬೆಲ್ಲ
ಆಪ್ಯಾಯತೆಯ ಆತ್ಮವಿಶ್ವಾಸದ ಜ್ಞಾನಭಂಡಾರ
ಕೊರಳ ನಿನಾದದಿ ಬಾಂಧವ್ಯಬೆಸೆಯುವ ದೇವಮಂದಿರ
ಕಥೆ ಕೇಳುವ ಪುಟ್ಟ ಮಕ್ಕಳಲಿ ಅದೆಂತಹ ತನ್ಮಯತೆ
ಕಥೆ ಹೇಳುವ ದೊಡ್ಡ ಮಕ್ಕಳಲಿ ಅದೆಂತಹ ಉತ್ಸುಕತೆ
ನುಡಿಸಿರಿಯ ಶಿರದಮೇಲೆ ಹೊತ್ತು ಮೆರೆಸುವ ಸಾರಥಿ
ನೆಚ್ಚಿನ ಬಳಗದ ಮೆಚ್ಚಿನ ನುಡಿಯ ಆಸ್ವಾದಿಸುವ ಆನಂದದಿ
ಈ ಗುಡಿಯ ಗರ್ಭವ ಅಲಂಕರಿಸಿಹುದು ಸಾವಿರಾರು ಪುಸ್ತಕಗಳು
ಕಥೆ ಕೇಳುವ ಮಕ್ಕಳ ಪಯಣ ದಾಟಿಹುದು ನೂರು ಸಂಚಿಕೆಗಳು
ಗಾಯಕ, ಲೇಖಕ, ಸಾಧಕರ ಅಭಿಮಾನದ ಸಾರ್ಥಕ ವೇದಿಕೆ
ಅರಸುತ ಬರುವ ಅಕ್ಷರ ಪ್ರೇಮಿಗಳ ಮನದಾಳದಂಗಳದ ದೀವಿಗೆ
ತನು ಮನ ಧನದಿ ಹಿರಿಯರು ನೀಡುತಿಹರು ಸೂಕ್ತ ಮಾರ್ಗದರ್ಶನ
ವೇದಿಕೆಯೊಳು ಪುಟಾಣಿ ಪ್ರತಿಭೆಗಳ ಲಲಿತ ಕಲೆಗಳ ಅನಾವರಣ
ಅನುಗಾಲ ಸಾಗಲಿ ನುಡಿಹೊತ್ತಿಗೆಯ ಗ್ರಂಥದ ಗುಡಿಯ ಈ ಪಯಣ
ಅಂಬರದಗಳದೊಳು ಧೃವತಾರೆಯಾಗಿ ಬೆಳಗುತಿರಲಿ ಈ ಜ್ಞಾನಕಿರಣ
ಅಂದು ಹಾಡಿದರು ಅಣ್ಣಾವ್ರು ನಾವಿರುವ ತಾಣವೇ ಗಂಧದಗುಡಿಯೆAದು
ಎದೆತಟ್ಟಿ ಸಾರುವ ನಾವಿಂದು ಇದುವೇ ಹೆಮ್ಮೆಯ ಗ್ರಂಥದಗುಡಿಯೆAದು
ಇದುವೇ ನಲ್ಮೆಯ ಗ್ರಂಥದಗುಡಿಯೆAದು
ಚಿತ್ರ ರಚನೆ ಮತ್ತು ಸಾಹಿತ್ಯ:- ವಿ.ಎಸ್.ಕುಮಾರ್. ಎಂ.ಎ.ಕನ್ನಡ
ಮೊಬೈಲ್ ಸಂಖ್ಯೆ: ೭೮೯೨೩೪೬೧೦೫