BIG NEWS : “ಓದುವ ದಿನ ಹಾಗೂ ಓದುವ ತಿಂಗಳು" ಕಾರ್ಯಕ್ರಮ ಆಚರಣೆ

varthajala
0

ಬೆಂಗಳೂರು, ಜೂನ್ 23, (ಕರ್ನಾಟಕ ವಾರ್ತೆ) : ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ರಾಜ್ಯ ಕೇಂದ್ರ ಗ್ರಂಥಾಲಯ, ಇಂದಿರಾ ಪ್ರಿಯದರ್ಶಿನಿ ಮಕ್ಕಳ ಗ್ರಂಥಾಲಯದಲ್ಲಿ ನಿನ್ನೆ “ಓದುವ ದಿನ ಹಾಗೂ ಓದುವ ತಿಂಗಳು" ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕೇರಳದ ಗ್ರಂಥಾಲಯ ಹಾಗೂ ಸಾಕ್ಷರತಾ ಚಳುವಳಿಯ ಪಿತಾಮಹ ಪಿ.ಎನ್. ಪಣಿಕ್ಕರ್ ಇವರ ಪುಣ್ಯಸ್ಮರಣೆಯ ದಿನದ ಅಂಗವಾಗಿ ಜೂನ್ 19 ರಿಂದ ಜುಲೈ 18ರವರೆಗೆ ದೇಶದಾದ್ಯಂತ ಓದುವ ದಿನ / ಓದುವ ತಿಂಗಳನ್ನಾಗಿ ಆಚರಿಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಸಾರ್ವಜನಿಕರಲ್ಲಿ ಓದುವ ಅಭಿರುಚಿಯನ್ನು ಹೆಚ್ಚಿಸುವುದು, ಓದುವ ಸಂಸ್ಕøತಿಯನ್ನು ಬೆಳೆಸುವುದು, ಕಾರ್ಯಕ್ರಮದ ಉದ್ದೇಶವಾಗಿರುತ್ತದೆ. ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಒಂದು ತಿಂಗಳ ಕಾಲ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.


ಕಾರ್ಯಕ್ರಮದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರಾದ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವಿಶ್ರಾಂತ ನಿರ್ದೇಶಕರಾದ ಡಾ. ಪಿ.ವೈ. ರಾಜೇಂದ್ರ ಕುಮಾರ್, ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಗ್ರಂಥಪಾಲಕರಾದ ಪ್ರೊ.ಪಿ.ವಿ.ಕೊಣ್ಣೂರು, ಯಶವಂತಪುರ ಎ.ಪಿ.ಎಂ.ಸಿ. ಹೆಚ್ಚುವರಿ ಕಾರ್ಯದರ್ಶಿ ವಸುಂದರಾ, ರಾಜ್ಯ ಕೇಂದ್ರ ಗ್ರಂಥಾಲಯದ ಉಪನಿರ್ದೆಶಕರಾದ ಸರೋಜಮ್ಮ ಎಂ. ರಾಜ್ಯ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕರಾದ ಮಮತ ಹಾಗೂ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Post a Comment

0Comments

Post a Comment (0)