ICSE 2023 ಪರೀಕ್ಷೆಯಲ್ಲಿ 99% ಫಲಿತಾಂಶದೊಂದಿಗೆ ಅಸಾಧಾರಣ ಸಾಧನೆ ಮಾಡಿದ ಅಕ್ಷಿತಾ ಜೈನ್.

varthajala
0

ಗೋಪಾಲನ್ ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿನಿ ಅಕ್ಷಿತಾ ಜೈನ್, ಐಸಿಎಸ್‌ಇ 2023 ಪರೀಕ್ಷೆಯಲ್ಲಿ ಅಸಾಧಾರಣ ಮಾಡಿದ್ದು 99% ಅಂಕಗಳಿಸಿದ್ದಾರೆ. ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ಬೆಂಬಲದಿಂದ ಅಕ್ಷಿತಾ ಗಮನಾರ್ಹ ಸಾಧನೆ ಮಾಡಿದ್ದಾಳೆ. 

"ನಾನು 1 ನೇ ತರಗತಿಯಿಂದ ಗೋಪಾಲನ್ ನ್ಯಾಷನಲ್ ಸ್ಕೂಲ್‌ನಲ್ಲಿ ಓದುತ್ತಿದ್ದೇನೆ ಮತ್ತು ನನ್ನ ಶಾಲೆಯು ನನಗೆ ಅಪಾರ ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡಿದೆ" ಎಂದು ಅಕ್ಷಿತಾ ಶಾಲೆಯ ಬಗ್ಗೆ ತನ್ನ ಕೃತಜ್ಞತೆಯನ್ನು ಭಾವವನ್ನು ವ್ಯಕ್ತಪಡಿಸುತ್ತಾಳೆ. ತನ್ನ ಶಿಕ್ಷಕರ ಬೋಧನಾ ಗುಣಮಟ್ಟದ ಬಗ್ಗೆ ಮಾತನಾಡುತ್ತಾ "ನನ್ನ ಎಲ್ಲಾ ಶಿಕ್ಷಕರ ಪ್ರಯತ್ನದಿಂದಾಗಿ ನಾನು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು. ಓದಲು ಅವರು ನೀಡಿದ ಮಾರ್ಗದರ್ಶನ ಪರೀಕ್ಷಾ ಸಮಯದಲ್ಲಿ ನಾನು ಸ್ಥಿರವಾಗಿರಲು ನನಗೆ ಸಹಾಯ ಮಾಡಿತು. ಅಲ್ಲದೆ  ಅಕ್ಷಿತಾ ತನ್ನ ಪೋಷಕರಿಗೆ ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 

ತಮ್ಮಿಂದ ಸಾಧ್ಯವಾದ ಎಲ್ಲಾ ರೀತಿಯಲ್ಲಿ ಪ್ರೋತ್ಸಾಹಿಸಿ ಮತ್ತು ನನಗೆ  ಬೆಂಬಲ ನೀಡಿದರ ಪರಿಣಾಮ ಈ ಸಾಧನೆ ಸಾಧ್ಯವಾಗಿದೆ ಎನ್ನುತ್ತಾರೆ. 
ಅಕ್ಷಿತಾ ಅವರ ಅತ್ಯುತ್ತಮ ಸಾಧನೆಯು ಸಹ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ. ಗೋಪಾಲನ್ ನ್ಯಾಷನಲ್ ಸ್ಕೂಲ್ ಅಕ್ಷಿತಾ ಅವರ ಅಸಾಧಾರಣ ಸಾಧನೆಗೆ ಅಭಿನಂದಿಸಿದೆ . ಮತ್ತು  ಅವರ ಮುಂದಿನ ಪ್ರಯತ್ನಗಳಲ್ಲಿ ನಿರಂತರ ಯಶಸ್ಸನ್ನು ಸಿಗಲಿ ಎಂದು ಹಾರೈಸಿದೆ.

Post a Comment

0Comments

Post a Comment (0)