*ಕಡ್ಡಾಯ ಮತದಾನಕ್ಕಾಗಿ ಜಾಗ್ರತಿ ಮೂಡಿಸಲು ದೀಪ ಬೆಳಗಿಸುವ ಜಾಥಾ*

varthajala
0

ಬೆಂಗಳೂರು: ಬಿಬಿಎಂಪಿಯ ಕಂದಾಯ ಅಧಿಕಾರಿ ಹೆಬ್ಬಾಳ ವಿಭಾಗ, ಸಂಜಯ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆನಾಳೆ  ಶುಕ್ರವಾರ ಸಂಜೆ 6 ಗಂಟೆಗೆ ಕಡ್ಡಾಯ ಮತದಾನಕ್ಕಾಗಿ ಜಾಗೃತಿ ಮೂಡಿಸಲು ದೀಪ ಬೆಳಗಿಸುವ ಮೂಲಕ ಜಾಥಾ ಕಾರ್ಯಕ್ರಮವನ್ನು ಹೆಬ್ಬಾಳದ ಆರ್.ಎಂ.ವಿ. ಕ್ಲಬ್ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ.

 ಬಿಬಿಎಂಪಿಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಉದ್ಘಾಟಿಸಲಿರುವ ಈ ಕಾರ್ಯಕ್ರಮಕ್ಕೆ ವಲಯ ಆಯುಕ್ತರಾದ ರವೀಂದ್ರ ಪಿ.ಎನ್, ಅಪರ ಜಿಲ್ಲಾ ಚುನಾವಣಾಧಿಕಾರಿ (ಉತ್ತರ) ಮತ್ತು ಜಂಟಿ ಆಯುಕ್ತರು (ಮಹದೇವಪುರ) ಲಿಂಗಮೂರ್ತಿ,  ಪೂರ್ವ ಜಂಟಿ ಆಯುಕ್ತರಾದ ಪಲ್ಲವಿ ಕೆ.ಆರ್., ಚುನಾವಣೆ ಅಧಿಕಾರಿಗಳಾದ ಪ್ರಸನ್ನ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಶೇಷ ಆಹ್ವಾನಿತರಾಗಿ ಹೆಬ್ಬಾಳ ವಿಭಾಗದ ಕಂದಾಯ ಅಧಿಕಾರಿಗಳಾದ ಶ್ರೀನಿವಾಸ್ ಮೂರ್ತಿ, ಆರ್.ಟಿ.ನಗರದ   ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಗಿರೀಶ್, ಎಸ್.ಜಿ.ಸಿ.ಇ ಯ ಪ್ರಾಂಶುಪಾಲರಾದ ಆರ್.ಲತಾ ಕುಮಾರಿ, ಹೆಬ್ಬಾಳ ವಿಭಾಗದ ಆರೋಗ್ಯ ಅಧಿಕಾರಿಗಳಾದ ಡಾ.ನಯನತಾರ ಪಾಟೀಲ್, ಸಹಾಯಕ ಕಾರ್ಯನಿರ್ವಾಹಕ  ಅಭಿಯಂತರರಾದ(ಘನತ್ಯಾಜ್ಯ) ಶ್ರೀ ರುದ್ರಮುನಿ, ಸಹಾಯ ಕಂದಾಯ ಅಧಿಕಾರಿಗಳು ಹಾಗೂ ಸ್ವೀಪ್ ಉಸ್ತುವಾರಿಗಳಾದ ಬಿ.ಟಿ.ಶಿವಕುಮಾರ್, ಹೆಬ್ಬಾಳ ವಿಭಾಗದ ಸಹ ಕಂದಾಯ ಅಧಿಕಾರಿಗಳಾದ ಶ್ರೀ ನಿರಂಜನ್, ಸಹಾಯಕ ಕಂದಾಯ ಅಧಿಕಾರಿಗಳಾದ ಮುಯಿಬ್ ಉಲ್ಲಾ, ಬಿಬಿಎಂಪಿ ನೌಕರರು ಮತ್ತು ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮತ್ತು ಸಾರ್ವಜನಿಕರು ಭಾಗವಹಿಸಲಿದ್ದಾರೆ.

Post a Comment

0Comments

Post a Comment (0)