ಶ್ರೀಮಜ್ಜಗದ್ಗುರು ಕೂಡಲಿ ಶೃಂಗೇರಿ ಪೀಠದ ನಿಯೋಜಿತ ಉತ್ತರಾಧಿಕಾರಿಗಳಾದ ಶ್ರೀ ದತ್ತರಾಜ ದೇಶಪಾಂಡೇ ಜೀ ಅವರ ಪರಿಚಯ ನಿಮಗಾಗಲಿ..
ಕಿರಿಯ ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿರುವ ನಮ್ಮೆಲ್ಲರ ಪ್ರೀತಿಯ ದತ್ತಣ್ಣ ಅವರು ಎಂಥವರು, ಅವರ ಅರ್ಹತೆಗಳೇನು ಅನ್ನೋದನ್ನ ತಿಳಿಸುವುದು ನನ್ನ ಉದ್ದೇಶ..
*********
ಹೆಸರು: ಶ್ರೀ ದತ್ತರಾಜ್ ದೇಶಪಾಂಡೆ.
#ತಂದೆ_ತಾಯಿ -
ಶ್ರೀ ಅಶೋಕ ರಾವ್ ಹಾಗೂ ಶ್ರೀಮತಿ ಸೀತಾಲಕ್ಷ್ಮಿ ದೇಶಪಾಂಡೆ.
ಜನ್ಮಸ್ಥಾನ : ಧಾರವಾಡ
#ಅಧ್ಯಯನ:
ಋಗ್ವೇದ ಸಲಕ್ಷಣ ಘನಾಂತ, ಯಜುರ್ವೇದ ಹಾಗೂ ಸಾಮವೇದ ಮೂಲಾಂತ.
ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ ಮತ್ತು ಕಲ್ಪ ಎಂಬ ಆರು ವೇದಾಂಗಗಳ ಅಧ್ಯಯನ ಸಂಪೂರ್ಣ.
ಧರ್ಮಶಾಸ್ತ್ರ, ಹಾಗೂ ವೇದಾಂತ ಶಾಸ್ತ್ರ, ಜ್ಞಾನೇಶ್ವರಿ, ದಾಸಬೋಧ ಮುಂತಾದ ಮರಾಠೀ ಧಾರ್ಮಿಕ ಗ್ರಂಥಗಳ ಅಧ್ಯಯನ.
#ಗುರುಗಳು:
ಋಗ್ವೇದ: ಮಾರ್ತಾಂಡಪುರ ಶಂಕರ ಭಟ್ ಘನಪಾಠಿಗಳು.
ವೇದಾಂಗಗಳು: ಆಚಾರ್ಯ ಶ್ರೀ ನರೇಂದ್ರ ಕಾಪರೆ
ಯಜುರ್ವೇದ : ಶ್ರೀ ರಾಮಚಂದ್ರ ಘನಪಾಠಿಗಳು, ಚೆನ್ನೈ
ಸಾಮವೇದ: ಶ್ರೀ ವಿಜಯ್ ಕುಮಾರ್ ಶರ್ಮಾ, ಕಾಶಿ.
ಶಾಸ್ತ್ರಗಳು: ಶ್ರೀ ಜ್ಞಾನೇಂದ್ರ ಸಪಕೋಟಾ, ಕಾಶಿ.
#ಸಾಧನೆಗಳು;
2004 ರಿಂದ 2010 ರ ವರೆಗೆ ಬೀದರ್ ಜಿಲ್ಲೆಯ ಶ್ರೀ ಮಾಣಿಕ್ಯ ಪ್ರಭು ಸಂಸ್ಥಾನದಲ್ಲಿ ಅಧ್ಯಾಪಕರಾಗಿ ಹಾಗೂ ಮಾಣಿಕ ರತ್ನ ಪತ್ರಿಕೆಯ ತೆಲುಗು ಅವತರಣಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ನಂತರ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಸ್ವರ್ಣ ಪದಕ ಗಳಿಸಿದ್ದಾರೆ.
ಇವರು ಇಂಡಾಲಜಿ, ವೈದಿಕ ವಿಜ್ಞಾನ, ಡಾಕ್ಯುಮೆಂಟರಿ ಫಿಲ್ಮ್ ನಿರ್ಮಾಣ, ಫೋಟೋಗ್ರಫಿ, ಆರ್ಕಿಟೆಕ್ಚರ್, ಕಂಪ್ಯೂಟರ್, ಪುಸ್ತಕ ಪ್ರಕಾಶನ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
IIT ಮದ್ರಾಸ್ ಹಾಗೂ IIT ಮುಂಬೈ ಜೊತೆ ಅನೇಕ ಪ್ರಾಜೆಕ್ಟ್‌ಗಳ ನಿರ್ವಹಣೆ ಹಾಗೂ ಸೆಮಿನಾರ್‌ಗಳ ಆಯೋಜನೆಯ ಅನುಭವ ಪಡೆದಿದ್ದಾರೆ.
2018 ರಿಂದ ಭಾರತೀಯ ಶಿಕ್ಷಣ ಮಂಡಲದ ಪೂರ್ಣಾವಧಿ ಕಾರ್ಯಕರ್ತರಾಗಿ ಐದು ವರ್ಷಗಳ ಕಾಲ ದೇಶದೆಲ್ಲೆಡೆ ಸಂಚಾರ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಗುರುಕುಲಗಳಿಗೆ ಭೇಟಿ ನೀಡಿ ಸಂಘಟನೆ, ನೂತನ ಗುರುಕುಲಗಳ ನಿರ್ಮಾಣ, ಬೃಹತ್ ಕಾರ್ಯಕ್ರಮಗಳ ಆಯೋಜನೆ ಇತ್ಯಾದಿಗಳ ವಿಸ್ತೃತ ಅನುಭವ ಪಡೆದಿದ್ದಾರೆ.
ದೇಶದ ನಾಲ್ಕು ವಿಶ್ವವಿದ್ಯಾಲಯಗಳ ಬೋರ್ಡ್ ಆಫ್ ಸ್ಟಡೀಸ್ ಸದಸ್ಯರಾಗಿ ಮತ್ತು ರಾಷ್ಟ್ರ ಮಟ್ಟದ ವೈದಿಕ ಪ್ರಶಸ್ತಿಗಳ ಆಯ್ಕೆ ಸಮಿತಿಗಳ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಇವರು ಹತ್ತು ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯ ಹೊಂದಿದ್ದಾರೆ ಹಾಗೂ ಐದು ಭಾಷೆಗಳಲ್ಲಿ ಬರೆಯಬಲ್ಲರು.
ಶ್ರೀ ದತ್ತರಾಜ್ ಅವರು ಒಂಭತ್ತು ಪುಸ್ತಕಗಳನ್ನು ರಚಿಸಿದ್ದಾರೆ ಹಾಗೂ 300ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ, ಹಲವಾರು ಸಂಶೋಧನಾ ಲೇಖನಗಳು ಪ್ರಕಟವಾಗಿವೆ.