ಬೆಂಗಳೂರು, ಏಪ್ರಿಲ್ 11 (ಕರ್ನಾಟಕ ವಾರ್ತೆ) : ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಸಂಯೋಜಿತ ಪದವಿ ಮಟ್ಟದ ಪರೀಕ್ಷೆ 2023 ನ್ನು ಸಹಾಯಕ ಸೆಕ್ಷನ್ ಆಫೀಸರ್, ಸಹಾಯಕ ಲೆಕ್ಕ ಪರಿಶೋಧನಾ ಅಧಿಕಾರಿ, ಸಹಾಯಕ ಲೆಕ್ಕಪತ್ರ ಅಧಿಕಾರಿ, ಆದಾಯ ತೆರಿಗೆ, ಕೇಂದ್ರ ಅಬಕಾರಿ ಮತ್ತು ಸಿಬಿಐಸಿಯಲ್ಲಿ ಇನ್ಸ್‍ಪೆಕ್ಟರ್, ಇಡಿ ನಲ್ಲಿ ಎಇಓ ಮತ್ತು ಸಿಬಿಐ, ಎನ್‍ಐಎ, ಎನ್‍ಸಿಬಿ ನಲ್ಲಿ ಸಬ್‍ಇನ್ಸ್‍ಪೆಕ್ಟರ್, ಕಿರಿಯ ಅಂಕಿಅಂಶ ಅಧಿಕಾರಿ, ಎನ್‍ಹೆಚ್‍ಆರ್‍ಸಿ ಸಂಶೋಧನಾ ಸಹಾಯಕ, ಹಿರಿಯ ಸೆಕ್ರೆಟರಿಯೇಟ್ ಸಹಾಯಕ, ಅಪ್ಪರ್ ಡಿವಿಜನ್ ಗುಮಾಸ್ತ, ಅಂಚೆ ಸಹಾಯಕ, ವಿಂಗಡಣೆ ಇತ್ಯಾದಿ ಹುದ್ದೆಗಳಿಗೆ ಎರಡು ಹಂತಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ಜುಲೈ 2023 ರಲ್ಲಿ ನಡೆಸಲಿದೆ.
ಅರ್ಜಿಗಳನ್ನು ಆನ್‍ಲೈನ್ ಮೂಲಕ ಮೇ 3, 2023 ರೊಳಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿಧಾನ ಮತ್ತು ಅಂತರ್ಜಾಲದಲ್ಲಿ ಅರ್ಜಿ ಸಲ್ಲಿಸಲು ಎಸ್‍ಎಸ್‍ಸಿ ಮುಖ್ಯಾಲಯದ ಜಾಲತಾಣ https://ssc.nic.in ನಲ್ಲಿ ಮಾತ್ರ ಸಲ್ಲಿಸಬೇಕು. ವಿವರಗಳಿಗೆ ಅಧಿಸೂಚನೆಯ ಅನುಬಂಧ-3 ಮತ್ತು ಅನುಬಂಧ - 4 ನ್ನು ನೋಡಬಹುದು.
ಪರೀಕ್ಷಾ ದಿನಾಂಕ, ಅಡ್ಮಿಟ್ ಕಾರ್ಡ್, ಪರೀಕ್ಷೆಯ ವಿವರಗಳು ಇತ್ಯಾದಿ ಮಾಹಿತಿಗಾಗಿ ಅಭ್ಯರ್ಥಿಗಳು ನಿಯಮಿತವಾಗಿ ಎಸ್‍ಎಸ್‍ಸಿ ಮುಖ್ಯಾಲಯ ನವದೆಹಲಿಯ ಜಾಲತಾಣ https://ssc.nic.in ಮತ್ತು ಸ್ಥಳೀಯ ಕಚೇರಿ ಬೆಂಗಳೂರಿನ ಜಾಲತಾಣ www.ssckkr.kar.nic.in ಪಡೆಯಬಹುದು ಅಥವಾ ಸಹಾಯವಾಣಿ 080-25502520 ಅಥವಾ 9483862020 ನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.