GSB : ಗೌಡ ಸಾರಸ್ವತ ಬ್ರಾಹ್ಮಣರು ಆಚರಿಸುವ KODIAL ಕೊಡಿಯಾಲ್ ತೇರಿನ ಇತಿಹಾಸ

varthajala
0

 

ಮಂಗಳೂರಿನಲ್ಲಿ ಗೌಡ ಸಾರಸ್ವತ ಬ್ರಾಹ್ಮಣರು ಆಚರಿಸುವ ಕೊಡಿಯಾಲ್ ತೇರಿನ ಇತಿಹಾಸ ಏನು ಮತ್ತು ಇದು ಯಾಕೆ ವಿಶಿಷ್ಟ ಆಚರಣೆ?

ನಾನು ಗೌಡ ಸಾರಸ್ವತ ಬ್ರಾಹ್ಮಣ (GSB) ಕುಟುಂಬಕ್ಕೆ ಸೇರಿದವಳು ಆದ್ದರಿಂದ ಇದರ ಬಗ್ಗೆ ಮಾನ್ಯ ವಿವರಣೆ ಕೊಡಲು ಪ್ರಯತ್ನಿಸುತ್ತೇನೆ. ಕೊಂಕಣಿಯಲ್ಲಿ —ಮಂಗಳೂರನ್ನು 'ಕೋಡಿಯಾಲ್ ' ಎಂದು ಮತ್ತು ರಥೋತ್ಸವವನ್ನು 'ತೇರು' ಎಂದು ಹೇಳಲಾಗುತ್ತದೆ.

'ಕೊಡಿಯಾಲ್ ತೇರು' —

೧). ಇದರ ಆಚರಣೆ ಯಾವಾಗ ,ಮತ್ತೆಲ್ಲಿ ನಡೆಯುವಂತದ್ದು?

ಪ್ರತಿ ವರ್ಷ, ಜನವರಿ ಅಥವ ಫೆಬ್ರವರಿ ತಿಂಗಳಲ್ಲಿ ; ಮಂಗಳೂರಿನ 'ಕಾರ್ಸ್ಟ್ರೀಟ್/ಟೆಂಪಲ್ ಸ್ಕ್ವೇರ್ಎಂಬ ಸ್ಥಳದ ; ಕೊಂಕಣಿ ಸಮುದಾಯದ 'ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ' ರಥ ಸಪ್ತಮಿಯ ದಿನದಂದು ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ.



೨)ಈ ದೇವಸ್ಥಾನದ ಇತಿಹಾಸವೇನು ?

ಮಂಗಳೂರಿನ 'ಶ್ರೀ ವೆಂಕಟರಮನ ದೇವಸ್ಥಾನ' ; ಕೊಂಕಣ ಪ್ರದೇಶದ (ಭಾರತದ ಪಶ್ಚಿಮ ಕರಾವಳಿಯ), ವೀರ ವೆಂಕಟೇಶ ದೇವರಿರುವ (ವಿಷ್ಣುವಿನ ಅವತಾರ), ಅತೀ ಪ್ರಸಿದ್ಧ ದೇವಾಲಯ -ಗಳಲ್ಲಿ ಒಂದಾಗಿದೆ ; ಇದು ೩00 ವರ್ಷಗಳಿಗಿಂತಲೂ ಹಳೆಯ ಇತಿಹಾಸವನ್ನು ಹೊಂದಿದೆ. ಪ್ರತಿವರ್ಷ ರಥ ಸಪ್ತಮಿಯ, ವೈಭವದ ಭಾಗವಾಗಲು ದೇಶದ ವಿವಿಧ ಭಾಗ ಮತ್ತು ವಿದೇಶದಿಂದಲೂ ಲಕ್ಷಾಂತರ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅದೇ ಇದರ ವಿಶೇಷತೆ.

). ಈ ದೇವಸ್ಥಾನದವರು ಹಿಂದೂ ಧರ್ಮದ ಯಾವ ತತ್ವವನ್ನು ಅನುಸರಿಸುತ್ತಾರೆ ?

ನಮ್ಮ ಆಚರಣೆಗಳು ಮಾಧ್ವ-ವೈಷ್ಣವ ತತ್ವಗಳನ್ನು ಅನುಸರಿಸುತ್ತವೆ ಮತ್ತು ಕಾಶಿ ಮಠ ಸಂಸ್ಥಾನಕ್ಕೆ ಸಂಯೋಜಿತವಾಗಿವೆ. ಕಾಶಿಮಠದ ಪ್ರಸ್ತುತ ಮುಖ್ಯಸ್ಥರು(ಮಠಾಧಿಪತಿ)ಸಂಯಮಿಂದ್ರ ತೀರ್ಥ ಸ್ವಾಮಿ.

೪). ಈ ಆಚರಣೆ ಎಷ್ಟು ದಿನ ನಡೆಯುತ್ತದೆ ?

ಇದು ಸುಮಾರು ೬ ದಿನಗಳ ಉತ್ಸವ. ಮೊದಲ ಮೂರು ದಿನಗಳಲ್ಲಿ ಅನೇಕ ವಿಶೇಷ ಆಚರಣೆ, ಪೂಜೆಯನ್ನು ನಡೆಸಲಾಗುತ್ತದೆ. ನಂತರ ನಾಲ್ಕನೇ ದಿನ 'ಸಾನು ತೇರು' (ಸಣ್ಣ ರಥೋತ್ಸವ) ಮತ್ತು ಐದನೇ ದಿನ 'ಹೋಡು ತೇರು' (ದೊಡ್ಡ ರಥೋತ್ಸವ) ಆಚರಣೆ ಮಾಡಲಾಗು-ತ್ತದೆ. ಆರನೇ/ಅಂತಿಮ ದಿನದಂದು, ಕಾರ್ಸ್ಟ್ರೀಟ್ ನ್ನ ಬೀದಿಗಳಲ್ಲಿ ; ಮುಖ್ಯವಾಗಿ ಪುರುಷರು ಮತ್ತು ಹುಡುಗರಿಂದ ಒಕ್ಕುಲು (ಹೋಳಿ) ಆಡಲಾಗುತ್ತದೆ. ಎಲ್ಲಾ ದಿನವೂ ಭಕ್ತರಿಗೆ ಬೆಳಿಗ್ಗಿನ (ಪೆಜ್ಜೆ ಜವನ) ಮತ್ತು ರಾತ್ರಿಯ ಊಟವು, ಪ್ರಸಾದ ರೂಪದಲ್ಲಿ ದೇವಾಲಯದ ಒಳ ಮತ್ತು ಹೊರಾಂಗಣದಲ್ಲಿ ನೀಡಲಾಗುತ್ತದೆ.


೫)ಇದರ ವಿಶೇಷತೆ ಮತ್ತೆ ಆಚರಣೆಯ ಕಥೆ ಏನು?

'ವೀರ ವೆಂಕಟೇಶ್ವರ' ಮೂರ್ತಿಯನ್ನ ಚಿನ್ನದ ಪಲ್ಲಂಕ್ಕಿಯ ಮೇಲೆ ಕೂರಿಸಿ, ಅವರ ಪ್ರೀತಿಯ ಭಕ್ತರು, ದೇವಸ್ಥಾನದ ನೆರೆಹೊರೆಯ ಬೀದಿಯಲ್ಲಿ ಕೊಂಡೊಯ್ಯುತ್ತಾರೆ.

ಮತ್ತಿದರ ಹಿಂದಿನ ಆಚರಣೆಯ ವಿಶಿಷ್ಟತೆ, ನಂಬಿಕೆ ಹೀಗಿದೆ — ಪ್ರತಿ ವರ್ಷವೂ ಈ ರಥ ಸಪ್ತಮಿಯ ಸಮಯದಲ್ಲಿ ; ಸ್ವತ: ದೇವರು ಬೀದಿಗಿಳಿದು, ದೇವಸ್ಥಾನದ ಸುತ್ತಲಿನ ಮನೆಗಳಿಗೆ ಹೋಗಿ ; ಭಕ್ತರನ್ನ ಭೇಟಿ ನೀಡಿ, ಆಶೀರ್ವದಿಸುತ್ತಾರೆ ಅಂತ. ಅದಲ್ಲದೆ, ಅಕ್ಕಪಕ್ಕದ ಎಲ್ಲಾ ಮನೆಯವರೂ ತಮ್ಮ ಹೊರಾಂಗದಲ್ಲಿ ದೀಪ ಹಚ್ಚಿ ದೇವರನ್ನು ಆಹ್ವಾನಿಸುವ ಕ್ರಮವೂ ಇದೆ.


-ಅಂಕಿತಾ ಕಾಮತ್

Post a Comment

0Comments

Post a Comment (0)