ನೀವು ಕಾರನ್ನು ಓಡಿಸುವಾಗ ನಿಮ್ಮಶೈಲಿ ಸರಿಯಾಗಿದ್ದರೆ ನಿಮ್ಮ ಜೊತೆಯಿರುವವರಿಗೆ ವಿಶ್ವಾಸ ಬಂದೇ ಬರುತ್ತದೆ, ಅದಕ್ಕಾಗಿ ನೀವು ಬೇರೇನೂ ಮಾಡಬೇಕಿಲ್ಲ.
ಸರಿಯಾಗಿ ಕಾರನ್ನು ಓಡಿಸುವ ರೂಢಿ ಬೆಳೆಸಿಕೊಳ್ಳುವುದು ನಿಮಗೇ ಹೆಚ್ಚು ಅನುಕೂಲ ಮತ್ತು ಫಲಕಾರಿ. ಇದರಿಂದ ನಿಮ್ಮ ಕಾರಿನ ಸ್ಥಿತಿಯೂ ಚೆನ್ನಾಗಿರುತ್ತದೆ. ಕೆಳಗಿನ ಸಲಹೆಗಳತ್ತ ಸ್ವಲ್ಪ ಗಮನಕೊಡಿ…
- ಕಾರು ಸ್ಟಾರ್ಟ ಮಾಡಿದ ಮೇಲೆ ಅನಗತ್ಯವಾಗಿ ಆಕ್ಸಲರೇಟ ಮಾಡಬೇಡಿ.
- ಕಾರು ಹೊರಡುವ ಮುನ್ನ ಮೊದಲ ಗೇರ ಹಾಕಿದ ನಂತರ ಕ್ಲಚ್ಚನ್ನು ಸಾವಕಾಶವಾಗಿ ಬಿಡಿ.. ಕಾರು ನಯವಾಗಿ ಮಂದೆ ಹೋಗುವಹಾಗೆ ನೋಡಿಕೊಳ್ಳಿ..
- ಗೇರ ಬದಲಾಯಿಸುವಾಗ ಕ್ಲಚ್ಚನ್ನು ಪೂರ್ಣವಾಗಿ ಒತ್ತಿ ಗೇರ ಬದಲಾಯಿಸಿರಿ. ನೀವು ಗೇರ ಬದಲಾಯಿಸಿದ್ದು ನಿಮಗೆ ಮಾತ್ರ ತಿಳಿದಿರಬೇಕು. ಕಾರಿಗೆ ಧಕ್ಕೆ ಕೊಟ್ಟವರಂತೆ ಆಗಬಾರದು.
- ಅಗತ್ಯವಿಲ್ಲದೆ ವಾಹನದ ವೇಗವನ್ನು ಹೆಚ್ಚುಮಾಡುವದು, ನಂತರ ಗಕ್ಕನೆ ಬ್ರೆಕ್ ಹಾಕುವುದು ಮಾಡಬೇಡಿ. ಇದರಿಂದ ಹೆಚ್ಚು ಇಂಧನ ವ್ಯಯವಾಗುತ್ತದೆ. ಸಾಧ್ಯವಿದ್ದಷ್ಟು ವಾಹನವನ್ನು ಒಂದೇ ವೇಗದಲ್ಲಿ ಓಡಿಸಿ.
- ವಾಹನದ ವೇಗವನ್ನು ಕಡಿಮೆ ಮಾಡಬೇಕೆಂದಾಗ, ಕ್ಲಚ್ ಹಾಗೂ ಬ್ರೆಕನ್ನು ಸಾವಕಾಶವಾಗಿ ಉಪಯೋಗಿಸಿ.
- ಕಾರನ್ನು ನಿಲ್ಲಿಸುವಾಗ ಸ್ವಲ್ಪ ಮೊದಲೇ ವೇಗವನ್ನು ಕಡಿಮೆ ಮಾಡಿ ಸಾವಕಾಶವಾಗಿ ಬ್ರೇಕನ್ನು ಹಾಕುವದು ಒಳಿತು. ನಿಲ್ಲಿಸುವ ಸ್ಥಾನದವರೆಗೆ ವೇಗವಾಗಿ ಬಂದು ಒಮ್ಮೆಲೇ ಬ್ರೇಕ ಹಾಕುವುದು ಸರಿಯಲ್ಲ.
- ಕಾರು ನಡೆಸುವಾಗ ಪೂರ್ಣತಹ ರಸ್ತೆಯ ಮೇಲೆ ಗಮನವಿಡಿ. ನಿಮ್ಮ ಗಮನ ಬೇರೆಡೆ ಹೋದರೆ ನೀವು ಅನಿರೀಕ್ಷಿತವಾಗಿ ಬ್ರೇಕನ್ನು ಹಾಕುವ ಪ್ರಸಂಗ ಬರಬಹುದು.
- ರಸ್ತೆಯ ಮೇಲೆ ಹೆಚ್ಚು ಗಮನವಿದ್ದರೆ ಅಲ್ಲಿರುವ ತೆಗ್ಗು, ಗುಳಿ, ರೋಡ ಹಂಪ ಗಳನ್ನು ನೀವು ನಯವಾಗಿ ಎದುರಿಸಬಲ್ಲಿರಿ. ಇಲ್ಲದಿದ್ದಲ್ಲಿ ಇಡೀ ಕಾರು ಕಂಪಿಸಿ ಜೊತೆಯಲ್ಲಿರುವವರ ಹೀಯಾಳಿಕೆಗೆ ಗುರಿಯಾಗುವಿರಿ.
- ತಿರುವುಗಳು ಬಂದಾಗ ಸ್ಟಿಯರಿಂಗನ್ನು ನಯವಾಗಿ ತಿರುಗಿಸಿ, ಹಾಗೇ ನಯವಾಗಿ ಸ್ವಸ್ಥಾನಕ್ಕೆ ಬರುವಂತೆ ಮಾಡಿ. ಜರ್ಕಗಳನ್ನು ಕೊಡಬೇಡಿ.
- ಸರಳವಾದ ದಾರಿಯಲ್ಲಿಯೂ ಸ್ಟಿಯರಿಂಗನ್ನು ಸ್ಹಲ್ಪ ಹೊರಳಾಡಿಸುವ, ಅನ್ಯಥಾ ಹಾರ್ನ ಬಾರಿಸುವ ರೂಢಿ ಕೆಲವರಲ್ಲಿರುತ್ತದೆ. ಅದು ಅನಗತ್ಯ.
- ನಿಮ್ಮಲ್ಲಿ ಕಾರನ್ನು ಅತಿ ವೇಗವಾಗಿ ಚಲಾಯಿಸುವ ಕೌಶಲ್ಯವಿದ್ದಲ್ಲಿ, ಅದನ್ನು ಅನ್ಯಥಾ ಪ್ರದರ್ಶಿಸಬೇಡಿ. ಜೊತೆಗಿದ್ದವರು ಹೆದರಬಹುದು.
- ಎದುರಿಗಿಂದ ಬೇರೊಂದು ವಾಹನ ವೇಗವಾಗಿ ಬರುತ್ತಿರುವಾಗ, ನಿಮ್ಮ ಮುಂದಿನ ವಾಹನವನ್ನು ಓವರಟೇಕ್ ಮಾಡಬೇಡಿ. ನಿಮ್ಮ ಜೊತೆಗಿರುವವರು ಭಯಪಡಬಹುದು. ಇದು ವಿಶ್ವಾಸರ್ಹ ಕೆಲಸವಲ್ಲ.
- SOURCE : -ಮುಕುಂದ ಕಡಕೋಳ