ಬೆಂಗಳೂರು 03.03.2023: "ಅಂತರ ರಾಜ್ಯ ಏಕ್ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮ"ದ ಅಂಗವಾಗಿ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಿರುವ ಅಸ್ಸಾಂ ಮತ್ತು ಮೇಘಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳೊಂದಿಗೆ ರಾಜಭವನದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಂವಾದ ನಡೆಸಿದರು.
ನಮ್ಮ ದೇಶ ವಿವಿಧ ಸಂಸ್ಕೃತಿ, ಅನೇಕ ಭಾಷೆಗಳನ್ನು ಹೊಂದಿದೆ. ವಿವಿಧತೆಯಲ್ಲಿ ಏಕತೆ ಕಾಣುವ ದೇಶ ನಮ್ಮದು. ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ದೇಶದಲ್ಲಿ ಮುನ್ನಡೆಯಬೇಕು. ಸೌರ್ಹಾದತೆ, ಏಕತೆ, ಸಮಾನತೆ ಸಾರುವ ಮೂಲಕ ಏಕ ಭಾರತ ಮತ್ತು ಶ್ರೇಷ್ಠ ಭಾರತವನ್ನು ಕಟ್ಟಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ನಿರಂತರವಾಗಿ ವಿದ್ಯಾರ್ಥಿಯಾಗಿರಬೇಕು. ಜೀವನ ಪೂರ್ತಿ ಕಲಿಕೆಯಲ್ಲಿ ತೊಡಗಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ನಮ್ಮ ದೇಶಕ್ಕೆ ಮಹನೀಯರ ತಮ್ಮ ತ್ಯಾಗಗಳಿಂದ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅದನ್ನು ಕಾಪಾಡಿಕೊಳ್ಳಬೇಕು ಹಾಗೂ ನಮಗೆ ಸಾಕಷ್ಟು ನೀಡಿರುವ ದೇಶಕ್ಕೆ ನಾವು ಚಿರಋಣಿಯಾಗಿರಬೇಕು ಎಂದು ತಿಳಿಸಿದರು.
ಡಾ. ಶಾಲಿನಿ. ರಜನೀಶ್. ಐ.ಎ.ಎಸ್. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಯುವಜನ ಇಲಾಖೆ. ಸಬಲೀಕರಣ ಮತ್ತು ಕ್ರೀಡೆ, ಯುವಜನ ಇಲಾಖೆ. ಸಬಲೀಕರಣ ಮತ್ತು ಕ್ರೀಡೆ ಇಲಾಖೆಯ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್, ಉಪ ನಿರ್ದೇಶಕರಾದ ಅನಿಲ್ ಕುಮಾರ್, ಐಐಎಂ ಬೆಂಗಳೂರು ನ ಮ್ಯಾನೇಜರ್ ಜಿ ಶಿವ ಕೋಟಿ ರೆಡ್ಡಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.