ಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗಬಾರದು:ಯುವಶಕ್ತಿಯಿಂದ ದೇಶ ಅಭಿವೃದ್ದಿ-ಜನಸೇವಾ ವಿದ್ಯಾ ಕೇಂದ್ರ

varthajala
0

ಚನ್ನಸಂದ್ರ: ಜನಸೇವಾ ಕೇಂದ್ರ ಸಭಾಂಗಣದಲ್ಲಿ ಶಾರದ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ.

ಕಾರ್ಯಕ್ರಮವನ್ನು ಜನಸೇವಾ ವಿದ್ಯಾ ಕೇಂದ್ರದ ಗೌರವ ಕಾರ್ಯದರ್ಶಿಗಳಾದ ನಿರ್ಮಲ್ ಕುಮಾರ್ ಜೀರವರು ಮತ್ತು ಗಾಂಧಿ ಓಲ್ಡ್ ಏಜ್ ಹೋಮ್ ಅಧ್ಯಕ್ಷರಾದ ಡಾ. ಭೂಪಾಲಂ ಸುನೀಲ್ ರವರು,  ಹಳೆಯ ವಿದ್ಯಾರ್ಥಿ ಶ್ಯಾಮ್ ಪ್ರಸಾದ್ ರವರು, ಮುಖ್ಯೋಪಾಧ್ಯಯರಾದ ಮಹಂತೇಶ್, ಸಮಾಜ ಸೇವಕರಾದ ಸಂದೀಪ್ ಶೆಟ್ಟಿರವರು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು.

ಪ್ರಭಂದ ಸ್ಪರ್ಧೆ,ರಸಪ್ರಶ್ನೆ, ಕಂಠಪಾಠ, ಆಶುಭಾಷಣ,ಸ್ಮರಣಾ ಶಕ್ತಿ, ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.



ಇದೇ ಸಂದರ್ಭದಲ್ಲಿ ಡಾ. ಭೂಪಲಂರವರು ಸುನೀಲ್ ಮಾತನಾಡಿ ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು, ಪ್ರತಿಯೊಬ್ಬರಿಗೂ ಶಿಕ್ಷಣ ಲಭಿಸಬೇಕು. ವಿದ್ಯಾವಂತ ಸಮಾಜ ಇದ್ದಾಗ ಮಾತ್ರ ದೇಶ ಮುನ್ನಡೆಯಲು ಸಾಧ್ಯ.

ದೇಶದಲ್ಲಿ ಯುವ ಶಕ್ತಿಯ ಕೊರತೆ ಇಲ್ಲ, ಸರಿಯಾದ ಮಾರ್ಗದಲ್ಲಿ ಯುವ ಶಕ್ತಿಯನ್ನ ಸದ್ಬಳಕೆ ಮಾಡಿಕೊಳ್ಳಬೇಕು.

ಯುವ ಸಮುದಾಯ ಗುರು ಹಿರಿಯರು ಮಾರ್ಗದರ್ಶನದಲ್ಲಿ ಸಾಗಬೇಕು.

ಜನಸೇವಾ ವಿದ್ಯಾ ಕೇಂದ್ರದ ಹಳೆಯ ವಿದ್ಯಾರ್ಥಿ ನಾನು . ಶಿಸ್ತ್ರು,ತಾಳ್ಮೆ, ದೇಶಭಕ್ತಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಲು ಸಾಧ್ಯವಾಗಿದೆ ಎಂದು ಹೇಳಿದರು.

ಜನಸೇವಾ ವಿದ್ಯಾ ಕೇಂದ್ರದ ಹಳೆಯ ವಿದ್ಯಾರ್ಥಿಗಳು ಶುದ್ದ ಕುಡಿಯುವ ಯಂತ್ರಗಳನ್ನು ಕೇಂದ್ರಕ್ಕೆ ವಿತರಿಸಿದರು.

Post a Comment

0Comments

Post a Comment (0)