ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡವನ್ನು ನಿರ್ವಹಣೆಯ ಸಲಹೆಗಳು

varthajala
0

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

ವಾರ್ತಾಜಾಲ,ಶಿಡ್ಲಘಟ್ಟ :ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕು, ಒತ್ತಡ ನಿರ್ವಹಣೆ ಹೇಗೆ ಮಾಡಬೇಕು, ನೆನಪಿನ ಶಕ್ತಿ ವೃದ್ಧಿಗಾಗಿ ಏನು ಮಾಡಬೇಕು ಎಂಬುದನ್ನು ವಿವರವಾಗಿ ಕರ್ನಾಟಕ ರಾಜ್ಯ ಹವ್ಯಾಸಿ ಆಪ್ತಸಮಾಲೋಚಕರ ವೇದಿಕೆ ಅಧ್ಯಕ್ಷರಾದ ಸುವರ್ಣ ಅಮರನಾಥ್ ತಿಳಿಸಿದರು.
ನಗರದ ಶ್ರೀ ಸರಸ್ವತಿ ಕಾನ್ವೆಂಟ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಉದಾಹರಣೆ ಮೂಲಕ ಅವರು ಧೈರ್ಯ ತುಂಬಿ ಮಾತನಾಡಿದರು.
ಆಪ್ತಸಮಾಲೋಚಕರಾದ ಗಾಯತ್ರಿ, ರಾಜೇಶ್ವರಿ, ಲಕ್ಷ್ಮೀ ರಾವ್ ಮತ್ತು ಗಿರೀಶ್ ಬಾಬು ಅವರ ತಂಡದಿಂದ ಜೀವನ ಕೌಶಲ್ಯ, ಕಲಿಕಾ ಕೌಶಲ್ಯ, ಹದಿಹರೆಯದವರ ಸಮಸ್ಯೆಗಳು, ಕಲಿಕೆಯಲ್ಲಿ ಪೋಷಕರ, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಪಾತ್ರ ಮುಂತಾದ ವಿಷಯಗಳ ಕುರಿತು ನಡೆದ ಒಂದು ದಿನದ ಕಾರ್ಯಾಗಾರವು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಪ್ರಯೋಜನಕಾರಿಯಾಗಿ ಮೂಡಿಬಂತು.
ಕಾರ್ಯಾಗಾರದ ನಂತರ ತಮ್ಮ ಅನಿಸಿಕೆಗಳನ್ನು ತಿಳಿಸಿದ ವಿದ್ಯಾರ್ಥಿಗಳು ಈ ದಿನ ನಾವು ತಿಳಿದುಕೊಂಡ ವಿಷಯಗಳು ನಮ್ಮ ಇಡೀ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾಗಿದ್ದು ತುಂಬಾ ಉಪಯುಕ್ತವಾಗಿತ್ತು ಎಂದರು.
ಈ ಸಂದರ್ಭದಲ್ಲಿ ಶ್ರೀ ಸರಸ್ವತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಎನ್.ಶ್ರೀಕಾಂತ್ , ಕಾರ್ಯದರ್ಶಿ ನಾಗಲಕ್ಷ್ಮೀ , ಮುಖ್ಯ ಶಿಕ್ಷಕ ರಘು , ಶಿಕ್ಷಕರಾದ ಸಿ.ನಾಗರಾಜ್ , ಎಸ್. ವಿಜಯ ಶಂಕರ್ , ಬಿ.ಉಷಾ , ನಿವೃತ್ತ ಶಿಕ್ಷಕ ನಂಜುಂಡಮೂರ್ತಿ ಇತರರು ಹಾಜರಿದ್ದರು

Post a Comment

0Comments

Post a Comment (0)