ಶಿಕ್ಷಕ ವೃಂದದವರಿಗೆ ಗುರುವಂದನಾ ಸಮಾರಂಭ

varthajala
0

 ಬೆಂಗಳೂರು:  ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ:ಹೊಂಬೇಗೌಡ ನಗರ ವಾರ್ಡ್ ನಲ್ಲಿರುವ ಮಾರುತಿ ವಿದ್ಯಾಮಂದಿರದಲ್ಲಿ  ಜಯನಗರ ಶೈಕ್ಷಣಿಕ ಸಮಿತಿ ಮತ್ತು ಸ್ಲಂ ಸಂಸ್ಥೆ, ಗರುಡ ಫೌಂಡೇಷನ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಎಸ್.ಎಸ್.ಎಲ್.ಸಿ.ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕ-ಬಾಲಕಿಯರಿಗೆ ಪರೀಕ್ಷೆಯನ್ನ ಧೈರ್ಯವಾಗಿ ಆತ್ಮಸ್ಥರ್ಯದಿಂದ ಎದುರಿಸಲು 60ದಿನಗಳ ಕಾಲ ಉಚಿತ ಟ್ಯೂಶನ್ ತರಬೇತಿ ನೀಡಿದ ಶಿಕ್ಷಣತಜ್ಞರು, ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಶುಭಾ ಕೋರಲು  ಸಮಾರೋಪ ಸಮಾರಂಭ ಮತ್ತು ಉಚಿತ ಪಾಠ ಹೇಳಿಕೊಟ್ಟ ಶಿಕ್ಷಕ ವೃಂದದವರಿಗೆ ಗುರುವಂದನಾ ಸಮಾರಂಭ.




*ಚಿಕ್ಕಪೇಟೆ ಶಾಸಕರಾದ ಉದಯಗರುಡಾಚಾರ್ ರವರು ,ಗರುಡಾ ಪೌಂಡೇಷನ್ ಸಂಸ್ಥಾಪಕಿ ಶ್ರೀಮತಿ ಮೇದಿನಿ ಗರುಡಾಚಾರ್ ರವರು, ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕಿ ಶ್ರೀಮತಿ ಭಾಗ್ಯವತಿ ಅಮರೇಶ್, ಮಾಜಿ ಮಹಾನಗರ ಸದಸ್ಯರಾದ ಜಗದೀಶ್ ರೆಡ್ಡಿ, ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯ ಟ್ರಸ್ಟಿಗಳಾದ ಅಮರೇಶ್(ಅಂಬರೀಶ್), ಇನ್ಸ್ ಪೆಕ್ಟರ್ ರಾಜುರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು*

*ಶಾಸಕರಾದ ಉದಯಗರುಡಾಚಾರ್* ರವರು ಮಾತನಾಡಿ  ಉತ್ತಮ ಶಿಕ್ಷಕರು ಉತ್ತಮ ಸಮಾಜ ನಿರ್ಮಿಸಲು ಸಾಧ್ಯ.

ಶಿಕ್ಷಕರ ಬಳಿ ಇರುವ ವಿದ್ಯೆಯನ್ನು ತಮ್ಮ ಜೀವಿತ ಅವಧಿಯಲ್ಲಿ ಲಕ್ಷಾಂತರ ಮಕ್ಕಳಿಗೆ ವಿದ್ಯೆ ಕಲಿಸುತ್ತಾರೆ.

ಶಿಕ್ಷಣ ಕಲಿತ ಮಕ್ಕಳು ದೇಶ,ರಾಷ್ಟ್ರ ಅಭಿವೃದ್ದಿಗೆ ಶ್ರಮಿಸಬೇಕು.ಎಲ್ಲ ವರ್ಗ, ಧರ್ಮದವರಿಗೆ ಶಿಕ್ಷಣ ಸಿಗಬೇಕು, ವಿದ್ಯಾವಂತರಾದರೆ ಸಮಾಜದಲ್ಲಿ ಗೌರವ ಸಿಗುತ್ತದೆ.

ಜೀವನ ಅತಿ ವೇಗವಾಗಿ ಚಲಿಸುತ್ತಿದೆ, ಅದೇ ಮಾದರಿಯಲ್ಲಿ ಶಿಕ್ಷಣದಲ್ಲಿ ಮಾಹಿತಿ,ತಂತ್ರಜ್ಞಾನ ಆಳವಡಿಸಿಕೊಳ್ಳಿ ಎಂದು ಹೇಳಿದರು.

*ಮೇದನಿ ಗರುಡಾಚಾರ್ ರವರು* ಮಾತನಾಡಿ ಎಲ್ಲ ದಾನಗಳಲ್ಲಿ ಶೇಷ್ಠ ದಾನವೆಂದರೆ ವಿದ್ಯಾದಾನ.

ಮಕ್ಕಳಿಗೆ ಶಿಕ್ಷಣ ಸಕಾಲ, ಸಮರ್ಪಕವಾಗಿ ಲಭಿಸಬೇಕು. 

ವಿದ್ಯಾ ಕ್ಷೇತ್ರ,ಆರೋಗ್ಯ ಕ್ಷೇತ್ರದಲ್ಲಿ ಗರುಡಾ ಫೌಂಡೇಷನ್ ಮತ್ತು ಸ್ಲಂ ಸಂಸ್ಥೆ  ಶ್ರಮಿಸುತ್ತಿದೆ.

ಶಿಕ್ಷಕರು ವಿದ್ಯೆಯನ್ನ ಮಕ್ಕಳಿಗೆ ಧಾರೆ ಎರೆದು ಸಮಾಜ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆ ನೀಡುತ್ತಾರೆ ಎಂದು ಹೇಳಿದರು.

*ಅಂಬರೀಶ್ ರವರು* ಮಾತನಾಡಿ ದೇಶದಲ್ಲಿ ಕಡುಬಡವರು ಸಂಖ್ಯೆ ಹಾಗೂ ಸ್ಲಂ ಪ್ರದೇಶದಲ್ಲಿ ವಾಸಿಸುವ ಸಂಖ್ಯೆ ಲಕ್ಷಾಂತರ ಜನರು ಇದ್ದಾರೆ.

ಬೆಂಗಳೂರುನಗರ ಪ್ರದೇಶದಲ್ಲಿ 450ಕ್ಕೂ ಹೆಚ್ಚು ಸ್ಲಂ ಪ್ರದೇಶವಿದೆ.

ಸ್ಲಂ ಪ್ರದೇಶ ವಾಸಿಸುವ ಮಕ್ಕಳು  ಪ್ರತಿಭಾವಂತರು  ಉತ್ತಮ ಶಿಕ್ಷಣ, ಮಾಹಿತಿ,ತಂತ್ರಜ್ಞಾನದ ವಿಷಯ ಅವರಿಗೆ ಸಿಗಬೇಕು.

ಮಕ್ಕಳು ದೇವರ ಸಮಾನ ಎಲ್ಲರಿಗೂ ಸಮಾನ ಶಿಕ್ಷಣ ಲಭಿಸಬೇಕು ಎಂಬ ಆಶಯದಿಂದ ಸ್ಲಂ ಸಂಸ್ಥೆ ಮತ್ತು ಗರುಡಾ ಫೌಂಡೇಷನ್ ಸಹಯೋಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಶ್ರಮಿಸುತ್ತಿದೆ ಎಂದು ಹೇಳಿದರು.

*ಶ್ರೀಮತಿ ಭಾಗ್ಯವತಿ ಅಮರೇಶ್ ರವರು ಮಾತನಾಡಿ* ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ದಿ ಸಾಧ್ಯ.

ಎಲ್ಲರ ಜೀವನದಲ್ಲಿ ಗುರುಗಳ ಪಾತ್ರ ಮಹತ್ವದ್ದು.

ತಂದೆ,ತಾಯಿ ಮತ್ತು ಗುರುಗಳ ಮಾರ್ಗದರ್ಶನದಲ್ಲಿ ಪ್ರತಿ ಮಕ್ಕಳು ಸಾಗಬೇಕು ಆಗ ಮಾತ್ರ ಮಕ್ಕಳ  ಜೀವನ ಬದಲಾವಣೆ ಸಾಧ್ಯ.

ಎಸ್.ಎಸ್.ಎಲ್.ಸಿ.ಪರೀಕ್ಷೆ ಮಕ್ಕಳ ಜೀವನಕ್ಕೆ ಬಹುಡೊಡ್ಡ ಅಡಿಪಾಯ ಮತ್ತು ಮಕ್ಕಳ ಉತ್ತಮ ಜೀವನಕ್ಕೆ ದಾರಿಯಾಗಿದೆ ಎಂದು ಹೇಳಿದರು.

*ಸರ್ಕಲ್ ಇನ್ಸ್ ಪೆಕ್ಟರ್ ರಾಜುರವರು* ಮಾತನಾಡಿ ಮಕ್ಕಳಲ್ಲಿ ಅದ್ಬುತ ಶಕ್ತಿ ಇರುತ್ತದೆ,ಅದನ್ನ ಎಚ್ಚರಿಸುವ ಕಾರ್ಯವಾಗಬೇಕು.

ಹಣ ಶಕ್ತಿಗಿಂತ, ವಿದ್ಯಾಶಕ್ತಿ ಮುಖ್ಯ.

ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಬೇಕು,ಉತ್ತಮ ವಿದ್ಯಾವಂತರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದು ಹೇಳಿದರು.

14ಶಿಕ್ಷಕರಿಗೆ ಗೌರವಿಸಿ ,ಸನ್ಮಾನಿಸಲಾಯಿತು.

ಹೊಂಬೇಗೌಡನಗರದ ಪ್ರಮುಖರುಗಳಾದ ಅಜಿತ್, ರಾಜು,ವೀರಭದ್ರ, ಸುರೇಶ್,ಪ್ರಜ್ವಲ್, ಸುಧೀಂದ್ರ

Post a Comment

0Comments

Post a Comment (0)