ಬೆಂಗಳೂರು: ನಾಡಿನ ಶಿಕ್ಷಕರಲ್ಲಿ ನಿರಂತರ ವೃತ್ತಿಪರ ಅಭಿವೃದ್ಧಿ ಹೊಂದಲು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಹೊಸ ಕೌಶಲ್ಯ ಮತ್ತು ತಂತ್ರಗಳನ್ನು ಕಲಿಯಲು ಅನುವು ಮಾಡಿಕೊಡುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಜಂಟಿ ನಿರ್ದೇಶಕ ರಾದ ಎಂ ರೇವಣಸಿದ್ದಪ್ಪ ಹೇಳಿದರು.
ಅವರು ಬೆಂಗಳೂರು ನಗರದ ಬ್ಲಾಸಂ ಶಾಲೆಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್(ರಿ),ಮೈಸೂರು ವತಿಯಿಂದ ಹಮ್ಮಿಕೊಂಡ ರಾಜ್ಯ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಹಾತ್ಮ ಗಾಂಧಿಯವರಿಂದಲೇ ವೃತ್ತಿಕೌಶಲ್ಯಕ್ಕೆ ಅರ್ಥ ಬಂದಿದ್ದು,ಶಿಕ್ಷಕರಲ್ಲಿ ಅಡಗಿರುವ ವಿವಿಧ ಕೌಶಲ್ಯ-ಪ್ರತಿಭೆಯನ್ನು ಹೊರಹಾಕುವ ನಿರಂತರ ಪ್ರಯತ್ನ ಈ ಪ್ರತಿಭಾ ಪರಿಷತ್ತಿನಿಂದ ಜರುಗುತ್ತಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ಮಾತನಾಡಿ,ಕೌಶಲ್ಯದಿಂದ ಧನಾತ್ಮಕ ಆಲೋಚನೆಗಳು ಹೆಚ್ಚಿ ವೈಜ್ಞಾನಿಕ ಮನೋಭಾವ ಮೂಡುವಲ್ಲಿ ಸಹಕಾರಿಯಾಗುತ್ತದೆ. ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಸಾಮರ್ಥ್ಯವನ್ನು ಶಿಕ್ಷಕರಲ್ಲಿ ವೃದ್ಧಿಸುತ್ತದೆ, ಪರಿಷತ್ತು ಶಿಕ್ಷಕರಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು.
ಬೆಂಗಳೂರಿನ ಬಿಸಿನೆಸ್ ಟೈಕೂನ್ ಅಕಾಡೆಮಿಯ ಮಾಸ್ಟರ್ ಕೋಚ್ ಸತ್ಯನಾರಾಯಣ ವಿ ಆರ್ ಅವರು ಆಧುನಿಕ ಶಿಕ್ಷಕರಿಗಾಗಿ ಐದು ಹಂತಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಪಿ ಮಹೇಶ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು,ವಿಜಯ್ ಎಂಟರ್ ಪ್ರೈಜಿಸ್ ಮುಖ್ಯಸ್ಥರಾದ ಮಹಾಂತೇಶ ನೆಲವಗಿ,ಕೆಬಿಎಂ ಬ್ಲಾಸಂ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಕೆ ಬಿ ಮಹಾದೇವಯ್ಯ,ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ,ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಮಾಪಕ ವಲಯದ ಸದಸ್ಯೆ ಕೆ ಕಮಲ, ಚಲನಚಿತ್ರ ನಟಿ ಅನು ಅಯ್ಯಪ್ಪ,ಚಲನಚಿತ್ರ ನಿರ್ದೇಶಕ ನೀನಾಸಂ ಮಂಜು,ಚಲನಚಿತ್ರ ನಟ ಸಾಯಿಪ್ರಕಾಶ ಸೇರಿದಂತೆ ವಿವಿಧ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ ಬಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ವಿ ಜಿ ಅಗ್ರಹಾರ,ರಾಜ್ಯ ಸಹ ಕಾರ್ಯದರ್ಶಿ ಕೆ ಜಿ ರಂಗಸ್ವಾಮಿ, ರಾಜ್ಯ ಪದಾಧಿಕಾರಿ ಎನ್ ಎಸ್ ಮುಶೆಪ್ಪನವರ,ರಾಜ್ಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಚಂದ್ರಶೇಖರ ನಾಯಕ,ರಾಜ್ಯ ಸಿ ಆರ್ ಪಿ ಸಮಿತಿ ಮುಖ್ಯಸ್ಥ ಬಸಯ್ಯ ಹಿರೇಮಠ, ವಿವಿಧ ಸಹಕಾರ ಸಮಿತಿಗಳ ಮುಖ್ಯಸ್ಥರಾದ ಉಮಾ ಗುಡ್ಡದ, ಲಕ್ಷ್ಮೀ ಕಂಬಾರ,ಪ್ರವೀಣ ಓತಿಹಾಳ, ನಾಗಭೂಷಣ ಕೆ ಟಿ,ಸವಿತಾ ಕೆ ಎಲ್,ಶೈಲಶ್ರೀ ಜೋಶಿ,ಮಂಜುಳಾ ಪಾಟೀಲ,ನವೀನ ಕೆ ಬಿ,ಜುಬೇದಾ ಅತ್ತಾರ,ಪರವೀನ್ ನದಾಫ್,ರೇಖಾ ಎನ್, ಮಧು ಎಸ್,ಅರ್ಚನಾ ಕೆ, ಯಶೋದಾ ಎಂ ಎಸ್,ಚಂದ್ರಿಕಾ ಬಾಯಿರಿ,ನಾಗಮಣಿ ಎಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಾಜ್ಯದ ವಿವಿಧ ತಾಲೂಕುಗಳ 100 ನಿಕಟಪೂರ್ವ ಸಿ ಆರ್ ಪಿ ಗಳಿಗೆ ಶಿಕ್ಷಣ ಸೇವಾ ರತ್ನ ರಾಜ್ಯ ಪ್ರಶಸ್ತಿ, 50 ಉತ್ತಮ ಶಿಕ್ಷಕರಿಗೆ ಶಿಕ್ಷಣ ಶಿಲ್ಪಿ ರಾಜ್ಯ ಪ್ರಶಸ್ತಿ,15 ಉತ್ತಮ ಶಾಲೆಗಳಿಗೆ ಶಿಕ್ಷಣ ಚೇತನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.