`ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಡನೆ ಹೋಲಿಕೆ ಮಾಡಬೇಡಿ

varthajala
0

ಕೊಳ್ಳೇಗಾಲ: ಪೋಷಕರೇ ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಡನೆ ಹೋಲಿಕೆ ಮಾಡಬೇಡಿ ಮಕ್ಕಳು ದೇವರ ಕೊಡುಗೆ ನಿಮ್ಮ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಿರಿ ಎಂದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮೈಸೂರು ಛಾಯಾದೇವಿ ವಿದ್ಯಾ ಸಂಸ್ಥೆ ಪ್ರಾಂಶುಪಾಲರಾದ ಡಾ.ಅಂತೋಣಿ ಪಾಲ್ ರಾಜ್ ಅಭಿಪ್ರಾಯ ಪಟ್ಟರು.


ಅವರು ಇಂದು ಕೊಳ್ಳೇಗಾಲ ಲಯನ್ಸ್ ‌ವಿದ್ಯಾಸಂಸ್ಥೆಯ 2022-2023ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತ ಪೋಷಕರೇ ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಡನೆ ಹೋಲಿಕೆ ಮಾಡಬೇಡಿ ಅವರನ್ನು ಅಭಿಪ್ರೇರಣಗೊಳಿಸಿ ಅವರ ಪ್ರತಿಭೆಗಳನ್ನು ಅನಾವರಣಗೊಳಿಸಲು ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಕರೊಂದಿಗೆ ಕೈ ಜೋಡಿಸಿ ಮತ್ತು Sunday ಮಮ್ಮಿ ಡ್ಯಾಡಿ ಬದಲಾಗಿ Every day ಮಮ್ಮಿ ಡ್ಯಾಡಿ ಆಗಿ ಎಂದು ವೇದಿಕೆಯಲ್ಲಿ ಮಾತನಾಡಿದರು.

ವೇದಿಕೆಯಲ್ಲಿ ಕೊಳ್ಳೇಗಾಲ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಪಾಟೀಲ್, ಲಯನ್ಸ್ ವಿದ್ಯಾ ಸಂಸ್ಥೆಯ ಖಜಾಂಚಿಗಳಾದ ಲಯನ್ಸ್ ಮಹದೇವಪ್ರಸಾದ್, ಲಯನ್ಸ್ ಚನ್ನಮಾದೇಗೌಡ, ಪ್ರಾಂಶುಪಾಲರಾದ ವಿನುತ ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು

Post a Comment

0Comments

Post a Comment (0)