ಮಕ್ಕಳಿಗೆ ಮೂಲಭೂತ ಹಾಗೂ ಹಾಗೂ ಮೌಲ್ಯಧಾರಿತ ಶಿಕ್ಷಣಕ್ಕೆ ಒತ್ತು ನೀಡಬೇಕು*

varthajala
0

ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ, ಮಕ್ಕಳ ಮಾಸೋತ್ಸವ ಸಮಿತಿ, ಪಡಿ ಸಂಸ್ಥೆ, ಸ್ಖೂಲ್‌ ಆಫ್‌ ಸೋಶಿಯಲ್‌ ವರ್ಕ್‌ ರೋಶಿನಿ ನಿಲಯ ಇದರ ಸಹಯೋಗದಲ್ಲಿ ಮಕ್ಕಳ ಮಾಸೋತ್ಸವ ಕಾರ್ಯಕ್ರಮವು ಎರಡು ತಿಂಗಳುಗಳ ಕಾಲ ದ.ಕ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ಸಂಘಟನೆಗಳ ಮುಖಾಂತರ 60 ಕ್ಕೂ ಮಿಕ್ಕಿ ಶಿಕ್ಷಣಾಧಾರಿತ, ಮಕ್ಕಳ ಮೇಲಿನ ದೌರ್ಜನ್ಯ, ಹದಿಹರೆಯದ ಸಮಸ್ಯೆಗಳ ಕುರಿತು, POCSO ಕಾಯಿದೆ ಬಗ್ಗೆ ಅರಿವು ,ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಡನೆ ಸಂವಾದ ಕಾರ್ಯಕ್ರಮ ಹಾಗೂ ಚಿತ್ರಕಲಾಪ್ರದರ್ಶನ ಮುಂತಾದ ಮಗುಸ್ನೇಹಿ ವಾತಾವರಣಕ್ಕೆ ಪೂರಕವಾದ ಕಾರ್ಯಕ್ರಮಗಳು ಮಕ್ಕಳ ಹಕ್ಕುಗಳ ಮಸೊತ್ಸವ ಸಮಿತಿಯ ನೇತೃತ್ವದಲ್ಲಿಅಚ್ಚುಕಟ್ಟಾಗಿ ಮೂಡಿ ಬಂದಿರುತ್ತದೆ.

ಇದರ ಸಮಾರೋಪ ಕಾರ್ಯಕ್ರಮವನ್ನು ದಿನಾಂಕ: 05-01-2023 ರಂದು  ಸೆಮಿನಾರ್‌ ಹಾಲ್‌ ಸ್ಕೂಲ್‌ ಆಫ್‌ ಸೋಶಿಯಲ್‌ ವರ್ಕ್‌ ರೋಶಿನಿ ನಿಲಯ ದಲ್ಲಿ ನಡೆಸಲಾಯಿತು.

 ಸಂಸ್ಥೆಯ ಮುಖ್ಯಕಾರ್ಯನಿರ್ವಾಹಣಾಧಿಗಳಾದ ಶ್ರೀ ರೆನ್ನಿ ಡಿ ಸೋಜಾ ಪ್ರಾಸ್ತವಿಕ ಮಾತುಗಳನ್ನುಮಾತನಾಡುತ್ತ ಮಕ್ಕಳ  ಹಕ್ಕುಗಳ ಬಗ್ಗೆ ಸಮುದಾಯಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಗುವುದರೊಂದಿಗೆ ಇಡೀ ರಾಜ್ಯಕ್ಕೆ  ಇದು ಮಾದರಿಯಾಗಬೇಕು ಎಂದು  ನುಡಿದರುಹಾಗೂ 40  ಅಂಶಗಳ ನಿರ್ಣಯಗಳನ್ನು  ಮಂಡಿಸಲಾಯಿತು.

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ನಾಗರಿ ಸಮಾಜ ಹಾಗೂ ಎಲ್ಲ ಇಲಾಖೆಗಳು ಒಟ್ಟಾಗಿ ಸಮನ್ವಯದಿಂದ ಕೆಲಸ ನಿರ್ವಹಿಸುವುದರ ಮೂಲಕ ಮಕ್ಕಳ ಮೇಲಿನ ದೌರ್ಜನ್ಯಬಾಲ್ಯ ವಿವಾಹಪೋಕ್ಸೋ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದು  ಮಕ್ಕಳ ಹಕ್ಕುಗಳ ಮಾಸೋತ್ಸವ  ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ ನಾಗಣ್ಣಗೌಡ ತಿಳಿಸಿದರು . ಶ್ರೀಮತಿ ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿಯ ಸಂಚಾಲಕರಾದ ಶ್ರೀಮತಿ ಕಮಲ ಗೌಡ, ಶಿಕ್ಷಣ ಸಂಪನ್ಮೂಲಗಳ ಕೇಂದ್ರಗಳ ಒಕ್ಕೂಟ ಇದರ ಅಧ್ಯಕ್ಷರಾದ ಶ್ರೀಮತಿ ನಯನಾ ರೈ, ಡಾ. ಜೂಲಿಯೇಟ್ ಸಿ ಜೆ.   ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ  ಸದಸ್ಯರುಶಿಕ್ಷಣ  ಸಂಪನ್ಮೂಲ ಕೇಂದ್ರದ ವಿವಿಧ ತಲೂಕಿನ ಪದಾಧಿಕಾರಿಗಳು ಪಡಿ ಸಂಸ್ಥೆ ಸಿಬ್ಬಂದಿಗಳು ಚೈಲ್ಡ್ ಲೈನ್ ಸಿಬ್ಬಂದಿ  ಶಿಕ್ಷಣಾಸಕ್ತರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಕಮಲ ಗೌಡ  ಸ್ವಾಗತಿಸಿಶ್ರೀಮತಿ ನಯನ.ರೈ  ವಂದಿಸಿದರುಶ್ರೀಮತಿ ಗ್ಲೀಶಾ ಡಿ ಸೋಜಾ ಕಾರ್ಯಕ್ರಮ ನಿರೂಪಣೆ ಮಾಡಿದರುವಕಾಲತ್ತು  ಸಂಯೋಜಕರಾದ ಶ್ರೀ ಸಿದ್ಧಾಂತ್ಪಿಸಹಕರಿಸಿದರು


Post a Comment

0Comments

Post a Comment (0)