ಕೊಳ್ಳೇಗಾಲ ಸುದ್ದಿ : ಶ್ರೀ ವಾಸವಿ ಸಮೂಹ ವಿದ್ಯ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಎರಡು ದಿನದ ಸೆಲ್ಫ್ ಡೆವಲಪ್ಮೆಂಟ್ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಬೆಂಗಳೂರಿನ ಸೆಲ್ಫ್ ಡೆವಲಪ್ಮೆಂಟ್ ತರಬೇತಿದಾರರಾದ ಸಾಕ್ಷಿ ಸುನಿಲ್, ಭೂಮಿಕಾ, ಅರವಿಂದ್, ರವರು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಗಾರಕ್ಕೆ ಉದ್ಘಾಟನೆ ಮಾಡಿದರು
ಡಿಗ್ರಿ, ಪಿಯುಸಿ, ಪ್ರೌಢಶಾಲಾ, ಮಕ್ಕಳಿಗೆ ಈಗಿನ ಕಾಂಪಿಟೇಟರ್ ಯುಗದಲ್ಲಿ ಹೇಗೆ ಅವರು ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು, ಮುಂದಿನ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಆತ್ಮವಿಶ್ವಾಸವಿರಬೇಕು ಕ್ರಮಬದ್ಧ ಅಧ್ಯಯನ, ಮಾನಸಿಕ ಸಮತೋಲನ,. ಒತ್ತಡ ನಿರ್ವಹಣೆ , ಹತ್ತನೇ ತರಗತಿಯ ನಂತರ ಮುಂದೇನು ? ಎಂಬ ಹಲವಾರು ಶೈಕ್ಷಣಿಕ ವಿಚಾರಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಎರಡು ದಿನಗಳ ತರಬೇತಿಯನ್ನು ಬೆಂಗಳೂರಿನ ಇಂಟರ್ ನ್ಯಾಷನಲ್ ಕ್ಲಬ್ ಟೋಸ್ಟ್ ಮಾಸ್ಟರ್ ಸಾಕ್ಷಿ ಸುನಿಲ್, ಭೂಮಿಕಾ,. ಅರವಿಂದ್ ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರರು, ವಿದ್ಯಾರ್ಥಿಗಳಿಗೆ ಎರಡು ದಿನಗಳ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಂಯೋಜಕರಾದ ಶ್ರೀಮತಿ ಮಧುರ ರಾಜೇಶ್ ರವರು ಸಂಸ್ಥೆಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ನೀಡುವ ಕುರಿತು ಸ್ಮರಣೆ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಲು, ಸ್ವಇಚ್ಛೆಯಿಂದ ಅಧ್ಯಯನದಲ್ಲಿ ತೊಡಗುವ ಜೊತೆಗೆ ಆತ್ಮವಿಶ್ವಾಸ ಹೊಂದಲು, ಮಕ್ಕಳ ಉತ್ತಮ ಸಾಧನೆಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಂಸ್ಥೆಯ ಸಂಯೋಜಕರಾದ ಶ್ರೀಮತಿ ಸ್ವಪ್ನ ಶೇಖರ್ ವಿದ್ಯಾರ್ಥಿಗಳ ಕುರಿತು ಮಾತನಾಡಿ, ಸ್ಫರ್ಧಾತ್ಮಕ ಪ್ರಪಂಚದಲ್ಲಿ ವಿದ್ಯಾ ದಾನ ಪರಮಶ್ರೇಷ್ಠವಾದುದು. ಸಾಧನೆಯ ಶಿಖರವೇರಲು ಇದು ಮೈಲಿಗಲ್ಲು ಇಂತಹ ತರಬೇತಿ ಸಿಗುವುದು ಅಪರೂಪ, ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡುವ ಮೂಲಕ ವಿದ್ಯಾಸಂಪತ್ತನ್ನು ತಮ್ಮದಾಗಿಸಿಕೊಳ್ಳ ಬಹುದು. ಉತ್ತಮ ಜೀವನ ನಿರ್ವಹಣೆಗೆ ಶಿಕ್ಷಣ ಅಗತ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಬದುಕಿನ ದಾರಿ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಸ್ಥೆಯ ಮುಖ್ಯ ಶಿಕ್ಷಕರಾದ ಗೀತಾ ಎಸ್ ಬಿ ರವರು ಮಾತನಾಡಿ ಆಸಕ್ತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಒದಗಿಸುವ ಉದ್ದೇಶ ದಿಂದ ಈ ಕಾರ್ಯಕ್ರಮ ಆಯೋಜಿಸ ಲಾಗಿದೆ. ಪ್ರತಿಯೊಬ್ಬರೂ ಕಾರ್ಯಾ ಗಾರದ ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಮುಂದಿನ ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ದರ್ಜೆಯ ಅಧಿಕಾರಿಗಳಾಗಿ ಹೊರಹೊಮ್ಮಬೇಕು ಎಂದು ಹಾರೈಸಿದರು.
ಈ ಕಾರ್ಯಗಾರಕ್ಕೆ ಸಂಸ್ಥೆಯ ಅಧ್ಯಕ್ಷರಾದ ಎಡಿ ಕುಮಾರ್ ಕೃಷ್ಣ , ಕಾರ್ಯದರ್ಶಿ ಶ್ರೀಧರ್ ಪ್ರಾಂಶುಪಾಲರಾದ ವಾಸವಾಂಬ ಸಂಯೋಜಕರಾದ ಸುಹಿದ ಮಂಜುನಾಥ್, ಭಾವನ ಶಶಿಧರ್, ಅನಿತಾ ಗಿರೀಶ್, ಸಂಸ್ಥೆಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.