Karnataka Governor inaugurates the All India Inter-University Volleyball Championship for Men 2022–23 Tournament.
Udupi On January 5, 2023, the Hon'ble Governor of Karnataka, Shri Thaawarchand Gehlot, inaugurated the All India Inter University Volleyball Championship for Men 2022–2023 Tournament organised by Mangalore University, Poornaprajna College, and the Post Graduate Center at Udupi.
Udupi On January 5, 2023, the Hon'ble Governor of Karnataka, Shri Thaawarchand Gehlot, inaugurated the All India Inter University Volleyball Championship for Men 2022–2023 Tournament organised by Mangalore University, Poornaprajna College, and the Post Graduate Center at Udupi.
Holiness Sri Vishwapriya Tirtha Swami, Peethadhipati of Admar Mutt Udupi, Minister Kota Srinivas Pujari and other dignitaries were present.
ಉಡುಪಿ 05.01.2023: ಕರ್ನಾಟಕ ರಾಜ್ಯವನ್ನು "ಇಂಟರ್ನ್ಯಾಷನಲ್ ಹಬ್ ಆಫ್ ಸ್ಪೋರ್ಟ್ಸ್" ಮಾಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯ, ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಉಡುಪಿಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ವಾಲಿಬಾಲ್ ಚಾಂಪಿಯನ್‌ಶಿಪ್ 2022-23 ಪುರುಷರ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ವಿವಿಧ ಹಂತಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪ್ರಶಸ್ತಿ ನೀಡುವುದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಆಧುನಿಕ ಕ್ರೀಡಾ ಸೌಲಭ್ಯಗಳನ್ನು ಆಟಗಾರರಿಗೆ ಒದಗಿಸಲಾಗುತ್ತಿದೆ. ಕರ್ನಾಟಕದಲ್ಲಿ "ಹೊಸ ಶಿಕ್ಷಣ ನೀತಿ" ಯನ್ನು ಪರಿಚಯಿಸುವುದರೊಂದಿಗೆ, "ಕ್ರೀಡೆ" ಯನ್ನು "ಕಡ್ಡಾಯ ಪಠ್ಯಕ್ರಮ" ದ ಒಂದು ಭಾಗವಾಗಿ ಮಾಡಲಾಯಿತು ಎಂದು ಹೇಳಿದರು.
ಕ್ರೀಡೆಯಲ್ಲಿ ಐತಿಹಾಸಿಕ ಸಾಧನೆ ಮಾಡುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದೇವೆ. ಕರ್ನಾಟಕ ರಾಜ್ಯವು ಅನೇಕ ಶ್ರೇಷ್ಠ ಕ್ರೀಡಾ ಪಟುಗಳನ್ನು ನಿರ್ಮಿಸಿದೆ. ವಿಶ್ವ ಮಟ್ಟದಲ್ಲಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದ ಆಟಗಾರರಿಂದ ಸ್ಫೂರ್ತಿ ಪಡೆದು ಇಂದಿನ ಯುವ ಪೀಳಿಗೆ ಮುನ್ನಡೆಯಬೇಕು. ಕ್ರೀಡೆಯಲ್ಲಿ ಅಂಗವಿಕಲ ಆಟಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ, ದೇಶದಲ್ಲಿ ಅಂಗವಿಕಲರಿಗಾಗಿ ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಒಂದು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಿರ್ಮಾಣ ಹಂತದಲ್ಲಿದೆ ಎಂದು ತಿಳಿಸಿದರು.
ಭಾರತದಲ್ಲಿ ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ, ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಕ್ರೀಡಾ ಚಟುವಟಿಕೆಗಳಿಗೆ ಪರಿಣಾಮಕಾರಿ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ. ಅದರ ಫಲಿತಾಂಶವಾಗಿ ಟೋಕಿಯೊ ಒಲಿಂಪಿಕ್-2020 ಕ್ರೀಡಾಕೂಟದಲ್ಲಿ, ಭಾರತವು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗರಿಷ್ಠ 7 ಪದಕಗಳನ್ನು ಗೆದ್ದುಕೊಂಡಿತು ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಪ್ಯಾರಾ ಕ್ರೀಡಾಪಟುಗಳು 19 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಐತಿಹಾಸಿಕ ಸಾಧನೆ ಮಾಡಲಾಗಿದೆ ಎಂದು ಹೇಳಿದರು.
ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಅತಿದೊಡ್ಡ ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾ ಸ್ಪರ್ಧೆಯಾಗಿದೆ. ಈ ಕ್ರೀಡಾಕೂಟಗಳ ಉದ್ದೇಶವು ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡಾಕೂಟಗಳಿಗೆ ಕ್ರೀಡಾಪಟುಗಳನ್ನು ಗುರುತಿಸುವುದು ಮತ್ತು ತರಬೇತಿ ನೀಡುವುದು ಮತ್ತು ವಾರ್ಷಿಕ ಕ್ರೀಡೆಗಳು ಮತ್ತು ಸ್ಪರ್ಧೆಗಳಲ್ಲಿ ಯುವಕರ ಸಾಮೂಹಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು, ಹಾಗೆಯೇ ಎಲ್ಲರಿಗೂ ಕ್ರೀಡೆ ಮತ್ತು ಶ್ರೇಷ್ಠತೆಗಾಗಿ ಕ್ರೀಡೆಗಳನ್ನು ಉತ್ತೇಜಿಸುವುದಾಗಿದೆ ಎಂದರು.
ನಾನು ಕ್ರೀಡಾಪಟುವೂ ಆಗಿದ್ದೇನೆ, ಅನೇಕ ಕ್ರೀಡೆಗಳಲ್ಲಿ ಭಾಗವಹಿಸಿದ್ದೇನೆ, ವಿಶೇಷವಾಗಿ ವಾಲಿಬಾಲ್ ಮತ್ತು ಕಬಡ್ಡಿ. ಪೋಷಕರು ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಇದರಿಂದ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗುವುದಲ್ಲದೆ ಮುಂದೆ ಸಾಧನೆ ಮಾಡಲು ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಾರೆ ಎಂದು ಕರೆ ನೀಡಿದರು.
ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾಲೇಜು ಆಡಳಿತ ಮಂಡಳಿ ಪದಾಕಾರಿಗಳಾದ ಸಿಎ ಪ್ರಶಾಂತ ಹೊಳ್ಳ, ಶ್ರೀಧರ ರಾವ್, ಡಾ. ಎ. ಪಿ. ಭಟ್, ಮಂಗಳೂರು ವಿವಿ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ. ಕೆ., ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜ ಉಪಸ್ಥಿತರಿದ್ದರು. ಡಾ. ಜಿ. ಎಸ್. ಚಂದ್ರಶೇಖರ್ ಸ್ವಾಗತಿಸಿ, ಪ್ರಾಂಶುಪಾಲ ಡಾ. ರಾಘವೇಂದ್ರ ಎ. ವಂದಿಸಿದರು. ಉಡುಪಿ ಪೂರ್ಣಪ್ರಜ್ಞ ಕಾಲೇಜು ಭೇಟಿಯ ಸವಿನೆನಪಿಗಾಗಿ ಶ್ರೀಗಂಧ ಹಾಗೂ ತುಳಸಿ ಗಿಡವನ್ನು ನೆಟ್ಟು ನೀರೆರೆದ ರಾಜ್ಯಪಾಲರು ಮಂಗಳೂರು ವಿವಿ ಹಾಗೂ ಪೂನಾದ ಭಾರತೀಯ ವಿಶ್ವ ವಿದ್ಯಾಪೀಠ ನಡುವಿನ ಪಂದ್ಯವನ್ನು ಕೆಲ ಕಾಲ ವೀಕ್ಷಿಸಿದರು.