ಸರಕಾರಿ ಶಾಲೆ‌ ದತ್ತು ಪಡೆದ ಪತ್ರಕರ್ತ ಸಿ.ಮಂಜುನಾಥ್

varthajala
0

ಬಳ್ಳಾರಿ, ಡಿ.4: ಸಾಹಿತ್ಯ, ಸಮಾಜ ಸೇವೆ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ‌ಗಮನ ಸೆಳೆದಿದ್ದ ನಗರದ ಪತ್ರಕರ್ತ ಸಿ.ಮಂಜುನಾಥ್   ಇದೀಗ ಸರಕಾರಿ ಶಾಲೆಯೊಂದನ್ನು ದತ್ತು ಪಡೆದು ಇತರರಿಗೂ ಪ್ರೇರಣೆಯಾಗಿದ್ದಾರೆ.

ದೇಶದ ಮೊದಲ ಮಹಿಳಾ ಶಿಕ್ಷಕಿ, ಸಮಾಜ ಸುಧಾರಕಿ ಸಾವಿತ್ರಿಬಾಯಿ ಭಾಪುಲೆ ಅವರ 192ನೇ ಜಯಂತೋತ್ಸವದ ದಿನವಾದ ಮಂಗಳವಾರ(ಜ.3) ತಾಲೂಕಿನ ಹಲಕುಂದಿ  ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮೂರು ವರ್ಷಗಳ ಅವಧಿಗೆ ದತ್ತು ಪಡೆದಿದ್ದಾರೆ.

ಕರ್ನಾಟಕ ಜಾನಪದ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಮಂಜುನಾಥ್ ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾಗಿ, ಪ್ರಕಾಶಕರಾಗಿ ಕಳೆದ ಎರಡು ದಶಕಗಳಿಂದ  ತಮ್ಮ ಸಮಾಜಮುಖಿ ಕಾರ್ಯಗಳಿಂದ ಜನಮನ ಗೆದ್ದಿದ್ದಾರೆ.

ಶಾಲೆಯಲ್ಲಿ ಮಂಗಳವಾರ ಜರುಗಿದ ಸಮಾಜ ಸುಧಾರಕಿ ಸಾವಿತ್ರಿಬಾಯಿ ಪುಲೆ ಅವರ ಜಯಂತಿ ಕಾರ್ಯಕ್ರಮದಲ್ಲಿ  ಶಾಲೆಯ ಮಕ್ಕಳಿಗೆ ರೇಡಿಯೋ ಪಾಠ ಸೇರಿದಂತೆ ಹಲವು ಉಪಯುಕ್ತ ಕಾರ್ಯಕ್ರಮ‌ ಆಲಿಸಲು ಎಫ್.ಎಂ ರೆಡಿಯೋ ಸಹಿತ ಬ್ಲೂಟೂಥ್ ಅಳವಡಿಸಿರುವ ಆಧುನಿಕ‌‌ ಸೌಂಡ್ ಸಿಸ್ಟಮ್‌ ವೊಂದನ್ನು ಪೂರ್ವ ವಲಯದ ಬಿಇಓ ಕೆಂಪಯ್ಯ ಅವರಿಗೆ ಮಂಜುನಾಥ್ ನೀಡಿದರು.

ಈ ಸಂದರ್ಭಕ್ಕೆ ಪೂರ್ವ ವಲಯದ ಇಸಿಓ  ಗೂಳಪ್ಪ ಸಿಡಿ, ಹಲಕುಂದಿ ಗ್ರಾಪಂ ಸದಸ್ಯ  ನಾಗರಾಜ ಡಿ ಹೆಚ್,  ಸಿ ಆರ್ ಪಿಗಳಾದ ಶ್ರೀನಿವಾಸ ರೆಡ್ಡಿ, ಮಲ್ಲಿಕಾರ್ಜುನ, ಶಾಲೆಯ ಎಸ್ ಡಿ ಎಂ‌ಸಿ ಅಧ್ಯಕ್ಷ ಬಿ. ಬಸವರಾಜ್ ಸಾಕ್ಷಿಯಾದರು.

ಶಾಲೆಯಲ್ಲಿ ಆರೋಗ್ಯ ಶಿಬಿರದ ಮೂಲಕ ಮಕ್ಕಳಲ್ಲಿ ಜಾಗೃತಿ, ಜಾನಪದ-ರಂಗ ಶಿಬಿರ, ಗ್ರಾಮದಲ್ಲಿ ರಾತ್ರಿ ಶಾಲೆ ಸೇರಿದಂತೆ ಹಲವು ಶೈಕ್ಷಣಿಕ ಅಭಿವೃದ್ಧಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಂಜುನಾಥ್ ಪತ್ರಿಕೆಗೆ ತಿಳಿಸಿದ್ದಾರೆ.


ನಾಡಿನ ಪತ್ರಕರ್ತರಿಗೆ ಹೆಮ್ಮೆ ತರುವ, ಇತರರಿಗೂ ಪ್ರೇರಣೆಯಾಗುವ  ಮಂಜುನಾಥ ಅವರ ಜನಮುಖಿ ಕಾರ್ಯಕ್ಕೆ ಬಿಇಓ ಕೆಂಪಯ್ಯ, ಇಸಿಓ ಗೂಳಪ್ಪ, ಗ್ರಾಪಂ ಸದಸ್ಯ ನಾಗರಾಜ್, ಎಸ್.ಡಿಎಂಸಿ ಅಧ್ಯಕ್ಷ ಬಸವರಾಜ್ ಮತ್ತಿತರರು ಮೆಚ್ಚುಗೆ ವ್ಯಕ್ಯಪಡಿಸಿದ್ದಾರೆ.

*****

Post a Comment

0Comments

Post a Comment (0)