ಕಳೆದ ಶನಿವಾರ ಬೆಳಗಿನ 9 ಗಂಟೆಗೆ ಕರ್ನಾಟಕದ ಡೈನಾಮಿಕ್ ಎಂದೇ ಖ್ಯಾತಿಯಾಗಿರುವ ಐ. ಪಿ.ಎಸ್ ಶ್ರೀ ರವಿ ಚನ್ನಣ್ಣನವರ್ ರವರು ನಯನ ಸಭಾಂಗಣಕ್ಕೆ ಬಂದಾಗ ಇಡೀ ಸಭಾಂಗಣವೇ ಕೈ ಬೀಸಿ ಚಪ್ಪಾಳೆಯ ಸದ್ದಿನಿಂದ ಅವರ ಬೆಂಬಲಿಗರಿಂದ ಕಿಕ್ಕಿರಿದಿತ್ತು.
ಕಾರ್ಯಕ್ರಮದ ಪ್ರಥಮ ಹೆಜ್ಜೆಯಲ್ಲಿ ಪ್ರಾರ್ಥನಾ ಗೀತೆಯನ್ನು ಹಾಡಿ ಪ್ರಕೃತಿಯ ಅಚ್ಚ ಹಸಿರಿನ ಗಿಡಕ್ಕೆ ನಿರೋಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ.
ವೇದಿಕೆಯಲ್ಲಿ ಇರುವ ಗಣ್ಯರಿಗೆ ಸಂಸ್ಥೆಯ ಪದಾಧಿಕಾರಿಗಳಿಗೆ ನನ್ನ ಮುದ್ದಿನ ಮಕ್ಕಳಿಗೆ ಸ್ವಾಗತ ಎಂದು ತುಸು ಮೆಲ್ಲನೆ ಶುರುಮಾಡಿದ ಐ. ಪಿ.ಎಸ್ ಶ್ರೀ ರವಿ ಚನ್ನಣ್ಣನವರ್ ರವರು ಸಂಸ್ಕಾರದ ಶಿಕ್ಷಣ ನಮ್ಮ ಕನ್ನಡಿಗರ ಹೆಮ್ಮೆಯ ಕಿರೀಟ ಎಂದರು.
ಇಂದಿನ ಮಕ್ಕಳೇ ನಾಳಿನ ರಾಷ್ಟ್ರದ ಯೋಧರು. ಮಕ್ಕಳು ದೇಶದ ಇತಿಹಾಸ ಪರಂಪರೆ ಎದುರಿಸುತ್ತಿರುವ ನೈಜ್ಯ ಜ್ವಲಂತ ಸಮಸ್ಯೆಗಳು ಪರಿಹಾರೋಪಾಯಗಳು ಇದರೆಲ್ಲವುದರ ಬಗ್ಗೆ ಅರಿವಿರಬೇಕು. ಅಂದಾಗ ಮಾತ್ರ ನಮ್ಮ ದೇಶ ಸುಭಿಕ್ಷವಾಗಿ ದೇಶ ಕಟ್ಟಲು ನೆರವಾಗುತ್ತದೆ. ಮಕ್ಕಳಿಗೆ ಅಧ್ಯಾಯದ ಶೀಲತೆ ಪದವಿ, ಪದವಿ ಪೂರ್ವ ಪ್ರೌಢ ಶಿಕ್ಷಣಕ್ಕೆ ಕೊಟ್ಟ ಪ್ರತಿಯೊಂದು ಪಾಠವನ್ನು ಒಂದು ಉದ್ದೇಶದ ಪೂರ್ವಕವಾಗಿ ಅಳವಡಿಸಲಾಗಿದೆ. ಮೂಢನಂಬಿಕೆಗಳಿಗೆ ದಾಸರಾಗುವುದು ಬೇಡ. ಭಯಪಡುವುದು ಬೇಡ. ಬದುಕಲಿಕ್ಕೆ ಕಲಿಸದ ವಿಜ್ಞಾನ ಯಾವುದಕ್ಕೆ ಪ್ರಯೋಜನ? ಯಾವುದು ಮನುಷ್ಯರನ್ನ ಸದೃಢರನ್ನಾಗಿ ಮಾಡುವುದೋ
ಅದಕ್ಕೆ ಹೇಳಿರುವುದು ಬಸವಣ್ಣನವರು. ಕಾಯಕವೇ ಕೈಲಾಸ ಎಂದು. ನಾವು ಐ.ಪಿ.ಎಸ್ ಆಗಬೇಕು,ಐ.ಎ.ಎಸ್ ಆಗಬೇಕು, ಡಾಕ್ಟರ್ ಆಗಬೇಕು, ಇಂಜಿನಿಯರ್ ಆಗಬೇಕು, ಲಾಯರ್ ಆಗಬೇಕು, ಪತ್ರಕರ್ತ ಆಗಬೇಕು ಆಗಲೇಬೇಕು ಎನ್ನುವುದು ಸರ್ವೋತ್ತಮ. ಆದರೆ ಏನು ಆಗಲೇ ಇಲ್ಲ ಎಂದರು ಸಹ ತಂದೆ ತಾಯಿಯರಿಗೆ ಒಳ್ಳೆಯ ಮಗನಾಗಿ ಅಥವಾ ಮಗಳಾಗಿ ರಾಷ್ಟ್ರಕ್ಕೆ ಒಳ್ಳೆಯ ಪ್ರಜೆಯಾಗಿ ಬದುಕಬೇಕು. ಕಲಿಕೆಗೆ ಯಾವುದು ಅಡೆಯುತ್ತದೆ ಇಲ್ಲ ಕಲಿಯಬೇಕು ಎಂಬ ನಿರ್ಧಾರ ಮಾಡಿದ ವ್ಯಕ್ತಿಗೆ ಯಾವುದು ಅಡ್ಡಿಯಾಗಲಾರದು. ಸಾಧಕರಿಗೆ ಇಡೀ ವಿಶ್ವವೇ ಸಹಾಯ ಹಸ್ತ ನೀಡುತ್ತದೆ. ಎಂದು ರವಿ ದ್ಯಾವಪ್ಪ ಚನ್ನಣ್ಣನವರ್ ರವರು ಮಾತಿನ ಸುರಿಮಳೆಯನ್ನೇ ಸುರಿಸಿದರು.
ಮುಂದೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಮಂಜಮ್ಮ ಜೋಗತಿ ರವರು ಶಿಕ್ಷಣ ಎಂದರೆ
ಸಾಕು ಮನಸ್ಸಿನಲ್ಲಿ ಏನೋ ಒಂದು ಆನಂದ. ಶಿಕ್ಷಣ ಎನ್ನುವುದು ನಮ್ಮ ಹೆಮ್ಮೆ! ಅಲ್ಲಿ ಜಾತಿ ಇಲ್ಲ ಮೇಲು ಕೀಳು ಎಂಬ ಭಾವನೆ ಇಲ್ಲ ಎಲ್ಲರೂ ಸರಿ ಸಮಾನರಂತೆ ನೋಡುವಂತಹ ವಿಷಯ ಶಿಕ್ಷಣ. ಶಿಕ್ಷಣ ಎನ್ನುವುದು ಡಿಗ್ರಿ , ಇಂಜಿನಿಯರ್, ಡಾಕ್ಟರ್ ಮಾಡಿ ಡಾಕ್ಟರ್ರೇಟ್ ಪಡೆದುಕೊಳ್ಳುವುದು ಶಿಕ್ಷಣವಲ್ಲ ಶಿಕ್ಷಣ ಎಂಬುವುದು ಒಂದು ಕಲೆ,ಕಲೆಗಾರನಲ್ಲಿರುವ ಒಂದು ಸತ್ವ ಮಕ್ಕಳಿಗೆ ಚಿಕ್ಕ ವಯಸ್ಸಿನಿದಲೇ ಶಿಕ್ಷಣವನ್ನು ಸರಿಯಾಗಿ ನೀಡದಿದ್ದಲಿ ದುಷ್ಪರಿಣಾಮಗಲ್ಲನುಂಟು ಮಾಡುವ ಸನ್ನಿವೇಶಗಳು ಉಂಟಾಗುತ್ತವೆ ಶಿಕ್ಷಣದಲ್ಲಿ ಎಲ್ಲವೂ ಇದೆ. ಆದರೆ
ನಾವು ಮಾಡುವಂತ ಕೆಲಸದಲ್ಲಿ ಭಕ್ತಿ ಶ್ರದ್ಧೆ ಎಲ್ಲವುದಕ್ಕಿಂತ ಸಮಯ ಪ್ರಜ್ಞೆ ಸಮಯ ಪಾಲನೆ ಮಾಡಬೇಕಾಗುತ್ತದೆ. ಸಮಯ ಪಾಲನೆ ಇಲ್ಲವಾದಲ್ಲಿ ವ್ಯಕ್ತಿ ವ್ಯಕ್ತಿತ್ವವನ್ನೇ ಗುರುತಿಸಲು ನಿಷ್ಕ್ರಿಯ ವಾಗುತ್ತಾನೆ.
ಇದಕ್ಕೆ ಹೇಳುವುದಲ್ಲವೇ ಯದ್ಭಾವಂ ಸದ್ಭಾವತಿ ಅಂತ!
ಉದಾಹರಣೆಗೆ ವಿನೋದ್ ಕರ್ತವ್ಯ ರವರು
ಕಳೆದ ಐದು ವರ್ಷಗಳಿಂದ *ಶಿಕ್ಷಣ ಎಂಬ ನಾಮಾಂಕಿತದಿಂದ ಪ್ರೇರಣೆಯಾಗಿರುವ ಶಿಕ್ಷಣ ತಂಡವು* ಬೆಂಗಳೂರಿನ ಸರ್ಕಾರಿ ಶಾಲೆಗಳಲ್ಲಿ *ಪ್ರತಿ ಶನಿವಾರ ಬೇಸಿಕ್ ಕಂಪ್ಯೂಟರ್ ತರಬೇತಿ ನೀಡುತ್ತಿದ್ದು,* ಹಾಗೆ ಪ್ರತಿ ವರ್ಷ ಕೊನೆಯಲ್ಲಿ ಎಲ್ಲಾ ಸರ್ಕಾರಿ (ಕಂಪ್ಯೂಟರ್ ಕಲಿತ) ಶಾಲಾ ಮಕ್ಕಳಿಗೆ ಅಭಿನಂದನೆ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಬಂದಿರುವುದು ಮೇಲುಗೈ ಸಾಧನೆ ಎಂದರೆ ತಪ್ಪಾಗಲಾರದು.
ಈ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿರುವ ಕಿರಣ್ ಹಾಗೂ ದಿವ್ಯ ಶಿಕ್ಷಣ ತಂಡದ ಸದಸ್ಯರಾದ, ಪ್ರೇಮ್ ಕುಮಾರ್, ಸುಮಾ, ಭಾರತಿ, ವಿಶ್ವ, ರಾಜೇಶ್, ನವೀನ್, ಇಳಂಗೋವನ್, ಪ್ರಕಾಶ್ ಹಾಗೂ ಮತಿತ್ತರರು ಶ್ರಮವಹಿಸಿ ಸಮಯೋನ್ಮುಖ ಸೃಜನಶೀಲವಾಗಿ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿರುವುದು ನಮ್ಮೆಲ್ಲರ ಹೆಮ್ಮೆ ಎಂದು ನುಡಿಮುತ್ತುಗಳ ಜೀವನದಿಯನ್ನೇ ಮಕ್ಕಳಿನ ಮನಸ್ಸೆಂಬ ಸಾಗರದ ಕಡೆ ಹರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗೆ ಸದಾ ಬೆಂಬಲ ನೀಡುತ್ತಿರುವ ಶ್ರೀ ವೆಂಕಟೇಶ್ (ಮುದ್ದಣ್ಣ), ಶ್ರೀ ಆಂಟೋನಿ, ಶ್ರೀ ಗಜೇಂದ್ರ, ಶ್ರೀ ಶಂಕರ್, ಶ್ರೀ ಕುಸುಮ, ಶ್ರೀ ಸುರೇಶ್,ಶ್ರೀ ಉಮಾದೇವಿ ಅವರನ್ನು ಸನ್ಮಾನಿಸಿ ಗೌರವಿಸಲಾಗಿದ್ದು
ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಹೆಸರಾಂತ ಗಾಯಕರ ಶ್ರೀ ವಿದ್ವಾನ್ ಸುರೇಶ್ ಶಾಸ್ತ್ರಿ ರವರ ಸುಪುತ್ರಿ ಆಗಿರುವ ಅಂಜಲಿ (ಚೈತ್ರ) ರವರು ಸಂಪಂಗಿ ರಾಮನಗರದ ಶಿಕ್ಷಕರು ಭಾಗವಯಿಸಿದ್ದು. ಆಯ್ಕೆಯಾಗಿದ್ದ 7 ಸರ್ಕಾರಿ ಶಾಲೆಯ (ಸಂಪಂಗಿ ರಾಮನಗರ, ಶಾಂತಿ ನಗರ, ಕೆತಮಾರನಹಳ್ಳಿ, ವಸಂತ ನಗರ, ನಾಗವಾರ ಪಾಳ್ಯ, ಕಗ್ಗದಾಸಪುರ ಮತ್ತು ಕೋಲಾರದ ಕಾಮಧೇನು ಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳು ಭಾಗವಹಿಸಿದ್ದು ಮಕ್ಕಳಿಗೆ ನೆನಪಿನ ಕಾಣಿಕೆ, ಪದಕಗಳನ್ನು ಹಾಗೂ ಪ್ರಮಾಣ ಪತ್ರ ವಿತರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಲ್ಲಾ ಸರ್ಕಾರಿ ಶಾಲೆಯ ಮಕ್ಕಳು ನೃತ್ಯ ಮತ್ತು ಹಾಡುಗಳಿಂದ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು....!