ವಾಣಿಜ್ಯ ಮತ್ತು ಕೈಗಾರಿಕೋದ್ಯಮಗಳ ಮುಂಚೂಣಿಯಲ್ಲಿರುವ ಎಫ್‌ಕೆಸಿಸಿಐ ನಾಯಕತ್ವ ಮತ್ತು ಸದಸ್ಯರುಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು ಹಾಗೂ ಡಿಪೊ?ಲಮ ಮತ್ತು ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿ ಅವರನ್ನು ರಾ ಷ್ಟç ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಎಫ್‌ಕೆಸಿಸಿಐ ಮುಂದಾಗಬೇಕು ಎಂದು ಪೊ?ರ. ದೊರೆಸ್ವಾಮಿಯವರು ಕರೆ ನೀಡಿದರು.
ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ. ಗೋಪಾಲರೆಡ್ಡಿಯವರು, ಎಫ್‌ಕೆಸಿಸಿಐನ ನಿಕಟ ಪೂರ್ವಾಧ್ಯಕ್ಷರು ಮತ್ತು ಪದಾಧಿಕಾರಿಗಳೊಡನೆ ಸಮಾಲೋಚನಾ ಸಭೆಯ ನಂತರ ಪ್ರೊ. ದೊರೆಸ್ವಾಮಿಯವರು ರಾಜ್ಯದಲ್ಲಿ ೪೮ ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿದ್ದು, ಅವುಗಳಲ್ಲಿ ಶೆಕಡಾ ೬೦ರಷ್ಟು ಶಾಲೆಗಳಿಗೆ ಒಂದಿಲ್ಲೊ0ದು ಸೌಕರ್ಯದ ಕೊರತೆ ಇದೆ. ಈ ವಿಚಾರವನ್ನು ಸ್ವತ: ಶಾಲಾ ಶಿಕ್ಷಣ ಮಂತ್ರಿ ಬಿ.ಸಿ. ನಾಗೇಶ್‌ರವರು ಪತ್ರಿಕೆಗಳೊಂದಿಗೆ ಹಂಚಿಕೊ0ಡಿದ್ದಾರೆ. ಕಳೆದೆರೆಡು ವರ್ಷಗಳಿಂದ ರಾಜ್ಯ ಅಕಾಲಿಕ ಹವಾಮಾನ ವೈಪರೀತ್ಯ, ಅತಿವೃಷ್ಟಿ ಹಾಗೂ ಕೋವಿಡ್-೧೯ ವೈರಾಣು ಪಿಡಿಗಿನಿಂದ ತತ್ತರಿಸಿ ಇದೀಗ ಸುಸ್ಠಿತಿಗೆ ಮರಳುತ್ತಿದೆ. ಈ ಕ್ಲಿಷ್ಟ ಸಮಯದಲ್ಲಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸುವ ಸರ್ಕಾರದ ಸಂಕಲ್ಪಕ್ಕೆ ಪೂರಕವಾಗಿ ಎಫ್‌ಕೆಸಿಸಿಐ ಸಹಾಯಹಸ್ತ ನೀಡಬೇಕೆಂದು ಮನವಿ ಸಲ್ಲಿಸುತ್ತಿದ್ದೇನೆ.
ನನ್ನ ಸ್ವಪ್ರಯತ್ನದಿಂದ ಚುನಾಯಿತ ಪ್ರತಿನಿಧಿಗಳು (ಎಮ್.ಎಲ್.ಎ., ಎಮ್.ಎಲ್.ಸಿ. ಸಂಸದರು) ಹಾಗೂ ವಿಶ್ವವಿದ್ಯಾಲಯಗಳು / ಸ್ವಾಯುತ್ತ ಕಾಲೇಜುಗಳನ್ನು ಸರ್ಕಾರಿ ಶಾಲಾಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿ, ಸುಮಾರು ೧೬೦೦ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಇನ್ನೂ ಸಾವಿರಾರು ಶಾಲೆಗಳಿಗೆ ಬೆಂಬಲ ಬೇಕಾಗಿದೆ. ಆದ್ದರಿಂದ ಎಫ್‌ಕೆಸಿಸಿಐಗೆ ನನ್ನ ಕಳಕಳಿಯ ಮನವಿ
ಇದೇ ರೀತಿ ಉನ್ನತ ಶಿಕ್ಷಣಕ್ಕೆ ಸಂಬAಧ ಪಟ್ಟಂತೆ, ಪದವಿ ಮತ್ತು ಡಿಪ್ಲೊಮ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಎಫ್‌ಕೆಸಿಸಿಐನಂಥ ಸಂಸ್ಥೆಗಳ ಸಹಯೋಗ ಅತ್ಯವಶ್ಯಕ. ಈ ನಿಟ್ಟಿನಲ್ಲಿ ಪ್ರತಿ ವಿಶ್ವವಿದ್ಯಾಲಯಗಳಲ್ಲೂ ಎಫ್‌ಕೆಸಿಸಿಐ ವಿವಿ ಉದ್ಯೋಗ ನಿಯೋಜನಾ ಕೇಂದ್ರಗಳನ್ನು ಸ್ಥಾಪಿಸಿ ಯುವಜನರ ಕನಸುಗಳನ್ನು ಸಾಕಾರಗೊಳಿಸಲು ಸನ್ನದ್ಧರಾಗಬೇಕು ಎಂದು ಮನವಿ ಸಲ್ಲಿಸಿದರು.
ಸಮಾಲೋಚನಾ ಸಭೆಯಲ್ಲಿ ಉದ್ಭವಿಸಿದ ಇತರೆ ಮುಖ್ಯಾಂಶಗಳು ಈ ಕೆಳಕಂಡAತಿವೆ:
೧. ಶಾಲಾ ನಿರ್ಮಾಣ / ದುರಸ್ಥಿ ಕೈಗೊಂಡ ಬಳಿಕ ಅವುಗಳ ನಿರ್ವಹಣೆ ಇಲ್ಲದೆ ನಿರ್ಮಾಣ ಕಾರ್ಯವೇ ವ್ಯರ್ಥವಾಗುತ್ತದೆ. ಆದ್ದರಿಂದ ಸರ್ಕಾರ, ಸರ್ಕಾರಿ ಶಾಲೆಗಳ ನಿರ್ವಹಣೆಗೆಂದೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು.
೨. ಸಿಎಸ್‌ಆರ್ ಸಂಪನ್ಮೂಲಗಳಿAದ ಶಾಲಾ ನಿರ್ಮಾಣ ಮತ್ತು ದುರಸ್ಥಿ ಮತ್ತಿತರ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಲು ಅವಕಾಶ ಕಲ್ಪಿಸಬೇಕು
ಮೇಲಿನ ಅಂಶಗಳಿಗೆ ಸ್ಪಂದಿಸುತ್ತಾ ಪ್ರೊ. ದೊರೆಸ್ವಾಮಿಯವರು ಸರ್ಕಾರದಿಂದ ಸಂಪೂರ್ಣ ಸಹಕಾರ ಮತ್ತು ಸಹಾಯಗಳ ಭರವಸೆ ನೀಡಿದರು.
ಎಫ್‌ಕೆಸಿಸಿಐ ಅಧ್ಯಕ್ಷರಾದ ಶ್ರೀ ಗೋಪಾಲರೆಡ್ಡಿಯವರು ಮಾತನಾಡಿ, ಇದೊಂದು ವಿನೂತನ ಮತ್ತು ಪ್ರಶಂಸಾರ್ಹ ಉಪಕ್ರಮ, ಇದಕ್ಕಾಗಿ ಪ್ರೊ.ದೊರೆಸ್ವಾಮಿಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಎಫ್‌ಕೆಸಿಸಿಐ ವತಿಯಿಂದ ಎಲ್ಲಾ ಸಹಯೋಗ ಸಹಕಾರಗಳನ್ನು ನೀಡುವ ಭರವಸೆ ನೀಡಿದರು.
ಎಫ್‌ಕೆಸಿಸಿಐನ ಎಂ.ಜಿ. ಬಾಲಕೃಷ್ಣ, ಉಪಾಧ್ಯಕ್ಷರು, ಪೂರ್ವಾಧ್ಯಕ್ಷರುಗಳಾದ ಕೆ.ಎಂ. ನಿವಾಸಮೂರ್ತಿ, ಕೆ. ಲಕ್ಷ÷್ಮಣ್, ಕೆ. ರಾಮಸ್ವಾಮಿ, ಬಿ.ಎಸ್. ಅರುಣ್‌ಕುಮಾರ್, ಎಸ್. ಬಾಬು, ಡಾ|| ಜೆ.ಆರ್. ಬಂಗೇರ, ಕೆ. ಶಿವಷಣ್ಮುಗಂ, ಬಿ.ಪಿ. ಶಶಿಧರ್, ನಿರ್ದೇಶಕರು, ಕರಣ್ ಕುಮಾರ್, ನಿರ್ದೇಶಕರು, ಪೇಸರ್ ಫೌಂಡೆಷನ್, ಬೆಂಗಳೂರು ಇವರುಗಳೆಲ್ಲರೂ ಸಮಾಲೋಚನಾ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.