ಜಿಲ್ಲಾ ಮಟ್ಟದ ಶಿಕ್ಷಣ ಹಕ್ಕು ಕಾಯ್ದೆ-2009 ರ ಪರಿಣಾಮಕಾರಿ ಅನುಷ್ಠಾನದ ಕುರಿತು ಸಮಾಲೋಚನಾ ಸಭೆ.

varthajala
0

ಪಡಿ ಸಂಸ್ಥೆಯು ಶಿಕ್ಷಣ ಹಕ್ಕು ಕಾಯಿದೆಯ ಸಮರ್ಪಕ ಅನುಷ್ಠಾನವನ್ನು ಮಾಡುವಲ್ಲಿ ನಗರಸಭೆ/ಪುರಸಭೆ/ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರನ್ನು ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಮಾದರಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಒಟ್ಟು 24 ಸ್ಥಳೀಯ ಸರಕಾರಗಳಲ್ಲಿ ಚುನಾಯಿತ ಸದಸ್ಯರಿಗೆ ತರಬೇತಿಗಳುಪ್ರಗತಿ ಪರಿಶೀಲನೆಸ್ವಮೌಲ್ಯಮಾಪನಗಳ ಮೂಲಕ ಸಶಕ್ತಗೊಳಿಸಲು ವಿವಿಧ ಹಂತಗಳಲ್ಲಿ ಇಲಾಖೆಗಳ ಸಹಭಾಗಿತ್ವದೊಂದಿಗೆ ಕಾರ್ಯಚರಿಸಿದೆ.

 


ಮಕ್ಕಳ ಹಕ್ಕುಗಳುಅವರ ರಕ್ಷಣೆ ಮತ್ತು ಪೋಷಣೆಗಳಲ್ಲಿ ಸ್ಥಳೀಯ ಸರಕಾರದ ಪಾತ್ರ ಅತೀ ಮುಖ್ಯವಾದುದು ಎಂದು ಕಂಡುಕೊಂಡಿದ್ದು ನಿಟ್ಟಿನಲ್ಲಿ ಪಡಿ ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಸಮಾಲೋಚನಾ ಕಾರ್ಯಕ್ರಮವನ್ನು ದಿನಾಂಕ: 20-01-2023 ರಂದು 10.30 ಗಂಟೆಗೆ  ಸರಿಯಾಗಿ ಮರಿಯ ಪೈವಾ ಹಾಲ್ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶಿನಿ ನಿಲಯದಲ್ಲಿ ಆಯೋಜಿಸಲಾಗಿದೆ.

 

 ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಡಾ|| ಕುಮಾರ್ ಭಾ..ಸೇ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್‌ ದ.ಕಗೌರವಾನ್ವಿತ ಶೋಭಾ ಬಿ.ಜಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ.ಕ ರೆನ್ನಿ ಡಿʼಸೋಜ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳುಪಡಿ ಸಂಸ್ಥೆ.  ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ನಯನಾ ರೈವಿವಿಧ ಗ್ರಾಮ ಪಂಚಾಯತ್ ಹಾಗೂ ನಗರಸಭೆ/ಪುರಸಭೆಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು/ಆಯುಕ್ತರುಗಳುಗ್ರಾಮ/ನಗರಸಭೆ/ಪುರಸಭೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಶಿಕ್ಷಣಾಸಕ್ತರು ಭಾಗವಹಿಸಲಿದ್ದಾರೆ ಎಂದು ಪಡಿ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಗ್ಲೀಶಾ ಮೊಂತೆರೊ ತಿಳಿಸಿದ್ದಾರೆ


Post a Comment

0Comments

Post a Comment (0)