ಯುವ ಸಮೂಹ ಎತ್ತ ಸಾಗುತ್ತಿದೆ ಎಂದು ಸಮಾಜ ಚಿಂತನೆ ಮಾಡಬೇಕು- ನ್ಯಾಯಮೂರ್ತಿಗಳು,ಉಪಲೋಕಾಯುಕ್ತರಾದ ಕೆ.ಎನ್.ಘಣೀಂದ್ರ
ಕರ್ನಾಟಕ ರಾಜ್ಯ ಸಹಕಾರ ಕ್ಷೇತ್ರದಲ್ಲಿ ಮಹತ್ವವಾದ ಸಾಧನೆ ಮಾಡಿದೆ- ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘ ನಿಯಮಿತ ವತಿಯಿಂದ 109ನೇ ಸಂಸ್ಥಾಪನಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ.
ಉದ್ಘಾಟನೆಯನ್ನು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಭಾ.ಆ.ಸೇ, ನ್ಯಾಯಮೂರ್ತಿಗಳು,ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರರವರು, ಉಪ ಆಯುಕ್ತರಾದ ರಾಹುಲ್ ಶರಣಪ್ಪ ಸಂಕನೂರು ಭಾ.ಆ.ಸೇ.ರವರು ಸಹಕಾರ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು, ಚಲನಚಿತ್ರ ನಟಿ ಪ್ರೇಮಾರವರು, ವಕೀಲರಾದ ಶ್ರೀನಿವಾಸ್ ರವರು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು. ಪ್ರತಿಭಾವಂತ 140ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.
ನ್ಯಾಯಮೂರ್ತಿಗಳು ಉಪಲೋಕಾಯುಕ್ತರಾದ ಕೆ.ಎನ್.ಫಣೀಂದ್ರರವರು ಮಾತನಾಡಿ ಮೇರು ಸಂತ ಸಿದ್ದೇಶ್ವರ ಸ್ವಾಮೀಜಿರವರು ಆಗಲಿಕೆಯಿಂದ ತುಂಬಲಾರದ ನಷ್ಟ ಉಂಟಾಗಿದೆ.
ಸಹಕಾರ ಮತ್ತು ಸರ್ಕಾರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು, ದೇಶದ ಉಜ್ವಲ ಭವಿಷ್ಯ ಮಕ್ಕಳಲ್ಲಿ ಅಡಗಿದೆ.
ಕೆಟ್ಟವರು, ಒಳ್ಳೆಯವರು ಸಮಾಜದಲ್ಲಿ ಇರುತ್ತಾರೆ .
ಅಣ್ಣ,ತಮ್ಮಂದಿರ ನಡುವೆ ವೈಮನಸ್ಸು ಇರುತ್ತದೆ .ಆಡಳಿತದಲ್ಲಿ ವ್ಯವಸ್ಥೆಯಲ್ಲಿಯೂ ಸಹಜ. ಯುವ ಸಮೂಹ ಎತ್ತ ಕಡೆ ಸಾಗುತ್ತಿದೆ ಎಂಬ ಚಿಂತನೆ ಸಮಾಜ ಮಾಡಬೇಕಾಗುತ್ತದೆ. ಮಕ್ಕಳಿಗೆ ಮನೆಯ ಮೊದಲ ಪಾಠ ಶಾಲೆ. ತಾಯಿ ಮೊದಲ ಗುರುವಾಗಿ ಕಾಣುತ್ತಾಳೆ,ತಂದೆಯು ಮಕ್ಕಳಿಗೆ ಶಿಸ್ತ್ರು ಬದ್ದವಾಗಿ ಕಲಿಸುವ ಜವಾಬ್ಬಾರಿ ಇರುತ್ತದೆ.
ತಂದೆ,ತಾಯಿಗಿಂತ ಮೀಗಿಲಾದ ಸ್ಥಾನವನ್ನು ಗುರುವಿಗೆ ನೀಡಿದರು. ವಿದ್ಯಾ ಕಲಿತ ಯಶ್ವಸಿಯಾದ ವಿದ್ಯಾರ್ಥಿಯನ್ನ ಸಮಾಜ ಕಾಪಾಡಬೇಕು. ಸಮಾಜದಿಂದ ಎಲ್ಲವನ್ನು ಪಡೆದೆವು, ಸಮಾಜಕ್ಕಾಗಿ ನಾವು ಏನು ಕೊಟ್ಟೆವು ಎಂಬ ದೇಶಭಕ್ತಿ ಕಲಿಸಬೇಕು.
ಪ್ರತಿಯೊಬ್ಬ ವ್ಯಕ್ತಿಯೂ ಹುಟ್ಟಿದ ನಂತರ ಕರ್ತವ್ಯ ನಿಭಾಯಿಸಬೇಕು. ಪ್ರಾಮಾಣಿಕವಾಗಿ ಜೀವನ ಸಾಗಿಸದರೆ ಸಾಕು.
ದೇಶದಲ್ಲಿ ಪ್ರಾಮಾಣಿಕತೆ ಹೆಚ್ಚಾಗಬೇಕು, ಅಪ್ರಮಾಣಿಕತೆ ಕಡಿಮೆಯಾಗಬೇಕು ಆಗ ಮಾತ್ರ ದೇಶ ಅಭಿವೃದ್ದಿ ಸಾಧ್ಯ.
ಸರ್ವರಿಗೂ ಸಮಪಾಲು,ಸರ್ವರಿಗೂ ಬಾಳು ಬಾಳಲು ಸಂವಿಧಾನ ಎಲ್ಲರಿಗೂ ಅವಕಾಶ ಕೊಟ್ಟಿದೆ.
ಮಕ್ಕಳ ವಿದ್ಯೆ ಕಲಿತರೆ, ಜೀವನದಲ್ಲಿ ವಿನಯ ಬರುತ್ತದೆ, ವಿನಯ ಇದ್ದಾಗ ವಿಶ್ವವನ್ನೆ ಗೆಲುವು ಶಕ್ತಿ ಬರುತ್ತದೆ ಎಂದು ಹೇಳಿದರು.
ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಮಾತನಾಡಿ ಕರ್ನಾಟಕ ರಾಜ್ಯ ಸಹಕಾರ ಕ್ಷೇತ್ರದಲ್ಲಿ ಮಹತ್ವವಾದ ಸಾಧನೆ ಮಾಡಿದ. ಗದಗ ಜಿಲ್ಲೆಯಿಂದ ಸಹಕಾರ ಕ್ರಾಂತಿ ಆರಂಭವಾಯಿತು.
ನಿಗದಿತ ಠೇವಣಿ ಹಣವನ್ನು ಉತ್ತಮ ಬಡ್ಡಿ ದರ ನೀಡುತ್ತಿದ್ದಾರೆ.ಅತ್ಯಂತ ಕಡಿಮೆ ವೆಚ್ಚೆದಲ್ಲಿ ಆಡಳಿತ ನಿರ್ವಹಣೆ ಮಾಡಿ ಉತ್ತಮ ಸಾಧನೆಯತ್ತ ಸಹಕಾರ ಯಶ್ವಸಿಯತ್ತ ಸಾಗುತ್ತಿದೆ.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ, ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭಾ ಹಾರೈಸಿದರು.
ರಾಹುಲ್ ಶರಣಪ್ಪ ಸಂಕನೂರು ರವರು ಮಾತನಾಡಿ 16ರಿಂದ 22ವಯಸ್ಸು ಬಹಳ ಜಾಗೃತೆಯಿಂದ ಸಾಗಬೇಕು. ಜೀವನ ಬದಲಾವಣೆ ಸಮಯ ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳ ಜೊತೆಯಲ್ಲಿ ಅವರ ತಂದೆ,ತಾಯಿರವರಿಗೂ ಸಹ ಅಭಿನಂದನೆ ಸಲ್ಲಿಸಬೇಕು. ಕೆಲಸದ ಒತ್ತಡದ ನಡುವೆ ಮಕ್ಕಳ ವಿದ್ಯಾಭ್ಯಾಸಕ್ಕೆ ತಂದೆ,ತಾಯಿ ಹೆಚ್ಚಿನ ಗಮನ ನೀಡಿರುವುದು ಉತ್ತಮ ವಿಷಯ.
ಚಿತ್ರನಟಿ ಪ್ರೇಮಾರವರು ಮಾತನಾಡಿ ಕಲಾವಿದರ ಮೇಲೆ ಜನರ ಪ್ರೀತಿ, ವಿಶ್ವಾಸ, ಪ್ರೋತ್ಸಾಹ ನೀಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳು ರಾಜ್ಯ,ರಾಷ್ಟ್ರದ ಸೇವೆ ಮಾಡುವಂತಾಗಲಿ ಎಂದು ಹೇಳಿದರು.
ಸಹಕಾರ ಸಂಘದ ಕೆ.ಜಿ.ರವಿ, ಎಸ್.ಜಿ.ಸುರೇಶ್, ಮಾರೇಗೌಡ, ರಾಜಶೇಖರ್, ಶಂಕರ್, ರಾಮಚಂದ್ರ, ಕಾಂಚನಾ, ಹನುಮಂತಪ್ಪ,ಮಂಜುನಾಥ್, ಶ್ರೀಮತಿ ಲಕ್ಷ್ಮೀ,ಶ್ರೀಮತಿ ವಾಣಿರವರು ಪಾಲ್ಗೊಂಡಿದ್ದರು.