ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ವೆಂಕಟಗಿರಿ ಕೋಟೆಯಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿರುವ ನಾನು ಸಾವಿರದ ಒಂಬೈನೂರ ತೊಂಬತ್ತೈದ ರಿಂದ ವೃತ್ತಿಗೆ ಸೇರಿದ ಆಗಿನಿಂದಲೂ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದು ಆ ಮೂಲಕ ಅನೇಕ ಲೇಖನಗಳು ವಿಚಾರಗಳು ಇಷ್ಟವಾಗಿ ಅವುಗಳನ್ನು ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ನಾನು ಸಂಗ್ರಹಿಸಿದಂತಾಗಿದೆ'.. , ಇದರ ಫಲವಾಗಿ ನನ್ನ ಬಳಿ ಇಂದು ಹದಿನಾರು ಸಾವಿರ ಪತ್ರಿಕೆಗಳು ಸಂಗ್ರಹವಾಗಿದ್ದು ಕನ್ನಡವೂ ಸೇರಿದಂತೆ ದೇಶ-ವಿದೇಶದ ಸುಮಾರು 16 ಸಾವಿರ ಪತ್ರಿಕೆಗಳು ಸಂಗ್ರಹವಾಗಿದ್ದು ಹಾಗೂ ಇವುಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವ ಮೂಲಕ ಪತ್ರಿಕೋದ್ಯಮಕ್ಕೆ ಆಳಿಲು ಸೇವೆ ಮಾಡುತ್ತಿದ್ದೇನೆ. ಮುಖ್ಯವಾಗಿ ಪತ್ರಿಕೆಗಳನ್ನು ಕೊಂಡು ಓದುವ ಮೂಲಕ ಉಳಿಸಿ ಬೆಳೆಸಬೇಕಾದ ಕೆಲಸ ಆಗಬೇಕಾಗಿದೆ ವಿಶ್ವದ ಪತ್ರಿಕೆಗಳನ್ನು ಕನ್ನಡಿಗರು ನೋಡಬೇಕು ಹಾಗೂ ಕನ್ನಡದ ಪತ್ರಿಕೆಗಳನ್ನು ವಿಶ್ವದ ಪತ್ರಿಕೋದ್ಯಮದ ಗಮನಸೆಳೆಯಬೇಕೆಂಬ ಉದ್ದೇಶದಿಂದ ನಿರಂತರವಾಗಿ ಸಂಗ್ರಹಿಸುತ್ತಾ ಪ್ರದರ್ಶನ ಮಾಡುತ್ತಿದ್ದೇನೆ ಕನ್ನಡದಲ್ಲಿ ನೂರಾರು ಪತ್ರಿಕೆಗಳು ಪ್ರತಿನಿತ್ಯ ಬರುತ್ತಿದ್ದು ಅವುಗಳನ್ನು ಸಾಕಷ್ಟು ಸಂಗ್ರಹಿಸಲು ಸಾಕಷ್ಟು ಹರಸಹಾಸ ಪಡುತ್ತಿದ್ದೇನೆ. ನಿಮ್ಮ ಪತ್ರಿಕೆಗಳನ್ನು ಬಹಳ ವಿಶ್ವಾಸದಿಂದ ಕಳುಹಿಸಿಕೊಡಿ ಎಂದು ಕೇಳಿದರು ಒಂದು ಪತ್ರಿಕೆಗಳನ್ನು ಕಳುಹಿಸಿಕೊಡದೆ ಇರುವುದು ವಿಷಾದನೀಯ. ಆದರೂ ಇಂತಹ ಕಾರ್ಯಕ್ರಮಗಳು ಮಾಡಿದಾಗ ನಿಮ್ಮ ಪತ್ರಿಕೆಗಳಲ್ಲಿ ಪ್ರಚಾರ ಮಾಡುವ ಮೂಲಕ ಸಂಪಾದಕರು ಕೊಡುವ ಮನಸ್ಸು ಮಾಡ ಬೇಕೆಂದು ಕೋರುತ್ತೇನೆ ನಾನು ಇದುವರೆಗೂ ನೂರಾರು ಸಮ್ಮೇಳನಗಳಲ್ಲಿ ಭಾಗವಹಿಸಿದ್ದು ಪ್ರತಿಯೊಂದು ಸಮ್ಮೇಳನದಲ್ಲೂ ನಾನೇ ಸ್ವಂತ ಹಣ ನೀಡಿ ಮಳಿಗೆ ಪಡೆದು ಈ ಕೆಲಸ ನಿರ್ವಹಿಸುತ್ತಿದ್ದೇನೆ ಎನ್ನುತ್ತಾರೆ ಶಾಲಾ ಶಿಕ್ಷಕ ಕಲ್ಯಾಣ್ ಕುಮಾರ್ ...
ಇವರ ಮೊಬೈಲ್ ಸಂಖ್ಯೆ 8660161546.