ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್
ವಾರ್ತಾಜಾಲ,ಶಿಡ್ಲಘಟ್ಟ : ಮಕ್ಕಳನ್ನು ಬಲವಂತವಾಗಿ ಆಂಗ್ಲ ಭಾಷೆಗೆ ಒತ್ತಾಯ ಮಾಡಿದರೆ ಮಕ್ಕಳ ಮಾನಸಿಕ ಬಲ ಕುಗ್ಗಿ ಹೋಗುತ್ತದೆ, ಮಕ್ಕಳ ಆಲೋಚನಾ ಶಕ್ತಿ, ಸೃಜನಶೀಲತೆ ನಶಿಸಿ ಹೋಗುತ್ತದೆ ಎಂದು ಕ.ಸಾ.ಪ.ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಇಂದಿರಾಗಾಂಧಿ ವಸತಿಶಾಲೆಯಲ್ಲಿ 09 ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಭಾಷೆಯೊಂದಿಗೆ ಇಂಗ್ಲೀಷ್ ಕಲಿಸಲು ವ್ಯವಸ್ಥೆ ಮಾಡಿದೆ.ಕನ್ನಡ ಭಾಷೆಯ ಮಾಧ್ಯಮದಲ್ಲಿ ಓದಿಸಿದರೆ, ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸಿದರೆ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಗೌರವ ಬೆಳೆಯುವುದು ಮತ್ತು ಹೊಸ ಹೊಸ ಆಲೋಚನೆಗಳು, ಸೃಜನಶೀಲತೆ ಬೆಳೆಯುತ್ತದೆ ಎಂದರು.
ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಧ್ವಜಾರೋಹಣವನ್ನು ಪೌರಾಯುಕ್ತ ಆರ್ ಶ್ರೀಕಾಂತ್ ನೆರವೇರಿಸಿದರು. ನಾಡಧ್ವಜಾರೋಹಣವನ್ನು ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್ ಮತ್ತು ಕ.ಸಾ.ಪ ಧ್ವಜಾರೋಹಣವನ್ನು ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ನೆರವೇರಿಸಿದರು.
ನಿಕಟಪೂರ್ವ ಅಧ್ಯಕ್ಷೆ ಯಶೋಧಮ್ಮ ರವರು ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಸಂತೆ ನಾರಾಯಣಸ್ವಾಮಿ ಅವರಿಗೆ ಧ್ವಜವನ್ನು ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಪೃಥ್ವಿ ರೈತರ ನಾಡು, ಕನ್ನಡ ಭಾಷೆ ಹಾಗೂ ನಾಡಿನ ಸಂಸ್ಕೃತಿಯನ್ನು ಬೆಳೆಸುವ ಸ್ಥಳವಾಗಿದೆ. ರೈತ ಸಂಸ್ಕೃತಿಯ ಸಮುದಾಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದರಿಂದ ಅದರ ವಿಶೇಷತೆಗಳೆ ವಿಭಿನ್ನವಾಗಿರುತ್ತವೆ. ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಲು, ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ದೈಹಿಕ ಶಿಕ್ಷಕರು,ಭಾರತ ಸೇವಾದಳ,ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಶಾಲಾ ಮಕ್ಕಳಿಂದ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎಸ್.ರಾಜೀವ್, ನಿಕಟ ಪೂರ್ವ ಅಧ್ಯಕ್ಷೆ ಯಶೋಧಮ್ಮ,ನಗರ ಪ್ರಾಧಿಕಾರ ಅಧ್ಯಕ್ಷ ಬಿ.ಸಿ ನಂದೀಶ್, ಕೋಚಿಮೂಲ್ ಆರ್ ಶ್ರೀನಿವಾಸ್, ಇಓ ಮುನಿರಾಜು, ಬಿ ಇಓ ರಘುನಾಥ್ ರೆಡ್ಡಿ, ಸಿಡಿಪಿಓ ನೌತಾಜ್, ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಸುಬ್ಬಾರೆಡ್ಡಿ,ನಿಕಟ ಪೂರ್ವ ಅಧ್ಯಕ್ಷ ಎ.ಎಂ ತ್ಯಾಗರಾಜು, ಮೇಲೂರು ಸಚ್ಚಿನ್, ಪಟೇಲ್ ನಾರಾಯಣಸ್ವಾಮಿ, ಶಾಲಾ ಪ್ರಾಂಶುಪಾಲರಾದ ಜಯಶ್ರೀ,ರಾಮಾಂಜಿ, ಕ.ಸ.ಪರಿಷತ್ತಿನ ಎಲ್ಲಾ ಪಧಾದಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ತಾಲ್ಲೂಕಿನ ಎಲ್ಲಾ ಕನ್ನಡ ಅಭಿಮಾನಿಗಳು, ಮುಂತಾದವರಿದ್ದರು.