ಬೆಂಗಳೂರು, ಡಿಸೆಂಬರ್ ೨೪ (ಕರ್ನಾಟಕ ವಾರ್ತೆ): ೨೦೨೩ನೇ ಸಾಲಿನ ವಿಕಲಚೇತನರ ರಿಯಾಯಿತಿ ಬಸ್ ಪಾಸಿಗಾಗಿ ಅರ್ಹ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ hಣಣಠಿs://sevಚಿsiಟಿಜhuseಡಿviಛಿes.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಆನ್‌ಲೈನ್‌ನಲ್ಲಿ ೨೬ನೇ ಡಿಸೆಂಬರ್ ೨೦೨೨ ರಿಂದ ಅರ್ಜಿ ಸಲ್ಲಿಸಬಹುದಾಗಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ತಾವು ಆಯ್ಕೆ ಮಾಡಿಕೊಂಡ ಬಸ್‌ನಿಲ್ದಾಣಗಳಿಗೆ ತೆರಳಿ ದಾಖಲೆಗಳನ್ನು ಸಲ್ಲಿಸಿ ಪಾಸ್‌ಗಳನ್ನು ಪಡೆಯಬಹುದಾಗಿದೆ.
೨೦೨೩ ನೇ ಸಾಲಿನ ವಿಕಲಚೇತನರ ರಿಯಾಯಿತಿ ಪಾಸ್‌ಗಳನ್ನು ಡಿಸೆಂಬರ್ ೨೬ ರಿಂದ ನೂತನ ಪಾಸುಗಳನ್ನು ವರ್ಷವಿಡೀ ವಿತರಣೆ ಮಾಡಲಾಗುವುದು. ಕಳೆದ ಸಾಲಿನ ವಿಕಲಚೇತನರ ಬಸ್‌ಪಾಸ್‌ಗಳನ್ನು ೨೮ನೇ ಫೆಬ್ರವರಿ ೨೦೨೩ ರೊಳಗೆ ನವೀಕರಿಸಿಕೊಳ್ಳುವುದು. ರಿಯಾಯಿತಿ ಪಾಸಿನ ದರ ರೂ. ೬೬೦/- ಗಳಾಗಿದ್ದು, ವಿಕಲಚೇತನರು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ ೨೦೨೨ನೇ ಸಾಲಿನಲ್ಲಿ ವಿತರಿಸಿ ೩೧ನೇ ಡಿಸೆಂಬರ್ ೨೦೨೨ರ ವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸ್‌ಗಳನ್ನು ೨೮ನೇ ಫೆಬ್ರವರಿ ೨೦೨೩ ರವರೆಗೆ ಮಾನ್ಯ ಮಾಡಲಾಗುವುದು.
ನೂತನ ಪಾಸ್‌ಗಳನ್ನು ಕೆಂಪೇಗೌಡ ಬಸ್‌ನಿಲ್ದಾಣದಲ್ಲಿ ಮಾತ್ರ ವಿತರಣೆ ಮಾಡಲಾಗುವುದು. ಕಳೆದ ಸಾಲಿನ ಬಸ್‌ಪಾಸ್‌ಗಳನ್ನು ಕೆಂಪೇಗೌಡ ಬಸ್‌ನಿಲ್ದಾಣ, ಬನಶಂಕರಿ ಟಿಟಿಎಂಸಿ, ವಿಜಯನಗರ ಟಿಟಿಎಂಸಿ, ದೊಮ್ಮಲೂರು ಟಿಟಿಎಂಸಿ, ಶಿವಾಜಿನಗರ ಬಸ್‌ನಿಲ್ದಾಣ, ಜಯನಗರ ಟಿಟಿಎಂಸಿ, ಯಶವಂತಪುರ ಟಿಟಿಎಂಸಿ, ಶಾಂತಿನಗರ ಟಿಟಿಎಂಸಿ, ಕೆಂಗೇರಿ ಟಿಟಿಎಂಸಿ, ವೈಟ್‌ಫೀಲ್ಡ್ ಟಿಟಿಎಂಸಿ, ಕೃಷ್ಣರಾಜ ಮಾರುಕಟ್ಟೆ ಬಸ್‌ನಿಲ್ದಾಣ, ಹೊಸಕೋಟೆ ಬಸ್‌ನಿಲ್ದಾಣ, ಯಲಹಂಕ ಬಸ್‌ನಿಲ್ದಾಣಗಳಲ್ಲಿ ನವೀಕರಿಸಲಾಗುವುದೆಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.