ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಪರೀಕ್ಷೆ

varthajala
0

ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ  ೨೦೨೨-೨೩ನೇ ಸಾಲಿನ ಸಾಹಿತ್ಯ ಪರೀಕ್ಷೆಗೆ ದಿನಾಂಕ ಪ್ರಕಟಿಸಲಾಗಿದೆಏಕ ಕಾಲದಲ್ಲಿ  ರಾಜ್ಯದ ವಿವಿಧ ೧೮ ಪರೀಕ್ಷಾ ಕೇಂದ್ರಗಳಲ್ಲಿ ಮೂರು ದಿನಗಳ ಕಾಲ ಪರೀಕ್ಷೆ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ..ರಾಮಲಿಂಗ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

  ೨೦೨೨-೨೩ನೇ ಸಾಲಿನ ಕನ್ನಡ ಪ್ರವೇಶಕಾವಜಾಣರತ್ನ ಪರೀಕ್ಷೆಗಳನ್ನು ಇದೇ ಡಿಸೆಂಬರ್ ೩೦೩೧ ಮತ್ತು ೨೦೨೩ನೇ ಜನವರಿ ೦೧ ರಂದು ಒಟ್ಟು ೩ ದಿನಗಳ ಕಾಲ ರಾಜ್ಯದ ೧೮ ಕೇಂದ್ರಗಳಲ್ಲಿ ನಡೆಯಲಿದೆ. ಈಗಾಗಲೇ ಈ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಮತ್ತು ಪರೀಕ್ಷಾ ವೇಳಾಪಟ್ಟಿಯನ್ನು ಅಂಚೆ ಮೂಲಕ ಕಳುಹಿಸಲಾಗಿದೆ. ಪರೀಕ್ಷಾ ಅಭ್ಯರ್ಥಿಗಳಿಗೆ ಡಿಸೆಂಬರ್ ೨೦ರ ನಂತರವೂ ಪ್ರವೇಶ ಪತ್ರ ಹಾಗೂ ವೇಳಾಪಟ್ಟಿ ತಲುಪದಿದ್ದ ಪಕ್ಷದಲ್ಲಿ ಅಂಥಹ ಅಭ್ಯರ್ಥಿಗಳುಗೌರವ ಕಾರ್ಯದರ್ಶಿಗಳುಕನ್ನಡ ಸಾಹಿತ್ಯ ಪರಿಷತ್ತುಚಾಮರಾಜಪೇಟೆಬೆಂಗಳೂರು-೧೮ ಇವರಲ್ಲಿ ವಿಚಾರಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೦-೨೬೬೨೩೫೮೪ / ೨೬೬೧೨೯೯೧ ಹಾಗೂ ಮೊ. ೮೬೬೦೭೭೭೬೪೩ / ೯೭೩೯೬೬೬೮೩೪. ಅಂತರ್ಜಾಲ ತಾಣ www.kasapa.in ಮೂಲಕ ಸಹ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ..ರಾಮಲಿಂಗ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 



ವಿ.ಸೂ – ಕಸಾಪ ನಡೆಸುವ ಸಾಹಿತ್ಯ ಪರೀಕ್ಷೆಯ ವೇಳಾ ಪಟ್ಟಿ ಹಾಗೂ ೧೮ ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ಲಗತ್ತಿಸಿದೆ.


Post a Comment

0Comments

Post a Comment (0)