ಮಂಡ್ಯ : ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಕನ್ನಡಕ್ಕಾಗಿ ಓಡು-ಕನ್ನಡಕ್ಕಾಗಿ ಬಾಳು’ ಘೋಷಣೆಯೊಂದಿಗೆ ರಾಜ್ಯಮಟ್ಟದ ‘ಮಂಡ್ಯ ಮ್ಯಾರಥಾನ್’ 5ಕಿ.ಮೀ. ಓಟಸ್ಪರ್ಧೆಯನ್ನು ಡಿ.11ರಂದು ಬೆಳಿಗ್ಗೆ 6ಗಂಟೆಗೆ ಆಯೋಜಿಸಲಾಗಿದ್ದು ಮ್ಯಾರಥಾನ್ ಲೋಗವನ್ನು ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲ ಕೃಷ್ಣ ಬಿಡುಗಡೆಗೊಳಿಸಿದರು.
ನಗರದ ಪ್ರವಾಸಿಮಂದಿರ ಪಕ್ಕದ ಶ್ರೀ ಕೆ.ವಿ.ಶಂಕರಗೌಡ ರಸ್ತೆಯಿಂದ ತಹಸೀಲ್ದಾರ್ ಕಚೇರಿ, ಜಿಲ್ಲಾ ಕಾರಾಗೃಹ, ಕ್ಯಾತುಂಗೆರೆ ಬಡಾವಣೆ ಮಾರ್ಗವಾಗಿ ಬೇವಿನಹಳ್ಳಿ ಗ್ರಾಮದ ಪ್ರವೇಶದ್ವಾರದವರೆಗೆ (5 ಕಿ.ಮೀ.) ಮಂಡ್ಯ ಮ್ಯಾರಥಾನ್ ಓಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ತಿಳಿಸಿದರು.
ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಮಟ್ಟದ ‘ಮಂಡ್ಯ ಮ್ಯಾರಥಾನ್’ ಓಟ ಸ್ಪರ್ಧೆಯನ್ನು ನಡೆಸಿ ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಆರೋಗ್ಯದ ಅರಿವು ಮೂಡಿಸುವ ಉತ್ತಮ ಕಾರ್ಯವನ್ನು ನಮ್ಮ ಸಂಸ್ಥೆ ನಡೆಸಿಕೊಂಡು ಬರುತ್ತಿದೆ.
ಪೊಲೀಸ್ ಇಲಾಖೆ ಸಿಬ್ಬಂದಿಗಳು, ಕ್ರೀಡಾಪಟುಗಳು, ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ಸಂಘ ಸಂಸ್ಥೆಗಳ ಸ್ವಯಂ ಸೇವಕರು, ಗ್ರಾಮೀಣ ಪ್ರದೇಶದ ಯುವಕರು ಈ ಓಟ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪಾಲ್ಗೊಳ್ಳುವ ಎಲ್ಲಾ ಸ್ಪರ್ಧಿಗಳಿಗೂ ಟೀ-ಶರ್ಟ್ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುವುದು.
ಪುರಷ, ಮಹಿಳೆ ಹಾಗೂ ಹಿರಿಯ ನಾಗರೀಕರ ವಿಭಾಗವನ್ನು ಓಟ ಸ್ಪರ್ಧೆಯಲ್ಲಿ ಮಾಡಲಾಗಿದ್ದು, ಪ್ರಥಮ ವಿಜೇತರಿಗೆ 10ಸಾವಿರ, ದ್ವಿತೀಯ 7,500, ತೃತೀಯ 5,000/- ರೂ. ನಗದು ಬಹುಮಾನ ನೀಡಲಾಗುವುದು. ಆಸಕ್ತರು ತಮ್ಮ ಹೆಸರನ್ನು ಮೊ. 9740011624, 9980605484 ಸಂಖ್ಯೆಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು. ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ಎಡಿಸಿ ಡಾ.ನಾಗರಾಜು, ಅಖಂಡ ಕರ್ನಾಟಕ ರಕ್ಷಣಾ ಸೇವಾ ದಳ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್, ಕೋ.ಪು.ಗುಣಶೇಖರ್, ಬಿ.ಎಸ್.ಅನುಪಮಾ, ಭೀಮೇಶ್ ಮತ್ತಿತರರಿದ್ದರು.