ಎನ್.ಎಸ್.ಯು.ಐ ವತಿಯಿಂದ ಡಿಸೆಂಬರ್ 17 ರಂದು ರಾಜ್ಯದಾದ್ಯಂತ ಕಾಲೇಜುಗಳ ಬಂದ್ ಗೆ ಕರೆ

varthajala
0
ವರದಿ ಮಧು ದೇವನಹಳ್ಳಿ..

ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಹಲವು ಸಮಸ್ಯೆಗಳನ್ನು ವಿರೋಧಿಸಿ ಡಿಸೆಂಬರ್ 17 ರಂದು ರಾಜ್ಯದಾದ್ಯಂತ ಕಾಲೇಜುಗಳನ್ನು ಬಂದ್ ಮಾಡಿಸಿ ಇಂದಿನ ಶಿಕ್ಷಣ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಲು ಇಂದು ಪಟ್ಟಣದ ಖಾದಿಬೋರ್ಡ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.


ಮಾಜಿ ಶಾಸಕ ಮುನಿನರಸಿಂಹಯ್ಯ ಮಾತನಾಡಿ ದಿನನಿತ್ಯ ಜೀವನದಲ್ಲಿ ಕಷ್ಟ ಪಡುವ ವಿಧ್ಯಾರ್ಥಿಗಳಿಗೆ ಸೇವಾ ದೃಷ್ಟಿಯಿಂದ  ಸರ್ಕಾರ ಸೂಕ್ತ ಸಾರಿಗೆಯ ವ್ಯವಸ್ಥೆ ಕಲ್ಪಿಸಬೇಕು, ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಮತ್ತು ಮುಂದಿನ ಉನ್ನತ  ವಿದ್ಯಾಭ್ಯಾಸಕ್ಕಾಗಿ ಹಾಗೂ ಉದ್ಯೋಗಾವಕಾಶಗಳಿಗಾಗಿ ವಿದ್ಯಾರ್ಥಿಗಳ ಫಲಿತಾಂಶ ಶೀಘ್ರವಾಗಿ ನೀಡಬೇಕು ಎಂದರು.
ವಿಧ್ಯಾರ್ಥಿಗಳ ಫಲಿತಾಂಶ ವಿಳಂಬ, ಬಸ್ ಪಾಸ್ ವಿತರಣೆ ಸಮಸ್ಯೆ, ವಿದ್ಯಾರ್ಥಿ ವೇತನ ವಿಳಂಬ ಮುಂತಾದ ಸಮಸ್ಯೆಗಳಿಗೆ ಸರ್ಕಾರ ಸರಿಯಾಗಿ ಸ್ಪಂದಿಸದ ಕಾರಣ ಇದೇ ತಿಂಗಳ 17 ರಂದು ಕಾಲೇಜುಗಳನ್ನು ಬಂದ್ ಮಾಡಿಸುವುದಾಗಿ ತಿಳಿಸಿದರು.

 ಇಂದಿನ ಸರ್ಕಾರ ಸುಳ್ಳು ಹೇಳಿಕೆಗಳನ್ನು ನೀಡುತ್ತಾ ಅಭಿವೃದ್ಧಿ ಕಡೆ ಗಮನ ನೀಡದೆ ಎಲ್ಲಾ ಕಡೆ ರಸ್ತೆ ಗಳು ಹಾಳಾಗಿದ್ದು‌, ಯಾವುದೇ  ಯೋಜನೆಗಳಿಗೆ ಕಾರ್ಯ ರೂಪ ನೀಡುತ್ತಿಲ್ಲ,ಪದೇ ಪದೇ ಗೊಬ್ಬರದ ಬೆಲೆ ಏರಿಕೆ  ಮಾಡುತ್ತಿದ್ದು ರೈತರಿಗೂ ಸಹ ತೊಂದರೆಯಾಗುತ್ತಿದೆ ನಮ್ಮ ಎಸ್ಸಿ -ಎಸ್ಟಿ ವಿದ್ಯಾರ್ಥಿಗಳ ಅನುದಾನಗಳನ್ನು ಸಹ  ಕಡಿಮೆ ಮಾಡಲಾಗಿದೆ ಹಾಗೂ ನಮ್ಮ ಪಕ್ಷ 70 ವರ್ಷದಲ್ಲಿ ಅಭಿವೃದ್ಧಿ ಮಾಡದೇ ಇರುವುದನ್ನು ಇಂದಿನ ಸರ್ಕಾರ ಅಭಿವೃದ್ಧಿಪಡಿಸುತ್ತದೆ ಅಂತ ಸುದ್ದಿಗಳು ಅಬ್ಬಿಸಿದ್ದಾರೆ ನಿಜವಾದ ನೈತಿಕತೆಯಿಂದ ಅಭಿವೃದ್ಧಿ ಮಾಡಲಿ ಎಂದರು,ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
 
ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ಮುಖೇಶ್ ಬಾಬು ಮಾತನಾಡಿ, ವಿದ್ಯಾರ್ಥಿಗಳು ಬರೆದ ಪರೀಕ್ಷೆಯ ಫಲಿತಾಂಶಗಳ ವಿಳಂಭ ಧೋರಣೆ, ವಿದ್ಯಾರ್ಥಿ ವೇತನ, ಸಾರಿಗೆ ಬಸ್, ಸರ್ಕಾರಿ ಕಾಲೇಜು ಶುಲ್ಕ ಏಕಾಏಕಿ ಹೆಚ್ಚಳ ಮಾಡಿರುವುದು ಖಂಡಿಸಿ ಹಾಗೂ ಫಲಿತಾಂಶವನ್ನು ಸರಿಯಾದ ಸಮಯಕ್ಕೆ ನೀಡಬೇಕು ವಿದ್ಯಾರ್ಥಿಗಳಿಗೆ ಎಲ್ಲಾ ವರ್ಗದವರಿಗೂ ಉಚಿತವಾಗಿ ಬಸ್ ಪಾಸ್ ನೀಡಬೇಕು ಸರ್ಕಾರಿ ಕಾಲೇಜಿನಲ್ಲಿ ಶುಲ್ಕ ಕಡಿಮೆ ಮಾಡಬೇಕು ಹಾಗು ವಿದ್ಯಾರ್ಥಿ ವೇತನ ತಕ್ಷಣವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ  ಇದೇ ತಿಂಗಳ 17 ರಂದು ಕಾಲೇಜುಗಳನ್ನು ಬಂದ್ ಮಾಡಿಸುವುದಾಗಿ ತಿಳಿಸಿದರು.

ಬಂದ್ ಕುರಿತು ದೇವನಹಳ್ಳಿ  ಪಟ್ಟಣದ  ವಿದ್ಯಾರ್ಥಿಗಳಿಗೆ ಕರಪತ್ರ ಹಂಚಿ  ಬಂದ್ ಗೆ ಬೆಂಬಲ ಸೂಚಿಸುವಂತೆ ತಿಳಿಸಲಾಯಿತು.

 ಈ ವೇಳೆ  ಮಾಜಿ ಶಾಸಕ ಮುನಿನರಸಿಂಹಯ್ಯ, ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಅಕ್ಕಯ್ಯಮ್ಮ, ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಮುರಳಿ, ಜಿಲ್ಲಾ ಉಪಾಧ್ಯಕ್ಷ ಹರ್ಷ, ವಿಜಯ್ ಕುಮಾರ್, ತಾಲ್ಲೂಕು ಉಪಾಧ್ಯಕ್ಷ ಹರೀಶ್, ಜಿಲ್ಲಾ ಐ.ಟಿ ವಿಂಗ್ ಅಧ್ಯಕ್ಷ ಸಂದೀಪ್ ಸೇರಿದಂತೆ  ಎನ್.ಎಸ್.ಯು.ಐ ನ ಸದಸ್ಯರು ಇದ್ದರು.

Post a Comment

0Comments

Post a Comment (0)