ಪತ್ರಕರ್ತರ ಬೇಡಿಕೆಗಳ ಈಡೇರಿಕೆಗಾಗಿ ಸುವರ್ಣಸೌಧದ ಮುಂಭಾಗ ಸತ್ಯಾಗ್ರಹ

varthajala
0

 ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ [ರಿ], ಬೆಂಗಳೂರು

ಬೆಳಗಾವಿ: ನಾಡಿನ ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸುವರ್ಣಸೌಧದ ಮುಂಭಾಗ, ಧರಣಿ ಸತ್ಯಾಗ್ರಹ

ಪ್ರಮುಖ ಬೇಡಿಕೆಗಳು : 1. ರಾಜ್ಯದಲ್ಲಿ 16 ಸಾವಿರ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದರು ಸರಕಾರದ ಇಲಾಖೆಯಿಂದ ಶೇಕಡ 10ರಷ್ಟು ಅಂದರೆ ಹದಿನಾರು ಸಾವಿರ ಪಾತ್ರ ಕರ್ತರಲ್ಲಿ ಕೇವಲ 1,600 ಪತ್ರಕರ್ತರಿಗೆ ಮಾತ್ರ ಪತ್ರಕರ್ತರ ಮಾನ್ಯತಾ ಪತ್ರ(ಅಕ್ರಿಡೇಷನ್ ಕಾಡ್೯) ನೀಡುತ್ತಿರುವುದು ಎಷ್ಟು ಸರಿ. ಒಂದು ಜಿಲ್ಲೆಗೆ ಒಂದು ಪತ್ರಿಕಾ ಸಂಸ್ಥೆ ವತಿಯಿಂದ ಒಬ್ಬರಿಗೆ ಅಂದರೆ ಒಬ್ಬ ವರದಿಗಾರನಿಗೆ, ಅದೇ ರೀತಿಯಾಗಿ ದೃಶ್ಯ ಮಾಧ್ಯಮ ಸಂಸ್ಥೆಗೆ ಒಂದು ಜಿಲ್ಲೆಯಿಂದ ಒಬ್ಬ ವರದಿಗಾರ ಹಾಗೂ ಕ್ಯಾಮೆರಾ ಮ್ಯಾನ್ ಗೆ ನೀಡುತ್ತಾ ಸಾಗಿದ್ದು, ಸರಿಯಾಗಿ ಕ್ರಮವಲ್ಲ. ಅದೇ ಪತ್ರಿಕೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುವ ವರದಿಗಾರನಿಗೆ ಅವಮಾನ ತಾರತಮ್ಯ ಹಾಗೂ ಅಸ್ಪೃಶ್ಯತಾ ನೀತಿ ಅನುಸರಿಸದಂತಾಗುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರ ಈ ತಾರತಮ್ಯ ನೀತಿಯನ್ನು ಸರಿಪಡಿಸಿ ಹೆಚ್ಚಿನ ಅನುದಾನವನ್ನು ವಾರ್ತಾ ಇಲಾಖೆಗೆ ನೀಡಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೈಜ ಕಾರ್ಯನಿರತ 16,000 ಪತ್ರಕರ್ತರಿಗೆ ಮಾನತಾ ಪತ್ರ ನೀಡಬೇಕು.


2. ಬಸ್ ಹಾಗೂ ಜಾಹೀರಾತಿಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರತಿ ವರ್ಷ ಆಗಸ್ಟ್ ಸಪ್ಟೆಂಬರ್ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಮಾಧ್ಯಮ ಪಟ್ಟಿಯಲ್ಲಿ ಬರುವಂತಹ ಹಾಗೂ ಇಲ್ಲದಿರುವಂತ ಆರ್.ಎನ್.ಐ ಹೊಂದಿರುವ ಪ್ರತಿಯೊಂದು ಪತ್ರಿಕೆಗೆ ತಿಂಗಳಿಗೆ 10,000 ಗಳಂತೆ ಜಾಹೀರಾತು ನೀಡುತ್ತಾ ಬಂದಿದೆ ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಇದರೊಂದಿಗೆ ಲಗತ್ತಿಸಲಾಗಿದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅನುಸರಿಸುತ್ತಿರುವ ನೀತಿಯಂತೆ ರಾಜ್ಯದ ಇನ್ನಿತರ ಮಹಾನಗರ ಪಾಲಿಕೆಗಳಲ್ಲಿ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಹೀರಾತುಗಳನ್ನು ಆರ್.ಎನ್.ಐ ಹೊಂದಿರುವ ಪ್ರತಿಯೊಂದು ಪತ್ರಿಕೆಗಳಿಗೆ ನೀಡಬೇಕು. ಜೊತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿ ಬಿ ಎಂ ಪಿ) ವ್ಯಾಪ್ತಿಯಾದ್ಯಂತ ಸಂಚರಿಸುವ ಬಿ.ಎಂ.ಟಿ.ಸಿ ಬಸ್ಗಳಲ್ಲಿ ಆರ್ ಎನ್ ಐ ಹೊಂದಿರುವ ಪತ್ರಕರ್ತರು 600 ರೂ. ಪಾವತಿಸಿದರೆ ವರ್ಷಪೂರ್ತಿ ಕರ್ತವ್ಯದೃಷ್ಟಿಯಿಂದ ಓಡಾಡುವ ಸೌಲಭ್ಯ ಒದಗಿಸುವ ರೀತಿಯಂತೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಆರ್ ಎನ್ ಐ ಹೊಂದಿ ಕಾರ್ಯನಿರ್ವಹಿಸುವ ದಿನ, ವಾರ, ಪಾಕ್ಷಿಕ, ಮಾಸಪತ್ರಿಕೆಗಳ ವರದಿಗಾರರಿಗೆ ಆಯಾ ಜಿಲ್ಲೆಯ ಆದಂತ ಓಡಾಡಲು ಉಚಿತವಾಗಿ ಸರ್ಕಾರ ಬಸ್ ಪಾಸ್ ಒದಗಿಸಿ ಕೊಡಬೇಕು.

3. ನಿವೃತ್ತಿಯಾದ ಪತ್ರಕರ್ತರಿಗೆ ಸರಕಾರ 10,000ಗಳ ಮಾಶಾಸನ ಪ್ರತಿ ತಿಂಗಳು ಪ್ರಸ್ತುತ ನೀಡುತ್ತದೆಯಾದರೂ ವಾರ್ತಾ ಇಲಾಖೆ ರೂಪಿಸಿರುವ ನಿಯಮ ಹಾಗೂ ಮಾನದಂಡಗಳು ಕಠಿಣವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ಸಾವಿರಾರು ಪತ್ರಕರ್ತರು ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದರು ಪ್ರಸ್ತುತ ಕೇವಲ 167 ಜನ ಪತ್ರಕರ್ತರು ಮಾತ್ರ ರಾಜ್ಯದಲ್ಲಿ ಮಾಶಾಸನ ಸೌಲಭ್ಯ ಪಡೆಯುತ್ತಿದ್ದಾರೆ. ನಿಯಮಗಳು ಕಠಿಣವಾಗಿರುವ ಹಿನ್ನೆಲೆಯಲ್ಲಿ ಬಹಳಷ್ಟು ಪತ್ರಕರ್ತರು ಈ ಸೌಲಭ್ಯದಿಂದ ವಂಚಿತರಾಗಿರುವ ಹಿನ್ನೆಲೆಯಲ್ಲಿ ಈ ಕೂಡಲೇ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ತಂದು ಸಡಿಲಿಕೆ ಮಾಡಬೇಕು ಪ್ರಸ್ತುತ ನೀಡುತ್ತಿರುವ 10,000 ರೂಪಾಯಿ ಮಾಶಾಸನ ಜೀವನ ನಿರ್ವಹಣೆ ಮಾಡಲು ಕಷ್ಟ ಸಾಧ್ಯತೆ ಹಿನ್ನೆಲೆಯಲ್ಲಿ 20 ಸಾವಿರ ರೂಪಾಯಿಗಳಿಗೆ ಏರಿಕೆ ಮಾಡಬೇಕು. 

4. ಸರ್ಕಾರ ಜಾಹೀರಾತು ನೀಡುವಲ್ಲಿ ತಾರತಮ್ಯ ಅನುಸರಿಸುತ್ತಿದ್ದು ರಾಜ್ಯಮಟ್ಟದ ಪತ್ರಿಕೆಗಳ ಜೊತೆಗೆ ಪ್ರಾದೇಶಿಕ ಹಾಗೂ ಜಿಲ್ಲಾಮಟ್ಟದ ಪತ್ರಿಕೆಗಳಿಗೆ ಕಡ್ಡಾಯವಾಗಿ ಜಾಹೀರಾತು ನೀಡಬೇಕು.

5. ವಾರ್ತಾ ಇಲಾಖೆಯಲ್ಲಿ ಹವ್ಯಾಸಿ ಪತ್ರಕರ್ತರಿಗಾಗಿ ಪತ್ರಕರ್ತರ ಮಾನ್ಯತಾ ಪತ್ರ ನೀಡುತ್ತಿದ್ದು, ಈ ಸೌಲಭ್ಯಕ್ಕೆ 60 ವರ್ಷ ಒಳಗಡೆ ಇರುವ ಪತ್ರಕರ್ತರಿಗೆ ಮಾತ್ರ ಎಂದು ನಿಯಮವಿದ್ದು, ನಿಯಮಗಳನ್ನು ಗಾಳಿಗೆ ತೂರಿ 72 ವರ್ಷ ವಯಸ್ಸಾಗಿರುವ ಕನ್ನಡಪ್ರಭ ದಿನಪತ್ರಿಕೆಯ ಸಂಪಾದಕರು ಹಾಗೂ ಐಎಫ್ಡಲುಜೆ ರಾಷ್ಟ್ರೀಯ ಅಧ್ಯಕ್ಷರಾಗಿರುವ ಶ್ರೀಯುತ ಬಿ.ವಿ.ಮಲ್ಲಿಕಾರ್ಜುನಯ್ಯ ಹಾಗೂ 60 ವರ್ಷ ದಾಟಿ ನಿವೃತ್ತಿ ಆಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾಗಿರುವ ಶ್ರೀಯುತ ಮಹೇಶ್ ಜೋಶಿಯವರಿಗೆ ನಿಯಮಗಳನ್ನು ಮೀರಿ ಮಾನ್ಯತಾ ಪತ್ರವನ್ನು ವಾರ್ತಾ ಇಲಾಖೆಯ ಅಕ್ರಿಡೆಷನ್ ಕಮಿಟಿ ನೀಡುವುದು ಕಾನೂನುಬಾಹಿರವಾಗಿರುವ ಹಿನ್ನೆಲೆಯಲ್ಲಿ ಇವರುಗಳ ಅಕ್ರಿಡೆಶನ್ ಕಾಡುಗಳನ್ನು ಈ ಕೂಡಲೇ ರದ್ದುಪಡಿಸಬೇಕು ನೀಡಿರುವ 167 ಹವ್ಯಾಸ ಪತ್ರಕರ್ತರ ಪಟ್ಟಿಯಲ್ಲಿ ಐವತ್ತಕ್ಕೂ ಹೆಚ್ಚು ಪತ್ರಕರ್ತರು ನಿಯಮಗಳನ್ನು ಮೀರಿ ಪತ್ರಕರ್ತರ ಮಾನ್ಯತಾ ಪತ್ರ ಪಡೆದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಅವನ್ನೆಲ್ಲಾ ಕೂಡಲೇ ರದ್ದುಗೊಳಿಸಿ ಸರಕಾರದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ತಪ್ಪಿಸಬೇಕು ಇದಕ್ಕೆ ಸಂಬಂಧಿಸಿ ದಂತೆ ದಾಖಲೆಗಳನ್ನು ಈಗಾಗಲೇ ನೀಡಲಾಗಿದೆ ಈ ಕುರಿತು ವಾರ್ತಾ ಇಲಾಖೆಗೆ ಪುರಾವೆಗಳನ್ನು ಒದಗಿಸಿ ಮನವಿ ಮಾಡಿದ್ದರು ಇಂದಿನವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲದ ಕಾರಣ ಈ ಕುರಿತು ಸರ್ಕಾರ ಕ್ರಮ ವಹಿಸಬೇಕು.

6. ದಿನಪತ್ರಿಕೆಗಳಿಗೆ ಹಾಗೂ ವಾರ ಪಾಕ್ಷಿಕ ಮಾಸಪತ್ರಿಕೆಗಳಿಗೆ ಕೇಂದ್ರ ಸರ್ಕಾರದ ಆರ್ ಎನ್ ಐ ವತಿಯಿಂದ ಅಧಿಕೃತ ಪರವಾನಿಗೆ ಪತ್ರ ದೊರೆತಿದ್ದರು ವಾರ್ತಾ ಇಲಾಖೆಯು ಸರ್ಕಾರಕ್ಕೆ ದಿಕ್ಕು ತಪ್ಪಿಸಿ ದಿನ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದಂತವರಿಗೆ ಮಾತ್ರ ಮಾಶಾಸನ ಸೌಲಭ್ಯ ನೀಡುತ್ತಿದ್ದು ವಾರ ಪತ್ರಿಕ ಮಾಸ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತರಿಗೂ ಮಾಶಾಸನ ಒದಗಿಸಬೇಕು.

7. ಸರ್ಕಾರಿ ನೌಕರರಿಗೆ ಸಾರ್ವಜನಿಕರಿಂದ ಕರ್ತವ್ಯಕ್ಕೆ ಅಡ್ಡಿಯಾದಂತ ಸಂದರ್ಭಗಳಲ್ಲಿ ಐಪಿಸಿ 353 ಅಡಿಯಲ್ಲಿ ಪ್ರಕರಣ ದಾಖಲಾಗಿರುವ ರೀತಿಯಂತೆ ಅದೇ ರೀತಿ ಕರ್ತವ್ಯದಲ್ಲಿರುವ ಕಾರ್ಯನಿರತ ಪತ್ರಕರ್ತರಿಗೆ ಬೇರೆಯವರಿಂದ ಹಲ್ಲಿ ಹಾಗೂ ಅವ್ಯಾಚ ಶಬ್ದಗಳಿಂದ ನಿಂದನೆ ಆದಂತ ಸಂದರ್ಭದಲ್ಲಿ ಅದೇ ಮಾದರಿಯ ಪತ್ರಕರ್ತರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕು.

8. ಕಾರ್ಯನಿರತ ಪತ್ರಕರ್ತರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ಸರ್ಕಾರ ಆರೋಗ್ಯ ವಿಮೆ ಜಾರಿಗೊಳಿಸಬೇಕು.

9. ಸಮಸ್ತ ಪತ್ರಕರ್ತರ ಸಂಕಷ್ಟಗಳ ಹಾಗೂ ಪರಿಹಾರಕ್ಕಾಗಿ ಪತ್ರಕರ್ತರ ಪ್ರಾಧೀಕಾರವನ್ನು ಸರ್ಕಾರ ರಚಿಸಬೇಕು.

10. ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಪತ್ರಕರ್ತರುಗಳಿಗೆ ನಿವೇಶನ ಸಕಾ೯ರ ನೀಡಬೇಕು.

11. ಪ್ರತಿ ತಾಲ್ಲೂಕಿನಲ್ಲೂ ಪತ್ರಕರ್ತರ ಚಟುವಟಿಕೆಗಳಿಗಾಗಿ ಪತ್ರಿಕಾ ಭಾವನೆಗಳು ನಿರ್ಮಾಣವಾಗಬೇಕು.

12. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಟೋಲ್ ಗಳಲ್ಲಿ ಕಾರ್ಯನಿರತ ಪತ್ರಕರ್ತರಿಗೆ ಉಚಿತವಾಗಿ ತೋಳ್ ಪ್ರವೇಶಕ್ಕೆ ಸರಕಾರ ಆದೇಶ ರೂಪಿಸಿ ಟೋಲ್ ಗೆ ಸಂಬಂಧಿಸಿದ ಪ್ರಾಧಿಕಾರ ಹಾಗೂ ಏಜೆನ್ಸಿಗಳಿಗೆ ಈ ಕುರಿತು ಆದೇಶ ಜಾರಿಗೊಳಿಸಬೇಕು.

13. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಆರೋಗ್ಯ ವಿಮಾ ಕಾರ್ಡ್ ನೀಡುವ ಸಂಬಂಧ ದಿನಾಂಕ 11 3 2022ರಂದು ವಾರ್ತ ಇಲಾಖೆಯು ಜಂಟಿ ನಿರ್ದೇಶಕರಾದ ಮುರಳಿಧರ್ ಇವರಿಗೆ ನಾವು ಬರೆದ ಪತ್ರದ ಹಿನ್ನೆಲೆಯಲ್ಲಿ ರಾಜ್ಯದ ಮಧ್ಯಮ ಪಟ್ಟಿಯಲ್ಲಿರುವ 800 ಪತ್ರಿಕೆಗಳ ಮಾಲೀಕರಿಗೆ 3 ನೋಟೀಸ್ ಗಳನ್ನು ವಾರ್ತಾ ಇಲಾಖೆ ಜಾರಿ ಮಾಡಿದ್ದರೂ ಸಹ ಹಿಂದಿನವರೆಗೆ ಅವರುಗಳು ತಮ್ಮಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಕುರಿತು ಮಾಹಿತಿ ನೀರಿಲ್ಲದಿರುವುದರ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದೇವೆ ಆದ್ದರಿಂದ ಚಳಿಗಾಲದ ಅಧಿವೇಶನದಲ್ಲಿ ಮಾನ್ಯ ಸರ್ಕಾರದ ಶಾಸಕರುಗಳು ಸಚಿವರುಗಳು ವಿರೋಧ ಪಕ್ಷದ ಮುಖಂಡರುಗಳು ಆದ ತಾವುಗಳು ಅಧಿವೇಶನ ಸದನದಲ್ಲಿ ಈ 13 ವಿಷಯಗಳನ್ನು ಪ್ರಸ್ತಾಪಿಸಿ ಸಮಸ್ತ ರಾಜ್ಯದ 16 ಸಾವಿರ ಪತ್ರಕರ್ತರಿಗೆ ನ್ಯಾಯ ಒದಗಿಸಿ ಪತ್ರಕರ್ತರಿಗೂ ಹಾಗೂ ಕುಟುಂಬದವರಿಗೂ ಮೊಗದಲ್ಲಿ ಮಂದಹಾಸ ಮೂಡಿಸುತ್ತೀರಿ ಎಂಬ ಆಚಲವಿಸ್ವಾಸದಲ್ಲಿ....

Post a Comment

0Comments

Post a Comment (0)