St. joseph Maha vidyalaya ಆಧುನಿಕ ಜ್ಞಾನ - ಭಾರತೀಯ ಸಂಸ್ಕೃತಿಯ ಶಿಕ್ಷಣದಿಂದ ಸ್ವಾವಲಂಬಿ ಭಾರತ ನಿರ್ಮಾಣ; ರಾಜ್ಯಪಾಲ ಗೆಹ್ಲೋಟ್

varthajala
0

ಬೆಂಗಳೂರು, ನ, 19; ಆಧುನಿಕ ಜ್ಞಾನ, ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಶಿಕ್ಷಣದಿಂದ ನವ ಹಾಗೂ ಸ್ವಾವಲಂಬಿ ಭಾರತ ನಿರ್ಮಾಣ ಸಾಧ್ಯ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

ಸಂತ ಜೋಸೆಫರ ವಾಣಿಜ್ಯ ಮಹಾ ವಿದ್ಯಾಲಯ[ಸ್ವಾಯತ್ತ]ದ ಸುವರ್ಣ ಮಹೋತ್ಸವವನ್ನು  ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಜ್ಞಾನ, ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಒಳಗೊಂಡ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ದೇಶದ ಅಖಂಡತೆ, ಸಾರ್ವಭೌಮತೆಯನ್ನು ಎತ್ತಿಹಿಡಿಯುವ ಶಿಕ್ಷಣ ಅಗತ್ಯವಾಗಿದೆ.


ನವ ಭಾರತ, ಶ್ರೇಷ್ಠ ಭಾರತ, ಸ್ವಾವಲಂಬಿ ಭಾರತ ನಿರ್ಮಿಸಲು ಯುವ ಸಮೂಹ ಸಜ್ಜಾಗಬೇಕು. ನಾವೀಗ ಅಮೃತ ಕಾಲದಲ್ಲಿದ್ದು, ಈ ಕರ್ತವ್ಯ ಕಾಲದಲ್ಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಸಲಹೆಗಳನ್ನು ನಾವು ಪಾಲಿಸಬೇಕು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಈಗಿನ ಮತ್ತು ಭವಿಷ್ಯದ ಪೀಳಿಗೆಗೆ ಉತ್ತಮ ಮತ್ತು ಉಜ್ವಲ ಭವಿಷ್ಯವನ್ನು ರೂಪಿಸಲಿದೆ ಎಂದರು. 
ಶಿಕ್ಷಣ ಮತ್ತು ನವೋದ್ಯಮ ವಲಯದಲ್ಲಿ ಕರ್ನಾಟಕ ಮಹತ್ವಪೂರ್ಣ ಸಾಧನೆ ಮಾಡಿದೆ. ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹೋನ್ನತ ಮಾಡಿದೆ. ಈ ಅಡಿಪಾಯದ ಮೇಲೆ ಭವ್ಯ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆ   139 ವರ್ಷಗಳ ಇತಿಹಾಸ ಹೊಂದಿದೆ.   ವಾಣಿಜ್ಯ ಮತ್ತು ವ್ಯಾಪಾರ ವಲಯದಲ್ಲಿ ತನ್ನದೇ ಆದ ಮಹತ್ವದ ಭೂಮಿಕೆಯನ್ನು ಸ್ಥಾಪಿಸಿದೆ. ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಅಧ್ಯಯನ ಮಾಡಿರುವವರು ಭಾರತೀಯ ನ್ಯಾಯಾಂಗ ವ್ಯವಸ್ಥೆ, ನಾಗರಿಕ ಸೇವೆ, ಕ್ರೀಡಾಪಟುಗಳು ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಸಂತ ಜೋಸೆಫರ ವಾಣಿಜ್ಯ ಮಹಾ ವಿದ್ಯಾಲಯ 2000 ದಿಂದಲೇ ನ್ಯಾಕ್ ಮಾನ್ಯತೆ ಪಡೆದಿದ್ದು, ಫೈವ್ ಸ್ಟಾರ್ ಪಟ್ಟಿಯಲ್ಲಿದೆ. ಉತ್ಕೃಷ್ಟ ಶಿಕ್ಷಣ, ಸಾಮಾಜಿಕ ಕಳಕಳಿ ಮತ್ತು ವ್ಯಕ್ತಿತ್ವ ರೂಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಆರಂಭವಾದ ಈ ಶಿಕ್ಷಣ ಸಂಸ್ಥೆ ಐದು ದಶಕಗಳ ತನ್ನ ಯಾನವನ್ನು ಯಶಸ್ವಿಯಾಗಿ ಪೂರೈಸಿದೆ. ಶಿಕ್ಷಣ, ಕ್ರೀಡೆ, ಮನೋರಂಜೆಯ ಸಂಗಮವಾಗಿರುವ ಇಲ್ಲಿ ಹಲವಾರು ವಿದ್ಯಾರ್ಥಿಗಳು ರಾಜ್ಯ ಹಾಗೂ ದೇಶಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರಿನ ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೋ, ಕೈಗಾರಿಕೋದ್ಯಮಿ ಎಫ್.ಆರ್. ಸಿಂಘ್ವಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮೋಹನ್ ದಾಸ್ ಪೈ ಮತ್ತಿತರರು ಉಪಸ್ಥಿತರಿದ್ದರು.

Post a Comment

0Comments

Post a Comment (0)