ಬಿ.ಎಂ.ಎಸ್. ಕಾಲೇಜ್ ಆಫ್ ಲಾ ಕಾನೂನು ಶಿಕ್ಷಣವನ್ನು ನೀಡುವಲ್ಲಿ ಪ್ರಮುಖ ಸಂಸ್ಥೆಯಾಗಿದೆ ಮತ್ತು 58 ವರ್ಷಗಳ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಸಂಸ್ಥೆಯು 11 ನವೆಂಬರ್, 2022 ರಂದು ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಮೊದಲನೆಯ ವರ್ಷದ ವಿದ್ಯಾರ್ಥಿಗಳಿಗೆ ' ಸ್ವಾಗತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಘನತೆವೆತ್ತ ನ್ಯಾಯಮೂರ್ತಿಗಳಾದ ಶ್ರೀ ಎಂ. ನಾಗಪ್ರಸನ್ನ, ನ್ಯಾಯಾಧೀಶರು, ಉಚ್ಛನ್ಯಾಯಾಲಯ, ಕರ್ನಾಟಕ ಸರಕಾರ ಹಾಗೂ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇದೆ ಸಂದರ್ಭದಲ್ಲಿ ಡಾ. ಬಿ. ವಿ. ಆಚಾರ್ಯ, ಹಿರಿಯ ವಕೀಲರು, ಮಾಜಿ ಅಡ್ವೊಕೇಟ್ ಜನರಲ್, ಕರ್ನಾಟಕ ಸರಕಾರ, ಇವರನ್ನು ತಮ್ಮ ೬೫ ವರ್ಷಗಳ ವಕೀಲಿ ವೃತ್ತಿಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅವಿರಾಮ್ ಶರ್ಮ, ಆಜೀವ ಟ್ರಸ್ಟಿಗಳಾದ ಡಾ. ಪಿ. ದಯಾನಂದ ಪೈ, ಶ್ರೀರವಿ ವೆಂಕಟೇಸಂ, ಟ್ರಸ್ಟಿಗಳು ಬಿ.ಎಂ.ಎಸ್.ಇ. ಟಿ., ಉಪಸ್ಥಿತರಿದ್ದರು. ಡಾ. ಅನಿತಾ ಎಫ್. ಎನ್. ಡಿಸೋಜಾ, ಪ್ರಾಂಶುಪಾಲರು ಉಪಸ್ಥಿತ ಗಣ್ಯರನ್ನು ಉದ್ದೇಶಿಸಿ ಸ್ವಾಗತ ಭಾಷಣವನ್ನು ಮಾಡಿದರು. ಶ್ರೀಮತಿ ರಮ್ಯಾ ಕೆ. ಸಹಾಯಕ ಪ್ರಾಧ್ಯಾಪಕಿ ವಂದನಾರ್ಪಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.