ಕಾಚರಕನಹಳ್ಳಿಯಲ್ಲಿ ಯಶಸ್ವಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆ

varthajala
0 minute read
0

ಬೆಂಗಳೂರು : ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ  ಕಾಚರಕನಹಳ್ಳಿಯಲ್ಲಿರುವ ಶ್ರೀ ಕೋದಂಡರಾಮ ಸಮುದಾಯ ಭವನದಲ್ಲಿ ಬೆಂಗಳೂರು ಕೇಂದ್ರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮಹಿಳಾ ಕಾರ್ಯಕಾರಿಣಿ ಸಭೆಯನ್ನು  ಆಯೋಜಿಸಲಾಗಿತ್ತು. ಕಾರ್ಯಕಾರಿಣಿಯ ಉದ್ಘಾಟನೆಯನ್ನು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದರವರು ಗೋ ಪೂಜೆಯನ್ನು ನೆರವೇರಿಸಿ, ಜ್ಯೋತಿಯನ್ನು ಬೆಳಗಿಸಿ ಸಭೆಗೆ ಚಾಲನೆ ನೀಡಿದ ಸಂದರ್ಭದಲ್ಲಿ    ಜಿಲ್ಲಾಧ್ಯಕ್ಷರಾದ ರೇಖಾ ಕೆ. ಗೋವಿಂದ್, ಬೆಂಗಳೂರು ಕೇಂದ್ರ ಜಿಲ್ಲಾ ಉಪಾಧ್ಯಕ್ಷರು ಮಮತಾ ಉದಯ್, ಸರ್ವಜ್ಞ ನಗರ ಮಂಡಲ ಅಧ್ಯಕ್ಷ  ಮುನಿರಾಜ್ ಕಾರ್ಣಿಕ್, ಕಾರ್ಯಕಾರಿಣಿ ಸದಸ್ಯ ಎಂ.ಎನ್.ರೆಡ್ಡಿ, ಮಾಜಿ ಬಿಬಿಎಂಪಿ ಸದಸ್ಯ ಕೋದಂಡರೆಡ್ಡಿ ಹಾಗೂ ಜಿಲ್ಲಾ ಮತ್ತು ಮಂಡಲದ ಎಲ್ಲಾ ಪದಾಧಿಕಾರಿಗಳು ಈ ವೇಳೆ  ಉಪಸ್ಥಿತರಿದ್ದರು.





Post a Comment

0Comments

Post a Comment (0)