ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಪೌರ ಕಾರ್ಮಿಕರಿಗೆ ಸಿಹಿ ತಿನಿಸುಗಳನ್ನು ಹಂಚುವ ಕಾರ್ಯಕ್ರಮ

varthajala
0 minute read
0

ಬಿ ಪ್ಯಾಕ್ ಸಂಸ್ಥೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಪೌರ ಕಾರ್ಮಿಕರಿಗೆ ಸಿಹಿ ತಿನಿಸುಗಳನ್ನು ಹಂಚುವ ಕಾರ್ಯಕ್ರಮಕ್ಕೆ ಬಿಬಿಎಂಪಿ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್ ಅವರು ಕೆ ಆರ್ ಮಾರುಕಟ್ಟೆಯಲ್ಲಿಂದು ಚಾಲನೆ ನೀಡಿದರು.

ಕಾರ್ಯಕ್ರಮಕ್ಕೂ‌ ಮುನ್ನ ಒಂದು ಕಿಲೋಮೀಟರ್ ಉದ್ದದ ಕನ್ನಡ ಧ್ವಜದ ಮೆರವಣಿಗೆ ನಡೆಸಲಾಯಿತು. ಮತ್ತು ‌500 ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಸಿಹಿತಿನಿಸುಗಳನ್ನು ಹಂಚಲಾಯಿತು. 

ಬಿಬಿಎಂಪಿ ಮುಖ್ಯ ಆಯುಕ್ತರ ಸಂಪರ್ಕಾಧಿಕಾರಿ ಶ್ರೀ ಶಂಕರ್ ಎಸ್ ಎನ್, ಬಿ ಪ್ಯಾಕ್ ಸಂಸ್ಥೆಯ ರಾಘವೇಂದ್ರ ಹೆಚ್ ಎಸ್ ಸೇರಿದಂತೆ ಕನ್ನಡ ಸಂಘಟನೆಗಳ ಮುಖ್ಯಸ್ಥರು, ಬಿಬಿಎಂಪಿ ಅಧಿಕಾರಿಗಳು ಭಾಗವಹಿಸಿದ್ದರು.

Post a Comment

0Comments

Post a Comment (0)
Today | 2, April 2025