ಬೆಂಗಳೂರು, ನವೆಂಬರ್ 11 : ಮಕ್ಕಳಲ್ಲಿ ತಾರ್ಕಿಕ ಚಿಂತನೆ ಹೆಚ್ಚಿಸುವುದು ಶಿಕ್ಷಕರ ಕರ್ತವ್ಯ. ಶಿಕ್ಷಕರು ಮಕ್ಕಳಿಗೆ ಸಂಸ್ಕಾರ, ಮೌಲ್ಯ, ವ್ಯಕ್ತಿತ್ವ ವಿಕಸನ, ವಿಷಯಗಳ ಗ್ರಹಿಕೆಗಳ ಬಗ್ಗೆ ಕಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ 8 ನೇ ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶದಲ್ಲಿ ಗುರುವಿಗೆ ಮಹತ್ವದ ಸ್ಥಾನ ಇದೆ. ಗುರುಗಳು ಸರಸ್ವತಿ ವಾಹನ ಹಂಸ ಇದ್ದ ಹಾಗೆ. ಮಕ್ಕಳಿಗೆ ಏಕೆ, ಹೇಗೆ, ಎಲ್ಲಿ,ಏನು, ಯಾವಾಗ ಎಂಬ ಪ್ರಶ್ನೆಗಳನ್ನು ಮಕ್ಕಳು ಕೇಳಬೇಕು.ಮಕ್ಕಳಲ್ಲಿ ಮುಗ್ದತೆ ಮತ್ತು ಉತ್ಸುಕತೆ ಉಳಿಯುವಂತೆ ನೋಡಿಕೊಳ್ಳುವವನೇ ನಿಜವಾದ ಶಿಕ್ಷಕ ಎಂದರು.
*ಶಿಕ್ಷಣದಲ್ಲಿ ವ್ಯಕ್ತಿತ್ವ ವಿಕಸನ, ಸಂಸ್ಕೃತಿ,ಮೌಲ್ಯಗಳನ್ನು ಗಟ್ಟಿಗೊಳಿಸಬೇಕು :*
ದೇಶದ ಶಿಕ್ಷಕರು ಶಿಕ್ಷಣಕ್ಕೆ ಒಂದು ರೂಪುರೇಷೆ ಕೊಡಲು ಬಂದಿದ್ದೀರಿ. ಈ ಸಮ್ಮೇಳನ ಬೆಂಗಳೂರಿನ ಲ್ಲಿ ನಡೆಯುತ್ತಿರುವುದಕ್ಕೆ ನನಗೆ ಸಂತಸವಾಗಿದೆ. ಇಂಡಿಯಾ ಟು ಭಾರತ ವಿಷಯದ ಮೇಲೆ ಚರ್ಚೆ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ನಾವು ಮೆಕಾಲೆ ಶಿಕ್ಷಣವನ್ನು ಓದುತ್ತ ಬಂದಿದ್ದೇವೆ. ಆ ಶಿಕ್ಷಣಲ್ಲಿ ಸೃಜನಶೀಲತೆ ಇಲ್ಲ, ಆ ಶಿಕ್ಷಣದಲ್ಲಿ ಯಾವುದೇ ನೈತಿಕ ಪಾಠ ಇಲ್ಲ ಸಂಸ್ಲೃತಿ ಇಲ್ಲಅಲೆಕ್ಸಾಂಡರ್, ಮೊಗಲರು, ಬ್ರಿಟೀಷರು ಬಂದು ಆಳಿದರು. ಈಗ 21ನೇ ಶತಮಾನದಲ್ಲಿ ಸಂಪತ್ತು ,ಆಸ್ತಿ ಇರುವವರು ಆಳುವುದಿಲ್ಲ. ಯಾರ ಬಳಿ ಜ್ಞಾನ ಇದೆಯೊ ಅವರು ವಿಶ್ವವನ್ನು ಆಳಲಿದ್ದಾರೆ. ಶಿಕ್ಷಣದಲ್ಲಿ ವ್ಯಕ್ತಿತ್ವ ವಿಕಸನ, ಸಂಸ್ಕೃತಿ,ಮೌಲ್ಯಗಳನ್ನು ಗಟ್ಟಿಗೊಳಿಸಬೇಕು.ನಮ್ಮ ಮಾತೃ ಭಾಷೆಯೇ ನಮ್ಮ ರಾಷ್ಟ್ರೀಯ ಭಾಷೆ. ಮೊದಲು ಭಾಷೆ ನಂತರ ಶಬ್ದ, ಸಾಹಿತ್ಯ ಜ್ಞಾನ, ವಿಜ್ಞಾನ ಹೀಗೆ ಬೆಳೆಯುತ್ತದೆ. ನಾವು ಮೂಲ ಸಂಸ್ಕೃತಿಗೆ ಹೋಗಬೇಕು.
*ಭಾರತದಲ್ಲಿ ಉಳಿತಾಯದ ಸಂಸ್ಕೃತಿಯಿದೆ :*
ಇತ್ತಿಚೆಗೆ ನಾಗರಿಕತೆ ಬೆಳೆಯುತ್ತಿದೆ. ನಾಗರಿಕತೆಗೂ ಸಂಸ್ಕೃತಿ ಗೂ ವ್ಯತ್ಯಾಸ ಇದೆ. ನಾಗರಿಕತೆ , ನಾವು ಏನು ಪಾಲಿಸಿಕೊಂಡು ಬಂದಿದ್ದೇವೆ, ನಾವೇನಾಗಿದ್ದೇವೆ ಅದು ಸಂಸ್ಕೃತಿ.ಸಂಸ್ಕೃತಿಯ ಜೊತೆಜೊತೆಗೆ ಆರ್ಥಿಕತೆಯ ಅಭಿವೃದ್ಧಿಯಾಗಬೇಕು. ವಿದೇಶಗಳಲ್ಲಿ ದಿನಕ್ಕೊಂದೆರಡು ಬ್ಯಾಂಕ್ ಗಳು ದಿವಾಳಿಯಾಗುತ್ತಿವೆ. ನಮ್ಮಲ್ಲಿ ಆ ಪರಿಸ್ಥಿತಿ ಇಲ್ಲ. ವಿದೇಶಗಳಲ್ಲಿ ವೆಚ್ಚ ಮಾಡುವ ಸಂಸ್ಕೃತಿಯಿದ್ದರೆ, ಭಾರತದಲ್ಲಿ ಉಳಿತಾಯದ ಸಂಸ್ಕೃತಿಯಿದೆ. ನಮ್ಮ ತಾಯಂದಿರು ಉಳಿಸಿರುವ ಹಣ ನಮ್ಮ ಆರ್ಥಿಕತೆ ಉಳಿಸಿದೆ. ಕೊರೊನಾ ಸಂದರ್ಭದಲ್ಲಿ ಯೂ ಅದೆ ನಮ್ಮನ್ನು ಉಳಿಸಿದೆ ಎಂದರು.
*ಎನ್ ಇ ಪಿ ಜಾರಿಗೆ ತಂದಿರುವ ಮೊದಲ ರಾಜ್ಯ ಕರ್ನಾಟಕ:*
ನಮ್ಮ ಸರ್ಕಾರ ಈಗಾಗಲೇ ಎನ್ ಇ ಪಿ ಜಾರಿಗೆ ತಂದಿರುವ ಮೊದಲ ರಾಜ್ಯ, ಈಗಾಗಲೇ ಉನ್ನತ ಶಿಕ್ಷಣದಲ್ಲಿ ಜಾರಿಗೆ ತಂದಿದ್ದೇವೆ. ಈ ವರ್ಷದಿಂದ ಶಾಲಾ ಶಿಕ್ಷಣದಲ್ಲಿಯೂ ಜಾರಿಗೆ ತರುತ್ತೇವೆ. ಶಿಕ್ಷಣ ಇಲಾಖೆಗೆ ಹೆಚ್ಚಿನ ಬಜೆಟ್ ನೀಡಿದ್ದೇವೆ. ಒಂದು ವರ್ಷದಲ್ಲಿ ಅತಿ ಹೆಚ್ಚು 8000 ಶಾಲಾ ಕೊಠಡಿಗಳ ನಿರ್ಮಾಣ ಮಾಡುತ್ತಿದ್ದೆವೆ. ಶಿಕ್ಷಕರ ನೇಮಕ ಮಾಡಲಾಗುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ.
ಈ ಸಂದರ್ಭದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ ಜೋಶಿ, ಸಚಿವರಾದ ಗೋವಿಂದ ಕಾರಜೋಳ, ಬಿ.ಸಿ.ನಾಗೇಶ್, ಎಸ್.ಟಿ.ಸೋಮಶೇಖರ್, ಎಬಿಆರ್ ಎಸ್ ಎಂ ರಾಷ್ಟ್ರೀಯ ಅಧ್ಯಕ್ಷ ಪ್ರೊ. ಜಗದೀಶ್ ಪ್ರಸಾದ್ ಸಿಂಘಾಲ್, ರಾಜ್ಯಸಭಾ ಮಾಜಿ ಸದಸ್ಯ ಕೆ.ಸಿ.ರಾಮಮೂರ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪೂರ ಹಾಗೂ ಮತ್ತಿತರ ಗಣ್ಯರು ಹಾಜರಿದ್ದರು.