ಬೆಂಗಳೂರು :- ಕನ್ನಡ ಕೇವಲ ನವೆಂಬರ್ ಗೆ ಸೀಮಿತವಾಗಬಾರದು,
ಇದು ನಾಡಿನ ನಿತ್ಯೋತ್ಸವ ವಾಗಬೇಕು ಎಂದು ಪ್ರಾoಶುಪಾಲ ಡಾ, ದೇವರಾಜ್ ಅಭಿಪ್ರಾಯಪಟ್ಟರು.
ಅವರು ಮಂಗಳೂರು ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಜನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು ರವರು ಆಗಮಿಸಿ ಡೊಳ್ಳು ಬಾರಿಸುವ ಮೂಲಕ ಅರ್ಥಪೂರ್ಣವಾಗಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು,ಜಾನಪದ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ಇನ್ನೊಬ್ಬ ಅತಿಥಿಗಳಾದ ಮೈಸೂರಿನ ಕಥೆಗಳು ಖ್ಯಾತಿಯ ಅರೇನಹಳ್ಳಿ ಧರ್ಮೇಂದ್ರ ಕುಮಾರ್ ರವರು ಪಾಲ್ಗೊಂಡು ಕನ್ನಡ ನಾಡಿನ ಸಂಸ್ಕೃತಿ ಇತಿಹಾಸ ಬಿಂಬಿಸುವ ಅನೇಕ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದರು. ಕನ್ನಡ ನಾಡಿನ ಹಲವು ಪ್ರಥಮಗಳನ್ನು ಹೇಳಿದರು. ಸಂಸ್ಥೆಯ ನಿರ್ದೇಶಕರಾದ ಪ್ರೊ.ಶ್ರೀಧರ್ ರವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ವಿದ್ಯಾರ್ಥಿಗಳ ಮನ ರಂಜಿಸಿದರು.
ಇದಕ್ಕೂ ಮುಂಚೆ ಮಂಗಳೂರು ಪದವಿ ಪೂರ್ವ ಕಾಲೇಜಿನ 800ಕ್ಕೂ ಅಧಿಕ ವಿದ್ಯಾರ್ಥಿಗಳು ರಸ್ತೆಯಲ್ಲಿ ಬೃಹತ್ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು. ಇವ ರೊಂದಿಗೆ ಡೊಳ್ಳು ಕುಣಿತದ ತಂಡ, ವೀರಗಾಸೆ, ಕಂಸಾಳೆ ಕುಣಿತ ಹಾಗೂ ಬೊಂಬೆಗಳ ಉತ್ಸವ ರಸ್ತೆಯಲ್ಲಿ ಮನಮೋಹಕವಾಗಿ ಸಂಚರಿಸಿದವು. ಈ ಮೂಲಕ ಕನ್ನಡ ನಾಡಿನ ಭವ್ಯ ಇತಿಹಾಸವಿರುವ ಜಾನಪದ ತಂಡಗಳ ಕುಣಿತ ಹಾಗೂ ವಿದ್ಯಾರ್ಥಿಗಳ ಮೆರವಣಿಗೆ ತುಂಬಾ ಆಕರ್ಷನಿಯವಾಗಿತ್ತು, ಕನ್ನಡಪರ ಘೋಷಣೆಗಳು ಹಾಗೂ ಬಿತ್ತಿ ಪತ್ರಗಳನ್ನು ಹಿಡಿದು ಸಾಗಿದರು,ಇದನ್ನು ನೋಡಿ ರಸ್ತೆಗಳ ಇಕ್ಕೆಲಗಳಲ್ಲಿ ಸೇರಿದ ಜನ ಸಮೂಹ ಆನಂದ ಪಟ್ಟರು. ಈ ಬೃಹತ್ ಜಾಥ ಸುಮಾರು 2 ಗಂಟೆಯವರೆಗೆ ನಡೆಯಿತು.