“ಹಿಂದಿನಿಂದಲೂ ಶಿಕ್ಷಣ ಪ್ರಸಾರಕ್ಕೆ ಆದ್ಯತೆ ನೀಡಲಾಗುತ್ತಿದೆ. ಇದು ಅಗತ್ಯವಾಗಿತ್ತು. ಆದರೆ ಇಂದು ಶಿಕ್ಷಣದ ವಿಸ್ತರಣೆಗಿಂತಲೂ ಹೆಚ್ಚಾಗಿ ಅದರ ಗುಣಮಟ್ಟವನ್ನು ಸುಧಾರಿಸುವುದು ಅಗತ್ಯವಾಗಿದೆ. ನಮ್ಮ ಆದ್ಯತೆಯನ್ನು ಈಗ ಸಾಕ್ಷರತಾ ಅಭಿಯಾನದಿಂದ ಉತ್ತಮ ಶಿಕ್ಷಣದತ್ತ ಬದಲಾಯಿಸಬೇಕಾಗಿದೆ. ಇಂದಿನಿಂದ, ನಾವು ಶಾಲಾ ಶಿಕ್ಷಣಕ್ಕಿಂತ ಹೆಚ್ಚಾಗಿ ಕಲಿಕೆಯ ಮೇಲೆ ಒತ್ತು ನೀಡಬೇಕಾಗಿದೆ.”-ಪ್ರಧಾನ ಮಂತ್ರಿ ನರೇಂದ್ರ ಮೋದಿ
ಭಾರತವು ಪ್ರತಿ ವರ್ಷ ನವೆಂಬರ್ 11 ರಂದು ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸುತ್ತದೆ, ಇದು ಖ್ಯಾತ ಶಿಕ್ಷಣತಜ್ಞ ಮತ್ತು ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನವಾಗಿದೆ. ರಾಷ್ಟ್ರದ ಜನಸಂಖ್ಯೆಯ ಪ್ರಯೋಜನವು (ಜನಸಂಖ್ಯೆಯ ಶೇ. 65 ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಸುಶಿಕ್ಷಿತ ರಾಷ್ಟ್ರವನ್ನು ನಿರ್ಮಿಸಲು ಅತಿ ದೊಡ್ಡ ಸಾಮರ್ಥ್ಯವಾಗಿದೆ. ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಯುವಜನರ ಸಬಲೀಕರಣವು ನಿರ್ಣಾಯಕವಾಗಿದೆ. ಭಾರತ ಸರ್ಕಾರವು ವಿದ್ಯಾರ್ಥಿಗಳು ಮತ್ತು ಯುವಜನರ ಸಮಗ್ರ ಅಭಿವೃದ್ಧಿಗಾಗಿ ಬಲವಾದ ಮತ್ತು ಪರಿಣಾಮಕಾರಿ ಶಿಕ್ಷಣ ಮೂಲಸೌಕರ್ಯವನ್ನು ನಿರ್ಮಿಸಲು ವಿಶೇಷ ಒತ್ತು ನೀಡುವ ಮೂಲಕ ದೇಶದ ಭವಿಷ್ಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಬದ್ಧವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದರ್ಶಿ ನಾಯಕತ್ವದಲ್ಲಿ, ಸುಸ್ಥಿರ ಅಭಿವೃದ್ಧಿ ಗುರಿ 4 ಸೇರಿದಂತೆ 21 ನೇ ಶತಮಾನದ ಶಿಕ್ಷಣದ ಮಹತ್ವಾಕಾಂಕ್ಷೆಯ ಗುರಿಗಳಿಗೆ ಹೊಂದಿಕೆಯಾಗುವ ಹೊಸ ವ್ಯವಸ್ಥೆಯನ್ನು ರಚಿಸಲು ಜುಲೈ 29, 2020 ರಂದು ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್‌ಇಪಿ) ಅನ್ನು ಅನುಮೋದಿಸಿತು.
ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಾಮುಖ್ಯತೆ1986 ರಲ್ಲಿ ರೂಪಿಸಲಾದ 36 ವರ್ಷ ಹಳೆಯದಾದ
ಶಿಕ್ಷಣ ನೀತಿಯನ್ನು ಬದಲಾಯಿಸುತ್ತದೆ
ಶಿಕ್ಷಣ ವ್ಯವಸ್ಥೆಯ ಎಲ್ಲಾ
ಅಂಶಗಳ ಪರಿಷ್ಕರಣೆ ಮತ್ತು ನವೀಕರಣವನ್ನು ಪ್ರಸ್ತಾಪಿಸುತ್ತದೆ
ಪ್ರತಿಯೊಬ್ಬ ವ್ಯಕ್ತಿಯ
ಸೃಜನಶೀಲ ಸಾಮರ್ಥ್ಯದ ಅಭಿವೃದ್ಧಿಗೆ ಒತ್ತು ನೀಡುತ್ತದೆ
ಭಾರತದ ವಿಶಾಲ ಶಿಕ್ಷಣ ವ್ಯವಸ್ಥೆಗೆ ಹೊಸ ದಿಕ್ಕನ್ನು ತೋರುತ್ತದೆ.
ಮೇ 07, 2022 ರಂದು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ರ ಅನುಷ್ಠಾನವನ್ನು ಪ್ರಧಾನ ಮಂತ್ರಿಯವರು ಪರಿಶೀಲಿಸಿದರು. ಎನ್‌ಇಪಿ 2020 ಜಾರಿಯಾದ ಎರಡು ವರ್ಷಗಳಲ್ಲಿ ಅದರ ಅಡಿಯಲ್ಲಿ ನಿಗದಿಪಡಿಸಲಾಗಿರುವ ಲಭ್ಯತೆ, ಸಮಾನತೆ, ಒಳಗೊಳ್ಳುವಿಕೆ ಮತ್ತು ಗುಣಮಟ್ಟದ ಉದ್ದೇಶಗಳನ್ನು ಸಾಧಿಸಲು ಅನೇಕ ಉಪಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಅವರು ಗಮನಿಸಿದರು.
ಈ ನೀತಿಯ ಅಡಿಯಲ್ಲಿ, 2025 ರ ವೇಳೆಗೆ ಕನಿಷ್ಠ
ಶೇ.50 ರಷ್ಟು
ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ್ಯಗಳನ್ನು ಒದಗಿಸಲು ಗುರಿಯನ್ನು ನಿಗದಿಪಡಿಸಲಾಗಿದೆ.
ಎನ್‌ಇಪಿ ಅಡಿಯ ಉಪಕ್ರಮಗಳು
ಸಮಗ್ರ ಶಿಕ್ಷಾ
• ಶಾಲಾ
ಶಿಕ್ಷಣಕ್ಕಾಗಿ ಒಂದು ವ್ಯಾಪಕವಾದ ಕಾರ್ಯಕ್ರಮ
• ಭಾರತ ಸರ್ಕಾರವು
ಮುಂದಿನ ಐದು ವರ್ಷಗಳಲ್ಲಿ (ಅಂದರೆ 2027 ರ ವರೆಗೆ) "ಸಮಗ್ರ ಶಿಕ್ಷಾ ಅಭಿಯಾನ" ಅಡಿಯಲ್ಲಿ 3 ಲಕ್ಷ ಕೋಟಿ ರೂ.
ಖರ್ಚು ಮಾಡುತ್ತದೆ.
ನಿಪುಣ್ ಭಾರತ್
• ತಿಳುವಳಿಕೆ ಮತ್ತು
ಸಂಖ್ಯಾಶಾಸ್ತ್ರದೊಂದಿಗೆ ಓದುವಿಕೆಯಲ್ಲಿ ಪ್ರಾವೀಣ್ಯತೆಗಾಗಿ ರಾಷ್ಟ್ರೀಯ ಉಪಕ್ರಮ
• ಜುಲೈ 2021 ರಲ್ಲಿ
ಪ್ರಾರಂಭಿಸಲಾಗಿದೆ
• ಬುನಾದಿ ಸಾಕ್ಷರತೆ
ಮತ್ತು ಗಣಿತದಲ್ಲಿ ಪ್ರಾವೀಣ್ಯತೆಯ ಗುರಿಯನ್ನು ಸಾಧಿಸಲು ಆದ್ಯತೆಗಳು ಮತ್ತು ಕಾರ್ಯಸೂಚಿಗಳನ್ನು
ರೂಪಿಸುತ್ತದೆ
ವಿದ್ಯಾ ಪ್ರವೇಶ
• ಜುಲೈ 2021 ರಲ್ಲಿ
ಪ್ರಾರಂಭಿಸಲಾಗಿದೆ
• ಮೂರು ತಿಂಗಳ ನಾಟಕ
ಆಧಾರಿತ 'ಶಾಲಾ ತಯಾರಿ
ಮಾಡ್ಯೂಲ್' ಅನ್ನು ಎನ್ ಸಿ ಇ
ಆರ್ ಟಿ ಅಭಿವೃದ್ಧಿಪಡಿಸಿದೆ,
ವಿದ್ಯಾಂಜಲಿ
• ಸರ್ಕಾರಿ
ಶಾಲೆಗಳಲ್ಲಿನ ಸೇವೆಗಳು/ಚಟುವಟಿಕೆಗಳಲ್ಲಿ ಭಾಗವಹಿಸಬಹುದಾದ ಶಾಲಾ ಸ್ವಯಂಸೇವಕ ಕಾರ್ಯಕ್ರಮ
ದೀಕ್ಷಾ
• ಶಾಲಾ ಶಿಕ್ಷಣಕ್ಕೆ
ಗುಣಮಟ್ಟದ ಇ-ಕಂಟೆಂಟ್ ಒದಗಿಸಲು ರಾಷ್ಟ್ರದ ಡಿಜಿಟಲ್ ಮೂಲಸೌಕರ್ಯ
• ಎಲ್ಲಾ ತರಗತಿಗಳಿಗೆ
(ಒಂದು ರಾಷ್ಟ್ರ,
ಒಂದು ಡಿಜಿಟಲ್
ಪ್ಲಾಟ್‌ಫಾರ್ಮ್) ಕ್ಯೂಆರ್ ಕೋಡ್ ಹೊಂದಿರುವ ಪಠ್ಯಪುಸ್ತಕಗಳು
• ಆಗಸ್ಟ್ 08, 2022 ರವರೆಗೆ, 3,520 ಪಠ್ಯಪುಸ್ತಕ
ಆಧಾರಿತ ಐ ಎಸ್ ಎಲ್ ವೀಡಿಯೊಗಳನ್ನು ರೆಕಾರ್ಡ್ ಮಾಡಲಾಗಿದೆ. 597 ವೀಡಿಯೊಗಳನ್ನು
ದೀಕ್ಷಾ ದಲ್ಲಿ ಅಪ್‌ಲೋಡ್ ಮಾಡಲಾಗಿದೆ. 10,000 ಪದಗಳ ಐ ಎಸ್ ಎಲ್ ನಿಘಂಟನ್ನು ಅಪ್‌ಲೋಡ್ ಮಾಡಲಾಗಿದೆ.
3,474 ಆಡಿಯೊ ಪುಸ್ತಕಗಳ
ಅಧ್ಯಾಯಗಳನ್ನು ಅಪ್‌ಲೋಡ್ ಮಾಡಲಾಗಿದೆ
ಸ್ವಯಂ
• ಅತ್ಯಂತ
ಹಿಂದುಳಿದವರು ಸೇರಿದಂತೆ ಎಲ್ಲರಿಗೂ ಅತ್ಯುತ್ತಮ ಬೋಧನಾ ಕಲಿಕಾ ಸಂಪನ್ಮೂಲಗಳನ್ನು ತಲುಪಿಸಲು
ಮತ್ತು ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂತರವನ್ನು ನಿವಾರಿಸಲು ಪ್ರಯತ್ನಿಸುತ್ತದೆ
ನಿಷ್ಠಾ
• ಶಾಲಾ ಮುಖ್ಯಸ್ಥರು
ಮತ್ತು ಶಿಕ್ಷಕರ ಸಮಗ್ರ ಪ್ರಗತಿಗಾಗಿ ರಾಷ್ಟ್ರೀಯ ಉಪಕ್ರಮ
• 2021-22 ರಲ್ಲಿ, ಶಿಕ್ಷಕರ ಗುಣಮಟ್ಟ
ಮತ್ತು ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶಗಳ ಸುಧಾರಣೆಯ ಮೇಲೆ ಕೇಂದ್ರೀಕರಿಸಿ ಅನುಕ್ರಮವಾಗಿ
ದ್ವಿತೀಯ, ಪೂರ್ವ-ಪ್ರಾಥಮಿಕ
ಮತ್ತು ಪ್ರಾಥಮಿಕಕ್ಕೆ ನಿಷ್ಠಾ ಆನ್‌ಲೈನ್ ಅನ್ನು ದ್ವಿತೀಯ ಹಂತಕ್ಕೆ (ನಿಷ್ಟಾ 2.0) ಮತ್ತು ಬುನಾದಿ
ಸಾಕ್ಷರತೆ ಮತ್ತು ಗಣಿತಶಾಸ್ತ್ರಕ್ಕೆ (ನಿಷ್ಠಾ 3.0) ವಿಸ್ತರಿಸಲಾಗಿದೆ.
ಶಿಕ್ಷಣ ಮೂಲಸೌಕರ್ಯದಲ್ಲಿ
ಸುಧಾರಣೆ
ಶಿಕ್ಷಣ ಕ್ಷೇತ್ರಕ್ಕೆ ಬಜೆಟ್
ಅನುದಾನವು 2021-22 ನೇ ಹಣಕಾಸು
ವರ್ಷಕ್ಕೆ ಹೋಲಿಸಿದರೆ 2022-23 ನೇ ಸಾಲಿಗೆ ಶೇ.11.86 ರಷ್ಟು ಜಿಗಿತವನ್ನು ಕಂಡಿದೆ, ಇದು ಭಾರತದಲ್ಲಿ
ಶಿಕ್ಷಣ ಸೌಲಭ್ಯಗಳ ವಿಷಯದಲ್ಲಿ ಅತ್ಯುತ್ತಮ ಸೌಕರ್ಯಗಳು ಮತ್ತು ಪರಿಸರವನ್ನು ಖಾತರಿಪಡಿಸಲು
ಕೇಂದ್ರ ಸರ್ಕಾರಕ್ಕಿರುವ ತೀವ್ರ ಆಸಕ್ತಿಯನ್ನು ತೋರಿಸುತ್ತದೆ. ಕೆಳಗಿನ ರೇಖಾಚಿತ್ರವು ಕಳೆದ
ಮೂರು ವರ್ಷಗಳಲ್ಲಿ ಶಾಲಾ ಮೂಲಸೌಕರ್ಯದಲ್ಲಿ ಸ್ಥಿರವಾದ ಸುಧಾರಣೆಯನ್ನು ತೋರಿಸುತ್ತದೆ:
ಮೂಲ ಸೌಕರ್ಯ ಹೊಂದಿರುವ ಸರ್ಕಾರಿ ಶಾಲೆಗಳ ಸಂಖ್ಯೆ ಹೆಚ್ಚಾಗಿದೆ. ಜಲ ಜೀವನ ಮಿಷನ್ ಅಡಿಯಲ್ಲಿ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗಿದೆ. ಸ್ವಚ್ಛ ಭಾರತ ಅಭಿಯಾನ ಮತ್ತು ಸಮಗ್ರ ಶಿಕ್ಷಾ ಯೋಜನೆಗಳು ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸುವಲ್ಲಿ ಮತ್ತು ಶಾಲೆಗಳಲ್ಲಿ ಆಸ್ತಿಗಳನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಇದಲ್ಲದೆ, ಸಮಗ್ರ ಶಿಕ್ಷಣದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಘಟಕದ ಅಡಿಯಲ್ಲಿ, ಹಾರ್ಡ್‌ವೇರ್, ಶೈಕ್ಷಣಿಕ ಸಾಫ್ಟ್‌ವೇರ್ ಮತ್ತು ಬೋಧನೆಗಾಗಿ ಇ-ಕಂಟೆಂಟ್ ಸೇರಿದಂತೆ ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳು ಮತ್ತು ಐಸಿಟಿ ಲ್ಯಾಬ್‌ಗಳ ಸ್ಥಾಪನೆಗೆ ಸರ್ಕಾರ ಬೆಂಬಲ ನೀಡುತ್ತಿದೆ.
ಒಟ್ಟು ದಾಖಲಾತಿ
ಅನುಪಾತದಲ್ಲಿ (ಜಿಇಆರ್) ಹೆಚ್ಚಳ
ಶಿಕ್ಷಣ ವ್ಯವಸ್ಥೆ ಮತ್ತು
ಮೂಲಸೌಕರ್ಯದಲ್ಲಿನ ಸುಧಾರಣೆಯು ಪ್ರಾಥಮಿಕ, ಹಿರಿಯ ಪ್ರಾಥಮಿಕ, ಮಾಧ್ಯಮಿಕ ಮತ್ತು
ಪ್ರೌಢಶಾಲೆಯಲ್ಲಿ ಒಟ್ಟು ದಾಖಲಾತಿ ಅನುಪಾತದಲ್ಲಿ (ಜಿಇಆರ್) ಹೆಚ್ಚಳಕ್ಕೆ ಕಾರಣವಾಗಿದೆ. 2021-22 ರಂದು ಹೊಸದಾಗಿ
ಬಿಡುಗಡೆಯಾದ (UDISE+)
ವರದಿಯು ಶಾಲಾ
ದಾಖಲಾತಿಗಳಲ್ಲಿ ಸ್ಥಿರವಾದ ಸುಧಾರಣೆಯನ್ನು ಸೂಚಿಸುತ್ತದೆ.
ಭಾರತದಲ್ಲಿ ಲಿಂಗ ಮತ್ತು
ಶಿಕ್ಷಣ ಮಟ್ಟದಲ್ಲಿ ಒಟ್ಟು ದಾಖಲಾತಿ ಅನುಪಾತ (ಜಿಇಆರ್)
ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳ ಸಂಖ್ಯೆಯಲ್ಲಿ ಹೆಚ್ಚಳ
ಶಿಕ್ಷಣದ ಒಟ್ಟಾರೆ
ಅನುಭವವನ್ನು ಸುಧಾರಿಸುವ ದೃಷ್ಟಿಕೋನದಿಂದ, ಕೇಂದ್ರ ಸರ್ಕಾರವು ಶಿಕ್ಷಣ ಮೂಲಸೌಕರ್ಯವನ್ನು
ಬಲಪಡಿಸುತ್ತಿದೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಸಂಖ್ಯೆಯನ್ನು
ಹೆಚ್ಚಿಸುತ್ತಿದೆ. ಗುಣಮಟ್ಟದ ಮೂಲಸೌಕರ್ಯವು ಉತ್ತಮ ಶಿಕ್ಷಣವನ್ನು ಸುಗಮಗೊಳಿಸುತ್ತದೆ, ಫಲಿತಾಂಶಗಳನ್ನು
ಸುಧಾರಿಸುತ್ತದೆ ಮತ್ತು ಶಾಲೆ ತೊರೆಯುವ ದರಗಳನ್ನು ಕಡಿಮೆ ಮಾಡುತ್ತದೆ, ಜೊತೆಗೆ ಅನೇಕ ಇತರ
ಪ್ರಯೋಜನಗಳನ್ನೂ ನೀಡುತ್ತದೆ.
ದೇಶದಲ್ಲಿ 2014 ರಿಂದ, ಆರು ಹೊಸ ಕೇಂದ್ರೀಯ
ವಿಶ್ವವಿದ್ಯಾಲಯಗಳು, ಏಳು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂಗಳು), ಏಳು ಭಾರತೀಯ
ತಂತ್ರಜ್ಞಾನ ಸಂಸ್ಥೆಗಳು (ಐಐಟಿಗಳು), 15 ಅಖಿಲಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳು (ಎಐಐಎಂಎಸ್), 209 ಹೊಸ ವೈದ್ಯಕೀಯ
ಕಾಲೇಜುಗಳು,
320 ಹೊಸ ವಿಶ್ವವಿದ್ಯಾಲಯಗಳು ಮತ್ತು 5,709 ಹೊಸ ಕಾಲೇಜುಗಳನ್ನು ತೆರೆಯಲಾಗಿದೆ. 2014-15 ಮತ್ತು 2019-20 ರ ನಡುವೆ
ವಿಶ್ವವಿದ್ಯಾನಿಲಯಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವು ಸರ್ಕಾರದ ಆದ್ಯತೆಗೆ ಸಾಕ್ಷಿಯಾಗಿದೆ.
ಉನ್ನತ ಶಿಕ್ಷಣಕ್ಕಾಗಿ ಹೊಸ
ಸಂಸ್ಥೆಗಳ ಸ್ಥಾಪನೆಯು ಕೇಂದ್ರ ಸರ್ಕಾರದ ಪ್ರಮುಖ ಕ್ಷೇತ್ರವಾಗಿದೆ. 2014-15 ಮತ್ತು 2019-20 ರ ನಡುವೆ
ವಿಶ್ವವಿದ್ಯಾನಿಲಯಗಳ ಸಂಖ್ಯೆಯಲ್ಲಿನ ಗಮನಾರ್ಹ ಹೆಚ್ಚಳವನ್ನು ಇಲ್ಲಿ ನೀಡಲಾಗಿರುವ ರೇಖಾಚಿತ್ರ
ಹೆಳುತ್ತದೆ.
ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸಲು, ಐಐಟಿಗಳು, ಐಐಎಂಗಳು, ಐಐಐಟಿಗಳು ಮತ್ತು ಎಐಐಎಂಎಸ್‌ನಂತಹ ಸಂಸ್ಥೆಗಳ ಪಾತ್ರವು ಭಾರತಕ್ಕೆ ಪ್ರಮುಖವಾಗಿದೆ. ಕೇಂದ್ರ ಸರ್ಕಾರವು ಗುಣಮಟ್ಟದ ಶಿಕ್ಷಣವನ್ನು ನೀಡಲು ಬದ್ಧವಾಗಿದೆ, ಈ ಪ್ರಮುಖ ಸಂಸ್ಥೆಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದ ಇದು ಸ್ಪಷ್ಟವಾಗಿದೆ.
ದೃಷ್ಟಿಕೋನವನ್ನುಸುಧಾರಣೆಗಳಾಗಿವಾಸ್ತವಗೊಳಿಸಲು2013-14 ರಿಂದ ಶಿಕ್ಷಣ
ಕ್ಷೇತ್ರದ ಮೇಲಿನ ಕೇಂದ್ರ ಮತ್ತು ರಾಜ್ಯ
ಸರ್ಕಾರಗಳ ಒಟ್ಟು ವೆಚ್ಚವನ್ನು ದುಪ್ಪಟ್ಟುಗೊಳಿಸಲಾಗಿದೆ.
ಗ್ರಾಮೀಣ ಭಾರತ ಸೇರಿದಂತೆ
ದೇಶದಲ್ಲಿ ಶಿಕ್ಷಣ ಮತ್ತು ಶಾಲಾ ಮೂಲಸೌಕರ್ಯಗಳ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಗುಣಮಟ್ಟದ
ಶಿಕ್ಷಣವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ.
ಜೂನ್ 02, 2022 ರಂದು, ಕೇಂದ್ರ ಶಿಕ್ಷಣ
ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲು
ಪಿಎಂ ಶ್ರೀ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದರು. ಈ ಶಾಲೆಗಳು ಅತ್ಯಾಧುನಿಕ
ಶಾಲೆಗಳಾಗಿರುತ್ತವೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020 ರ
ಪ್ರಯೋಗಾಲಯಗಳಾಗಿ ಕಾರ್ಯನಿರ್ವಹಿಸುತ್ತವೆ.
ಖಾಸಗಿ ವೈದ್ಯಕೀಯ
ಕಾಲೇಜುಗಳಲ್ಲಿನ ಶೇ.50ರಷ್ಟು ಸೀಟುಗಳ ಶುಲ್ಕವು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕಕ್ಕೆ
ಸಮನಾಗಿರಬೇಕು ಎಂದು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ
ಸುಮಾರು 2,500 ಕೋಟಿ ರೂ.
ಉಳಿತಾಯವಾಗಲಿದೆ. ಇದಲ್ಲದೆ, ಅವರು ತಮ್ಮ ಮಾತೃಭಾಷೆಯಲ್ಲಿ ವೈದ್ಯಕೀಯ ಮತ್ತು ತಾಂತ್ರಿಕ
ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ, ಇದರಿಂದ ತಮ್ಮ ಶಾಲೆಗಳಲ್ಲಿ ಇಂಗ್ಲಿಷ್ ಅಧ್ಯಯನ ಮಾಡದ ಬಡ, ಮಧ್ಯಮ ವರ್ಗ ಮತ್ತು
ಕೆಳ ಮಧ್ಯಮ ವರ್ಗದ ಮಕ್ಕಳು ಸಹ ವೈದ್ಯರಾಗಲು ಸಾಧ್ಯವಾಗುತ್ತದೆ.
ವಿದ್ಯಾರ್ಥಿವೇತನಗಳನ್ನು
ನೀಡುವ ಮೂಲಕ, ಶಿಕ್ಷಣ
ಮೂಲಸೌಕರ್ಯಗಳನ್ನು ಹೆಚ್ಚಿಸುವ ಮೂಲಕ, ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ಪ್ರಯೋಗಾಲಯಗಳನ್ನು ಸ್ಥಾಪಿಸುವ ಮತ್ತು
ಬೋಧನಾ ಸಿಬ್ಬಂದಿಯನ್ನು ಕೌಶಲ್ಯಪೂರ್ಣಗೊಳಿಸುವ ಮೂಲಕ ಭಾರತ ಸರ್ಕಾರವು ರಾಷ್ಟ್ರದ ಯುವಜನರಿಗೆ
ಅತ್ಯುತ್ತಮ ಶಿಕ್ಷಣವನ್ನು ಒದಗಿಸುವ ಯಾವುದೇ ಅವಕಾಶವನ್ನೂಕಳೆದುಕೊಳ್ಳುತ್ತಿಲ್ಲ.
x