ವಲ್ಲಭಭಾಯಿ ಪಟೇಲ್ ಜನ್ಮದಿನದ ನಿಮಿತ್ತ ಸರಕಾರಿ ಶಾಲೆಗಳಿಗೆ ರಾಷ್ಟ್ರಜಾಗೃತಿ ಪುಸ್ತಕಗಳ ವಿತರಣೆ !

varthajala
0

ಬೆಂಗಳೂರು : ಇಲ್ಲಿನ ಹೊಂಗಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರದಾರ ವಲ್ಲಭಭಾಯಿ ಪಟೇಲ್ ಜನ್ಮದಿನದ ನಿಮಿತ್ತ  ಸ್ಥಳಿಯ ಶಾಸಕರಾದ ಶ್ರೀ ಸತೀಶ್ ರೆಡ್ಡಿಯವರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಬೊಮ್ಮನಹಳ್ಳಿಯ ವಿಧಾನಸಭಾ ಕ್ಷೇತ್ರದ 10 ಕಿರಿಯ ಶಾಲೆ, ಮಾಧ್ಯಮಿಕ ಹಾಗೂ ಪ್ರೌಢ ಶಾಲಾ ಗ್ರಂಥಾಲಯಗಳಿಗೆ ಶ್ರೀ ಸಿದ್ಧೇಶ್ವರ ಧರ್ಮಜಾಗೃತಿ ಸಮಿತಿಯ ವತಿಯಿಂದ ರಾಷ್ಟ್ರ ಜಾಗೃತಿಯ ಕುರಿತಾದ 1000 ಕ್ಕೂ ಅಧಿಕ ಪುಸ್ತಕಗಳ ವಿತರಣೆಯನ್ನು ಮಾಡಲಾಯಿತು.





ಈ ಸಂದರ್ಭದಲ್ಲಿ ನಿಕಟಪೂರ್ವ ಕಾರ್ಪೊರೇಟರ್ ಶ್ರೀಮತಿ ಭಾರತಿ ರಾಮಚಂದ್ರ ಇವರು ಮಾತನಾಡಿ, ಸರದಾರ ವಲ್ಲಭಭಾಯಿ ಪಟೇಲರು ಭಾರತೀಯರಲ್ಲಿ ಏಕತೆಯನ್ನು ತರಲು ಹೋರಾಟ ಮಾಡಿದರು. ಅವರ ಜನ್ಮದಿನದ ನಿಮಿತ್ತ ಇಂದು ವಿತರಿಸಲಾದ ಪುಸ್ತಕಗಳಲ್ಲಿ ರಾಷ್ಟ್ರ ಪುರುಷರು, ಸ್ವಾತಂತ್ರ್ಯ ಹೋರಾಟಗಾರರ ಗೌರವಶಾಲಿ ಇತಿಹಾಸ ಹಾಗೂ ಸುಸಂಸ್ಕಾರದ ಕುರಿತು ಅಗಾಧವಾದ ಮಾಹಿತಿಯಿದೆ. ಶ್ರೀ ಸಿದ್ದೇಶ್ವರ ಧರ್ಮ ಜಾಗೃತಿ ಸಮಿತಿಯು ಈ ರೀತಿಯ ಪುಸ್ತಕಗಳನ್ನು ವಿತರಣೆ ಮಾಡುತ್ತಾ ಸಮಾಜದಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ಇಂತಹ ಅಮೂಲ್ಯ ಪುಸ್ತಕಗಳು ಪ್ರತಿಯೊಂದು ಶಾಲೆಗೂ ತಲುಪಬೇಕಿದೆ' ಎಂದರು. ಸ್ಥಳೀಯ ಮುಖಂಡರಾದ ಶ್ರೀ. ನಾಗಭೂಷಣ ರೆಡ್ಡಿ ಇವರು ಮಾತನಾಡುತ್ತಾ,  ಮಾನ್ಯ ಶಾಸಕರಾದ ಶ್ರೀ. ಸತೀಶ್ ರೆಡ್ಡಿ ಅವರು ಮಕ್ಕಳಿಗೆ ನಮ್ಮ ದೇಶದ ಸಂಸ್ಕಾರ, ಸಂಸ್ಕೃತಿ ಆಚರಣೆಯ ಬಗ್ಗೆ ಜಾಗೃತಿ ಮೂಡಲಿ ಎಂಬ ಉದ್ದೇಶದಿಂದ ನಮ್ಮ ಕ್ಷೇತ್ರದ 10 ಶಾಲೆಗಳಿಗೆ ಇಷ್ಟು ಒಳ್ಳೆಯ ಮಾಹಿತಿ ಇರುವ ಪುಸ್ತಕಗಳನ್ನು ವಿತರಣೆ ಮಾಡಿದ್ದಾರೆ, ಹಾಗಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಸಿ.ಆರ್.ಪಿ ಶ್ರೀಮತಿ ಭಾಗ್ಯ ಇವರು ಮಾತನಾಡಿ, 'ಮಕ್ಕಳು ಈ  ಪುಸ್ತಕಗಳನ್ನು ಓದಿ ಪ್ರತಿಯೊಬ್ಬರೂ ಅದರಂತೆ  ತಮ್ಮಲ್ಲಿ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನ ಮಾಡಬೇಕು' ಎಂದು ಕರೆ ನೀಡಿದರು. 10 ಶಾಲೆಗಳ ಪ್ರತಿನಿಧಿಗಳು ಪಡೆದುಕೊಂಡರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಶ್ರೀ.ಮುನಿರಾಜು, ಶ್ರೀ. ರೂಪೇಶ್ ಹೆಚ್.ಎನ್ ಸೌ. ನಾಗರತ್ನ, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ. ಹೆಚ್.ಬಿ ಸುರಪುರ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಶ್ರೀ. ವಿನೋದ್ ಕಾಮತ್,
ಶ್ರೀ ಸಿದ್ದೇಶ್ವರ ಧರ್ಮಜಾಗೃತಿ ಸಮಿತಿ
ಸಂಪರ್ಕ :  9342599299

Post a Comment

0Comments

Post a Comment (0)