ಬೆಂಗಳೂರು: 14 ರಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ " ರಾಜ್ಯದಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವಾರು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿ ಶ್ರಮಿಸುತ್ತಿರುವ ಜಾಗೃತಿ ಓಟಗಾರ ಹಾಗೂ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪ"ನವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ರಾದ ಎಂ.ಬಿ. ನರಗುಂದ್ ರವರು ಕಾರ್ಯವನ್ನ ಮೆಚ್ಚಿ ಅಭಿನಂದಿಸಿ ಪ್ರಶಂಶೆ ಪತ್ರ ನೀಡಿ ಗೌರವಿಸಿದರು
ಕೇಂದ್ರ ಸರ್ಕಾರದ ವಕೀಲರಾಗಿ ವೃತ್ತಿಪರ ಕರ್ತವ್ಯಗಳಿಗೆ ಹಾಜರಾಗುವುದರ ಜೊತೆಗೆ ಸಮಾಜದ ಸಕಾರಾತ್ಮಕ ಬೆಳವಣಿಗೆಗೆ ತನ್ನ ಸಮಯ ಮತ್ತು ಶಕ್ತಿಯನ್ನು ವ್ಯಯಿಸುವ ನನ್ನ ಸ್ನೇಹಿತ ಹಾಗೂ ಕೇಂದ್ರ ಸರ್ಕಾರದ ವಕೀಲರಾದ ಮೋಹನ್ ಕುಮಾರ್ ದಾನಪ್ಪ ಅವರು ಮತದಾರರ ಹಕ್ಕು, ದೈಹಿಕ ಕ್ಷಮತೆ ಕಾಪಾಡುವುದು, ಮಾದಕ ದ್ರವ್ಯ ಸೇವನೆ, ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡುವುದು ಮತ್ತು ಗಾಯಾಳುಗಳನ್ನು ಸ್ಥಳಾಂತರಿಸುವುದು ಮುಂತಾದ ಹಲವಾರು ಪ್ರಮುಖ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮ್ಯಾರಥಾನ್ ಓಟವನ್ನು ಕೈಗೊಳ್ಳುವ ಮೂಲಕ ನಿರಂತರ ಶ್ರಮಿಸುತ್ತಿರುವುದು ನಮಗೆ ಅಪಾರ ಸಂತೋಷವಾಗಿದೆ, ಅವರು ಈ ಹಿಂದೆ "ಮಾದಕ ವಸ್ತುಗಳ ವಿರುದ್ದ ಮತ್ತು ಆಂಬುಲೆನ್ಸ್ ಗೆ ದಾರಿ ಬಿಡಿ, ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸಿ" ಎನ್ನುವ ಸಾಮಾಜಿಕ ವಿಷಯ ಕುರಿತು ಕರ್ನಾಟಕ ರಾಜ್ಯದಲ್ಲಿ 3 ಬಾರಿ 21 ಕಿಲೋ ಮೀಟರ್‌ಗಳ ಮ್ಯಾರಥಾನ್ ಓಟವನ್ನು ಮಾಡಿದ್ದಾರೆ ಮತ್ತು ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಅವರ 72 ನೇ ಜನ್ಮದಿನದ ಸಂದರ್ಭದಲ್ಲಿ ಮತದಾನದ ಕುರಿತು ಜಾಗೃತಿಗಾಗಿ ನವದೆಹಲಿಯಲ್ಲಿ ಮೂರುವರೆ ಗಂಟೆಗಳ ಕಾಲ ನಮ್ಮ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜವನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ನಿರಂತರವಾಗಿ ಮ್ಯಾರಥಾನ್ ಓಟವನ್ನು ಮಾಡಿ ರಾಷ್ಟ್ರಮಟ್ಟದಲ್ಲಿ ಜಾಗೃತಿ ಮೂಡಿಸಿ ಯಶಸ್ವಿಯಾಗಿರುತ್ತಾರೆ, ಈ ಮೇಲಿನ ಸಾಮಾಜಿಕ ಕಾರಣಕ್ಕಾಗಿ ಮೋಹನ್ ಕುಮಾರ್ ದಾನಪ್ಪ ಅವರ ಮಹಾನ್ ಸಾಧನೆಯು ಭಾರತ ದಾಖಲೆ ಪುಸ್ತಕಕ್ಕೆ (ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್) ಸೇರಿರುವುದು ಸಂತೋಷವಾಗಿದೆ,
ಮೋಹನ್ ಕುಮಾರ್ ದಾನಪ್ಪ ಅವರು ಕಾನೂನು ವಲಯದಿಂದ ಬಂದವರಾಗಿರುವುದರಿಂದ ನಿಜಕ್ಕೂ ನಮಗೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ.
ಕೇಂದ್ರ ಸರ್ಕಾರದ ವಕೀಲರಾಗಿ ವೃತ್ತಿಪರ ಕರ್ತವ್ಯಗಳಿಗೆ ಹಾಜರಾಗುವುದರ ಜೊತೆಗೆ ಸಮಾಜದ ಸಕಾರಾತ್ಮಕ ಬೆಳವಣಿಗೆಗೆ ತನ್ನ ಸಮಯ ಮತ್ತು ಶಕ್ತಿಯನ್ನು ವ್ಯಯಿಸುವ ಯುವಕನಿಗೆ ನಮ್ಮ ಬೆಂಬಲ ಮತ್ತು ಪ್ರೋತ್ಸಾಹದ ಅಗತ್ಯವಿದೆ, ಮೋಹನ್ ಕುಮಾರ್ ದಾನಪ್ಪ ಅವರ ಮುಂದಿನ ಪ್ರಯತ್ನಗಳಲ್ಲಿ ಅಗತ್ಯ ಆರ್ಥಿಕ ನೆರವು ಮತ್ತು ಬೆಂಬಲವನ್ನು ನೀಡುವ ಮೂಲಕ ಕಾರ್ಪೊರೇಟ್ ವಲಯ ಸೇರಿದಂತೆ ಸಂಬಂಧಿಸಿದ ಎಲ್ಲಾರು ಬೆಂಬಲಿಸಲು ನಾನು ವಿನಂತಿಸುತ್ತೇನೆ. ಅವರ ವೈಶಿಷ್ಟ್ಯದ ಪ್ರಯತ್ನಗಳಲ್ಲಿ ಯಶಸ್ಸು ಸಿಗಲೆಂದು ಕರ್ನಾಟಕ ಉಚ್ಚ ನ್ಯಾಯಾಲಯದ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ರಾದ ಎಂ.ಬಿ. ನರಗುಂದ್ ರವರು ಅಭಿನಂದಿಸಿ ಪ್ರಶಂಸಿಸಿದ್ದಾರೆ!